1 ಅರಸುಗಳು 16:1 - ಪರಿಶುದ್ದ ಬೈಬಲ್1 ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನೊಂದಿಗೆ ಮಾತನಾಡಿ ರಾಜನಾದ ಬಾಷನ ವಿರುದ್ಧವಾಗಿ ಹೀಗೆ ಹೇಳಿದನು: ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆಗ ಯೆಹೋವನು ಹನಾನೀಯನ ಮಗನಾದ ಯೇಹುವಿನ ಮುಖಾಂತರವಾಗಿ ಅವನಿಗೆ ಹೇಳಿದ್ದೇನೆಂದರೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಆಗ ಸರ್ವೇಶ್ವರಸ್ವಾಮಿ ಹನಾನೀಯನ ಮಗ ಯೇಹುವಿನ ಮುಖಾಂತರ ಬಾಷನಿಗೆ ಹೀಗೆ ಹೇಳಿಸಿದರು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆಗ ಯೆಹೋವನು ಹನಾನೀಯ ಮಗನಾದ ಯೇಹುವಿನ ಮುಖಾಂತರವಾಗಿ ಅವನಿಗೆ ಹೇಳಿಸಿದ್ದೇನಂದರೆ - ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಬಾಷನಿಗೆ ವಿರೋಧವಾಗಿ ಹನಾನೀಯ ಮಗ ಯೇಹುವಿಗೆ ಯೆಹೋವ ದೇವರ ವಾಕ್ಯ ಬಂತು, ಅಧ್ಯಾಯವನ್ನು ನೋಡಿ |
ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.
ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.