1 ಅರಸುಗಳು 15:4 - ಪರಿಶುದ್ದ ಬೈಬಲ್4 ಯೆಹೋವನು ದಾವೀದನನ್ನು ಪ್ರೀತಿಸಿದ್ದರಿಂದ ಅವನಿಗೋಸ್ಕರ ಅಬೀಯಾಮನಿಗೆ ಜೆರುಸಲೇಮಿನಲ್ಲಿ ರಾಜ್ಯವನ್ನು ದಯಪಾಲಿಸಿದನು; ಅವನಿಗೆ ಮಗನನ್ನು ಅನುಗ್ರಹಿಸಿದನು; ಜೆರುಸಲೇಮ್ ಸುರಕ್ಷಿತವಾಗಿರುವಂತೆ ಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಆದರೂ ಹಿತ್ತಿಯನಾದ ಊರೀಯನ ವಿಷಯದ ಹೊರತಾಗಿ ಬೇರೆ ಯಾವ ವಿಷಯದಲ್ಲಿಯೂ ತನ್ನ ಆಜ್ಞೆಗಳನ್ನು ಮೀರದೆ ಜೀವದಿಂದಿರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ ಯೆಹೋವನು ಯೆರೂಸಲೇಮಿನಲ್ಲಿರುವ ಅವನ ದೀಪವನ್ನು ಆರಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟರೆ, ಬೇರೆ ಯಾವ ವಿಷಯದಲ್ಲೂ ತಮ್ಮ ಆಜ್ಞೆಯನ್ನು ಮೀರದೆ, ಜೀವದಿಂದಿರುವವರೆಗೂ ತಮ್ಮ ಚಿತ್ತಕ್ಕನುಸಾರ ನಡೆದ ದಾವೀದನ ನಿಮಿತ್ತ, ಸರ್ವೇಶ್ವರಸ್ವಾಮಿ ಜೆರುಸಲೇಮಿನಲ್ಲಿನ ಇವನ ದೀಪವನ್ನು ಆರಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆದರೂ ಹಿತ್ತಿಯನಾದ ಊರೀಯನ ವಿಷಯ ಹೊರತಾಗಿ ಬೇರೆ ಯಾವ ವಿಷಯದಲ್ಲಿಯೂ ತನ್ನ ಆಜ್ಞೆಯನ್ನು ಮೀರದೆ ಜೀವದಿಂದಿರುವವರೆಗೂ ತನ್ನ ಚಿತ್ತಕ್ಕನುಸಾರನಾಗಿ ನಡೆದ ದಾವೀದನ ನಿವಿುತ್ತವಾಗಿ ಯೆಹೋವನು ಯೆರೂಸಲೇವಿುನಲ್ಲಿನ ಇವನ ದೀಪವನ್ನು ಆರಿಸಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವನ ತರುವಾಯ ಅವನ ಮಗನನ್ನು ನೇಮಿಸುವುದಕ್ಕೂ, ಯೆರೂಸಲೇಮನ್ನು ಸ್ಥಿರಪಡಿಸುವುದಕ್ಕೂ, ತನ್ನ ದೇವರಾದ ಯೆಹೋವ ದೇವರು ದಾವೀದನ ನಿಮಿತ್ತ ಯೆರೂಸಲೇಮಿನಲ್ಲಿ ಅವನಿಗೆ ದೀಪವನ್ನು ಉಳಿಸಿದರು. ಅಧ್ಯಾಯವನ್ನು ನೋಡಿ |