Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 11:9 - ಪರಿಶುದ್ದ ಬೈಬಲ್‌

9 ಸೊಲೊಮೋನನು ಇಸ್ರೇಲಿನ ದೇವರಾದ ಯೆಹೋವನನ್ನು ಅನುಸರಿಸದೆ ಬೇರೆ ಕಡೆಗೆ ತಿರುಗಿಕೊಂಡನು. ಆದ್ದರಿಂದ ಯೆಹೋವನು ಸೊಲೊಮೋನನ ಮೇಲೆ ಕೋಪಗೊಂಡನು. ಯೆಹೋವನು ಎರಡು ಸಲ ಸೊಲೊಮೋನನಿಗೆ ದರ್ಶನವನ್ನು ನೀಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇಸ್ರಾಯೇಲ್ ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಸೊಲೊಮೋನನಿಗೆ ಇಸ್ರಯೇಲ್ ದೇವರಾದ ಸರ್ವೇಶ್ವರ ಎರಡು ಸಾರಿ ಕಾಣಿಸಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇಸ್ರಾಯೇಲ್‍ದೇವರಾದ ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷರಾಗಿದ್ದರೂ, ಅವನ ಹೃದಯವು ದೇವರಿಂದ ತಿರುಗಿ ಹೋದುದರಿಂದ, ಅವನ ಮೇಲೆ ಕೋಪಿಸಿಕೊಂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 11:9
20 ತಿಳಿವುಗಳ ಹೋಲಿಕೆ  

ಆಗ ಯೆಹೋವನು ಸೊಲೊಮೋನನಿಗೆ, ಈ ಮುಂಚೆ ಗಿಬ್ಯೋನ್ ಪಟ್ಟಣದಲ್ಲಿ ಪ್ರತ್ಯಕ್ಷನಾದಂತೆ ಮತ್ತೆ ಪ್ರತ್ಯಕ್ಷನಾದನು.


ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.


ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು. ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು.


ಯೆಹೋವನು ಆರೋನನನ್ನು ನಾಶಪಡಿಸುವಷ್ಟು ಕೋಪೋದ್ರಿಕ್ತನಾಗಿದ್ದನು. ನಾನು ಅವನಿಗಾಗಿ ಪ್ರಾರ್ಥಿಸಿದೆನು.


ನೀವು ಹೋರೇಬ್ ಎಂಬ ಸೀನಾಯ್ ಬೆಟ್ಟದಲ್ಲಿ ಯೆಹೋವನನ್ನು ಬಹಳ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಷ್ಟು ಕೋಪಗೊಂಡಿದ್ದನು.


ಯಾಕೆಂದರೆ, ನನ್ನನ್ನು ಹಿಂಬಾಲಿಸದಂತೆ ಅವರು ನಿಮ್ಮ ಮಕ್ಕಳನ್ನು ಮಾರ್ಪಡಿಸುವರು. ಆಗ ನಿಮ್ಮ ಮಕ್ಕಳು ಅನ್ಯದೇವರುಗಳ ಸೇವೆಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಂಡು ನಿಮ್ಮನ್ನು ಬೇಗನೆ ನಾಶಮಾಡುವನು.


“ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು.


ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಹೊರಟುಹೋದನು.


ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನು ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು.


ದೇಮನು ಈ ಲೋಕವನ್ನು ಬಹಳ ಪ್ರೀತಿಸಿದನು. ಆದಕಾರಣವೇ ಅವನು ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೆ ಹೋದನು. ತೀತನು ದಲ್ಮಾತ್ಯಕ್ಕೆ ಹೋದನು.


“ಲೈಂಗಿಕಪಾಪ, ಗಡುಸಾದ ಮದ್ಯ ಮತ್ತು ಹೊಸ ದ್ರಾಕ್ಷಾರಸ ಇವುಗಳಿಂದ ವಿಚಾರಪ್ರಜ್ಞೆಯನ್ನು ಕಳೆದುಕೊಳ್ಳುವರು.


ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.


ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು.


ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.


ಸೊಲೊಮೋನನು ಅನ್ಯದೇಶಗಳ ತನ್ನ ಪತ್ನಿಯರಿಗೆಲ್ಲ ಇದೇ ರೀತಿ ಮಾಡಿದನು. ಅವನ ಪತ್ನಿಯರು ತಮ್ಮ ದೇವರುಗಳಿಗೆ ಧೂಪಹಾಕಿದರು ಮತ್ತು ಯಜ್ಞಗಳನ್ನು ಅರ್ಪಿಸಿದರು.


ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು