Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 10:22 - ಪರಿಶುದ್ದ ಬೈಬಲ್‌

22 ರಾಜನಾದ ಸೊಲೊಮೋನನ ಹತ್ತಿರ ಅನೇಕ ಸರಕು ಸಾಗಣಿಕೆಯ ಹಡಗುಗಳಿದ್ದವು. ಅವನು ಅವುಗಳನ್ನು ಇತರ ದೇಶಗಳಲ್ಲಿನ ವ್ಯಾಪಾರಕ್ಕಾಗಿ ಕಳುಹಿಸುತ್ತಿದ್ದನು. ಇವು ಹೀರಾಮನ ಹಡಗುಗಳು. ಈ ಹಡಗುಗಳು ಬಂಗಾರ, ಬೆಳ್ಳಿ, ದಂತ ಮತ್ತು ಪ್ರಾಣಿಗಳನ್ನು ಹೊಸದಾಗಿ ತುಂಬಿಕೊಂಡು ಮೂರು ವರ್ಷಕ್ಕೊಮ್ಮೆ ಹಿಂದಿರುಗುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷಿಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ಕಪಿ, ನವಿಲು ಇವುಗಳನ್ನು ತರುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರುಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ಕಪಿ, ನವಿಲು ಇವುಗಳನ್ನು ತರುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಹೀರಾಮನ ಹಡಗುಗಳ ಜೊತೆಯಲ್ಲಿ ಅರಸನ ಹಡಗುಗಳು ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 10:22
21 ತಿಳಿವುಗಳ ಹೋಲಿಕೆ  

ರಾಜನಾದ ಯೆಹೋಷಾಫಾಟನು ಸರಕು ಸಾಗಿಸುವ ಹಡಗುಗಳನ್ನು ತಯಾರಿಸಿದನು. ಯೆಹೋಷಾಫಾಟನು ಓಫೀರ್ ದೇಶದಿಂದ ಬಂಗಾರವನ್ನು ತರುವುದಕ್ಕಾಗಿ ಈ ಹಡಗುಗಳನ್ನು ಕಳುಹಿಸಿದನು. ಆದರೆ ಆ ಹಡಗುಗಳು ತಮ್ಮ ಸ್ವಂತ ಬಂದರಾದ ಎಚ್ಯೋನ್ಗೆಬೆರಿನಲ್ಲಿ ನಾಶವಾದವು. ಅವು ಓಫೀರ್ ದೇಶವನ್ನು ಮುಟ್ಟಲೇ ಇಲ್ಲ.


ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ. ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.


ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ ನೀನು ಅವರನ್ನು ನಾಶಮಾಡಿದೆ.


ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್.


ಅವರಲ್ಲಿ ಕೆಲವರಿಗೆ ನಾನು ಗುರುತು ಹಾಕುವೆನು. ನಾನು ಅವರನ್ನು ರಕ್ಷಿಸುವೆನು. ರಕ್ಷಿಸಲ್ಪಟ್ಟ ಕೆಲವರನ್ನು ನಾನು ತಾರ್ಷೀಷ್, ಲಿಬ್ಯ, ಲೂದ್, ತೂಬಾಲ್, ಗ್ರೀಸ್ ಮತ್ತು ದೂರದೇಶಗಳಿಗೆ ಕಳುಹಿಸುವೆನು. ಅಲ್ಲಿಯ ಜನರು ನನ್ನ ಬೋಧನೆಯನ್ನು ಎಂದೂ ಕೇಳಿರಲಿಲ್ಲ. ಅವರು ನನ್ನ ಮಹಿಮೆಯನ್ನು ಎಂದೂ ಕಂಡಿರಲಿಲ್ಲ. ಆದ್ದರಿಂದ ರಕ್ಷಿಸಲ್ಪಟ್ಟ ಜನರು ನನ್ನ ಮಹಿಮೆಯನ್ನು ಅವರಿಗೆ ತಿಳಿಸುವರು.


ದೂರ ಪ್ರಾಂತ್ಯಗಳು ನನಗಾಗಿ ಕಾದಿವೆ. ದೊಡ್ಡ ಸರಕು ಸಾಗಿಸುವ ಹಡಗುಗಳು ಹೊರಡಲು ತಯಾರಾಗಿವೆ. ಈ ಹಡಗುಗಳು ದೂರ ಪ್ರಾಂತ್ಯದಲ್ಲಿರುವ ನಿನ್ನ ಮಕ್ಕಳನ್ನು ಕರೆತರಲು ತಯಾರಾಗಿವೆ. ಅವರು ಬೆಳ್ಳಿಬಂಗಾರಗಳನ್ನು ತಮ್ಮೊಂದಿಗೆ ತಂದು ಇಸ್ರೇಲಿನ ಪರಿಶುದ್ಧನಾದ ಯೆಹೋವನನ್ನು ಘನಪಡಿಸುವರು. ಯೆಹೋವನು ನಿನಗೆ ಆಶ್ಚರ್ಯಕರವಾದ ಸಂಗತಿಗಳನ್ನು ಮಾಡುವನು.


ತಾರ್ಷೀಷಿನ ಹಡಗಿನವರೇ, ನೀವು ಊರಿಗೆ ಹಿಂತಿರುಗಿರಿ. ಸಮುದ್ರವನ್ನು ಸಣ್ಣ ನದಿಯೋ ಎಂಬಂತೆ ದಾಟಿರಿ. ಯಾರೂ ನಿಮ್ಮನ್ನು ನಿಲ್ಲಿಸಲಾರರು.


