Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 11:25 - ಪರಿಶುದ್ದ ಬೈಬಲ್‌

25 ರೆಜೋನನು ಅರಾಮನ್ನು ಆಳಿದನು. ರೆಜೋನನು ಇಸ್ರೇಲಿನ ದ್ವೇಷಿಯಾದ್ದರಿಂದ, ಸೊಲೊಮೋನನ ಜೀವಮಾನದಲ್ಲೆಲ್ಲಾ ಅವನು ಇಸ್ರೇಲಿನ ಶತ್ರುವಾಗಿಯೇ ಮುಂದುವರಿದನು. ರೆಜೋನ್ ಮತ್ತು ಹದದನು ಇಸ್ರೇಲಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಾಯೇಲರಿಗೆ ಮಹಾಬಾಧಕನಾದ ಹದದನಲ್ಲದೆ ಅವನೂ ವೈರಿಯಾಗಿದ್ದನು. ಅವನು ಅರಾಮ್ ದೇಶದಲ್ಲಿ ಆಳುವವನಾಗಿ ಇಸ್ರಾಯೇಲರನ್ನು ಬಹಳವಾಗಿ ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಯೇಲರಿಗೆ ಮಹಾಬಾಧಕನಾದ ಹದದನ ಜೊತೆಗೆ ಇವನೂ ವೈರಿಯಾಗಿದ್ದನು. ಇವನು ಸಿರಿಯಾ ದೇಶದಲ್ಲಿ ಅರಸನಾಗಿ ಇಸ್ರಯೇಲರನ್ನು ಬಹಳವಾಗಿ ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಸೊಲೊಮೋನನ ಜೀವಮಾನದಲ್ಲೆಲ್ಲಾ ಇಸ್ರಾಯೇಲ್ಯರಿಗೆ ಮಹಾಬಾಧಕನಾದ ಹದದನಲ್ಲದೆ ಇವನೂ ವೈರಿಯಾಗಿದ್ದನು. ಇವನು ಅರಾಮ್‍ದೇಶದಲ್ಲಿ ಆಳುವವನಾಗಿ ಇಸ್ರಾಯೇಲ್ಯರನ್ನು ಬಹಳವಾಗಿ ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಹದದನು ಮಾಡಿದ ಕೇಡಿಗೆ ಹೊರತಾಗಿ ಇವನು ಸೊಲೊಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲಿಗೆ ಶತ್ರುವಾಗಿದ್ದನು. ಅವನು ಇಸ್ರಾಯೇಲನ್ನು ಹಗೆಮಾಡಿ, ಅರಾಮ್ ದೇಶವನ್ನು ಆಳುತ್ತಾ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 11:25
9 ತಿಳಿವುಗಳ ಹೋಲಿಕೆ  

ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು.


ಆತನು ತನ್ನ ಜನರ ಮೇಲೆ ಕೋಪಗೊಂಡನು; ಅವರ ವಿಷಯದಲ್ಲಿ ಬೇಸರಗೊಂಡನು!


ಆದರೆ ಈಗ ನನ್ನ ದೇವರಾದ ಯೆಹೋವನು ನನ್ನ ದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದ್ದಾನೆ. ಈಗ ನನಗೆ ಶತ್ರುಗಳೇ ಇಲ್ಲ. ನನ್ನ ಜನರಿಗೆ ಯಾವ ಅಪಾಯವೂ ಇಲ್ಲ.


ಅಹೀತೋಫೆಲನು ಅಬ್ಷಾಲೋಮನಿಗೆ, “ನಿಮ್ಮ ತಂದೆಯು, ಮನೆಯನ್ನು ಕಾಯುವುದಕ್ಕೆ ತನ್ನ ಕೆಲವು ಪತ್ನಿಯರನ್ನು ಇಲ್ಲಿ ಬಿಟ್ಟುಹೋಗಿದ್ದಾನೆ. ನೀನು ಅವರೊಂದಿಗೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ದ್ವೇಷಿಸುವನೆಂಬುದು ಇಸ್ರೇಲರಿಗೆಲ್ಲ ಆಗ ತಿಳಿಯುವುದು; ನಿನಗೆ ಮತ್ತಷ್ಟು ಬೆಂಬಲವನ್ನು ಕೊಡಲು ನಿನ್ನ ಜನರೆಲ್ಲರನ್ನು ಪ್ರೋತ್ಸಾಹಿಸಿದಂತಾಗುತ್ತದೆ” ಎಂದನು.


“ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ.


ಆದರೆ ಯಾಕೋಬನು ಸಿಮೆಯೋನನಿಗೆ ಮತ್ತು ಲೇವಿಗೆ, “ನೀವು ನನ್ನನ್ನು ಅಪಾಯಕ್ಕೆ ಗುರಿಮಾಡಿದಿರಿ. ಈ ದೇಶದಲ್ಲಿರುವ ಎಲ್ಲಾ ಕಾನಾನ್ಯರು ಮತ್ತು ಪೆರಿಜೀಯರು ನನ್ನನ್ನು ದ್ವೇಷಿಸಿ ನನಗೆ ವಿರೋಧವಾಗುವರು. ನನಗಿರುವ ಜನರು ಕೆಲವರೇ. ಈ ದೇಶದಲ್ಲಿರುವ ಜನರು ಒಟ್ಟಾಗಿ ಸೇರಿಕೊಂಡು ನನಗೆ ವಿರೋಧವಾಗಿ ಹೋರಾಡಿದರೆ ನಾನೂ ನನ್ನ ಜನರೆಲ್ಲರೂ ನಾಶವಾಗುವೆವು” ಎಂದು ಹೇಳಿದನು.


ದಾವೀದನು ಚೋಬದ ಸೈನ್ಯವನ್ನು ಸೋಲಿಸಿದ ಬಳಿಕ, ರೆಜೋನನು ಕೆಲವು ಜನರನ್ನು ಒಟ್ಟುಗೂಡಿಸಿಕೊಂಡು, ಆ ಕಿರುಸೇನೆಗೆ ತಾನೇ ನಾಯಕನಾದನು. ರೆಜೋನನು ದಮಸ್ಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ರೆಜೋನನು ದಮಸ್ಕದ ರಾಜನಾದನು.


ಸೊಲೊಮೋನನ ಸೇವಕರಲ್ಲಿ ನೆಬಾಟನ ಮಗನಾದ ಯಾರೊಬ್ಬಾಮನೂ ಒಬ್ಬನಾಗಿದ್ದನು. ಯಾರೊಬ್ಬಾಮನು ಎಫ್ರಾಯೀಮ್ ಕುಲದವನು, ಅವನು ಚರೇದ ಪಟ್ಟಣದವನು. ಯಾರೊಬ್ಬಾಮನ ತಾಯಿಯ ಹೆಸರು ಜೆರೂಗ, ಆಕೆ ವಿಧವೆಯಾಗಿದ್ದಳು. ಯಾರೊಬ್ಬಾಮನು ರಾಜನ ವಿರುದ್ಧ ತಿರುಗಿಬಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು