1 ಅರಸುಗಳು 15:12 - ಪರಿಶುದ್ದ ಬೈಬಲ್12 ಆ ಕಾಲದಲ್ಲಿ, ಇತರ ದೇವರುಗಳ ಸೇವೆಗೋಸ್ಕರ ತಮ್ಮ ದೇಹಗಳನ್ನು ಲೈಂಗಿಕವಾಗಿ ಮಾರಾಟ ಮಾಡುತ್ತಿದ್ದ ಜನರು ಅಲ್ಲಿದ್ದರು. ಆ ಜನರು ದೇಶವನ್ನು ಬಿಟ್ಟುಹೋಗುವಂತೆ ಅವನು ಬಲವಂತ ಮಾಡಿದನು. ಆಸನು ತನ್ನ ಪೂರ್ವಿಕರು ನಿರ್ಮಿಸಿದ ವಿಗ್ರಹಗಳನ್ನು ನಿರ್ಮೂಲಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಅವನು ವಿಟರನ್ನು ದೇಶದಿಂದ ಹೊರಡಿಸಿ, ತನ್ನ ಹಿರಿಯರು ಮಾಡಿಸಿಟ್ಟ ವಿಗ್ರಹಗಳನ್ನೆಲ್ಲಾ ತೆಗೆದುಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ವೇಶ್ಯೆಯರಾಗಿ ವರ್ತಿಸುತ್ತಿದ್ದ, ಹೆಂಗಸರು ಹಾಗು ಗಂಡಸರನ್ನೆಲ್ಲಾ ನಾಡಿನಿಂದ ಹೊರಡಿಸಿ ತನ್ನ ಹಿರಿಯರು ಮಾಡಿಸಿಟ್ಟಿದ್ದ ವಿಗ್ರಹಗಳನ್ನೆಲ್ಲಾ ತೆಗೆದು ಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ದೇವದಾಸ ದೇವದಾಸಿಯರನ್ನು ದೇಶದಿಂದ ಹೊರಡಿಸಿ ತನ್ನ ಹಿರಿಯರು ಮಾಡಿಸಿಟ್ಟಿದ್ದ ವಿಗ್ರಹಗಳನ್ನೆಲ್ಲಾ ತೆಗೆದು ಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಅವನು ಪೂಜಾ ಸ್ಥಳದ ಪುರುಷಗಾಮಿಗಳನ್ನು ದೇಶದಲ್ಲಿಂದ ಹೊರಡಿಸಿ, ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು. ಅಧ್ಯಾಯವನ್ನು ನೋಡಿ |