1 ಅರಸುಗಳು 12:32 - ಪರಿಶುದ್ದ ಬೈಬಲ್32 ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್‌ನಲ್ಲಿಯೇ ಆರಿಸಿಕೊಂಡನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಅವನು ಎಂಟನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ, “ಬೇತೇಲಿನಲ್ಲಿ ಯೆಹೂದ ದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡೆಯಬೇಕು” ಎಂದು ಅಪ್ಪಣೆ ಮಾಡಿ, ತಾನು ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ಯಜ್ಞವೇದಿಯ ಮೇಲೆ ಯಜ್ಞ ಮಾಡಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ, ನಾಡಿನ ಜಾತ್ರೆಗೆ ಸಮನಾದ ಜಾತ್ರೆ ಬೇತೇಲಿನಲ್ಲಿ ನಡೆಯಬೇಕೆಂದು ಅಪ್ಪಣೆ ಮಾಡಿದನು. ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಹೋರಿಕರುಗಳ ಮೂರ್ತಿಗಳಿಗೆ, ಪೀಠದ ಮೇಲೆ ಬಲಿ ಅರ್ಪಿಸಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ ಬೇತೇಲಿನಲ್ಲಿ ಯೆಹೂದದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡೆಯಬೇಕೆಂದು ಅಪ್ಪಣೆಮಾಡಿ ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ವೇದಿಯ ಮೇಲೆ ಯಜ್ಞಮಾಡಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇವಿುಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಯಾರೊಬ್ಬಾಮನು ಎಂಟನೆಯ ತಿಂಗಳ ಹದಿನೈದನೆಯ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ, ಪೀಠದ ಮೇಲೆ ಬಲಿಗಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿನಲ್ಲಿ ಮಾಡಿ, ಅವನು ರೂಪಿಸಿದ ಕರುಗಳ ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ನೇಮಿಸಿದ ಉನ್ನತ ಸ್ಥಳಗಳ ಯಾಜಕರನ್ನೇ ಇರಿಸಿದನು. ಅಧ್ಯಾಯವನ್ನು ನೋಡಿ |
ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.