ಹಡಗುಗಳೇ, ನೀವು ತಾರ್ಷೀಷಿಗೆ ಹಿಂದಿರುಗಿರಿ! ಸಮುದ್ರ ತೀರದಲ್ಲಿ ವಾಸಿಸುವವರಾದ ನೀವು ದುಃಖಿಸಬೇಕು!


ತೂರಿನ ವಿಷಯವಾಗಿ ದುಃಖಕರವಾದ ಸಂದೇಶ: “ತಾರ್ಷೀಷಿನ ಹಡಗುಗಳೇ, ದುಃಖಿಸಿರಿ! ನಿಮ್ಮ ರೇವು ಕೆಡವಲ್ಪಟ್ಟಿದೆ.” ಕಿತ್ತಿಮಿನಿಂದ ಹೊರಟ ಹಡಗುಗಳಿಗೆ ಈ ವಾರ್ತೆಯು ತಲುಪಿತು.


ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.


ರಾಜನಾದ ಸೊಲೊಮೋನನ ಬಳಿಯಲ್ಲಿ ತಾರ್ಷೀಷಿಗೆ ಹೋಗಲು ಹಡಗುಗಳಿದ್ದವು. ಹೂರಾಮನ ನಾವಿಕರು ಅವುಗಳನ್ನು ನಡಿಸಿದರು. ಮೂರು ವರ್ಷಕ್ಕೊಮ್ಮೆ ಹಡಗುಗಳು ತಾರ್ಷೀಷಿನಿಂದ ಹಿಂದಿರುಗುತ್ತಿದ್ದವು. ಅವು ಚಿನ್ನ, ಬೆಳ್ಳಿ, ದಂತ, ಕೋತಿ ಮತ್ತು ನವಿಲುಗಳನ್ನು ಸೊಲೊಮೋನನಿಗೆ ತರುತ್ತಿದ್ದವು.


ಯೆಹೋವನಿಗೆ ವಿಧೇಯನಾಗಲು ಯೋನನು ಇಷ್ಟಪಡದೆ ಆತನಿಂದ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿ ಯೊಪ್ಪಕ್ಕೆ ಹೋದನು. ಅಲ್ಲಿ ಬಹುದೂರದ ಪಟ್ಟಣವಾದ ತಾರ್ಷೀಷಿಗೆ ಹೋಗುವ ಹಡಗು ಹೊರಡಲು ಸಿದ್ಧವಾಗಿತ್ತು. ಅವನು ಪ್ರಯಾಣದರವನ್ನು ಕೊಟ್ಟು ಹಡಗನ್ನು ಹತ್ತಿದನು. ಆ ಜನರೊಂದಿಗೆ ತಾರ್ಷೀಷಿಗೆ ಪ್ರಯಾಣಮಾಡಿ ಯೆಹೋವನಿಂದ ದೂರಹೋಗಬೇಕೆಂಬುದೇ ಅವನ ಬಯಕೆಯಾಗಿತ್ತು.


ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು.


“‘ತಾರ್ಷೀಷ್ ನಿನ್ನ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸ ಲೋಹಗಳನ್ನು ಕೊಟ್ಟು ನಿನ್ನಿಂದ ವಸ್ತುಗಳನ್ನು ಕೊಂಡುಕೊಂಡರು.


“ಉಷ್ಟ್ರಪಕ್ಷಿಯು ಸಂತೋಷದಿಂದ ತನ್ನ ರೆಕ್ಕೆಗಳನ್ನು ಬಡಿದಾಡುವುದು. ಆದರೆ ಅದರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳಿಗೆ ಸರಿಹೋಲುವುದಿಲ್ಲ.


ರಾಜನಾದ ಸೊಲೊಮೋನನು ವಿಶಾಲವಾದ ದಂತದ ಸಿಂಹಾಸನವನ್ನು ಸಹ ಮಾಡಿಸಿದನು. ಅವನು ಅಪ್ಪಟ ಚಿನ್ನದ ತಗಡನ್ನು ಅದಕ್ಕೆ ಹೊದಿಸಿದನು.


ರಾಜನಾದ ಸೊಲೊಮೋನನು ಏಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಸಹ ನಿರ್ಮಿಸಿದನು. ಈ ಪಟ್ಟಣವು ಎದೋಮ್ ದೇಶದಲ್ಲಿ ಕೆಂಪು ಸಮುದ್ರತೀರದ ಏಲೋತಿನ ಹತ್ತಿರದಲ್ಲಿದೆ.


ಸೊಲೊಮೋನನ ಬಟ್ಟಲುಗಳು ಮತ್ತು ಲೋಟಗಳು ಬಂಗಾರದಿಂದ ತಯಾರಿಸಲಾಗಿದ್ದವು. “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿದ್ದ ಎಲ್ಲಾ ಆಯುಧಗಳನ್ನು ಅಪ್ಪಟ ಚಿನ್ನದಿಂದ ಮಾಡಿದ್ದರು. ಅರಮನೆಯ ಯಾವ ವಸ್ತುವನ್ನೂ ಬೆಳ್ಳಿಯಿಂದ ಮಾಡಿರಲಿಲ್ಲ. ಜನರು ಬೆಳ್ಳಿಯನ್ನು ಅಮೂಲ್ಯವೆಂದು ಯೋಚಿಸದಷ್ಟು ಬಂಗಾರವು ಸೊಲೊಮೋನನ ಕಾಲದಲ್ಲಿತ್ತು!


ರೋಧೆ ದ್ವೀಪದ ಜನರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ನೀನು ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡಿದಿ. ಜನರು ದಂತವನ್ನೂ ಬೀಟೆ ಮರಗಳನ್ನೂ ತಂದು ನಿನ್ನೊಂದಿಗೆ ವ್ಯಾಪಾರ ಮಾಡಿದರು.


ಇಸ್ರೇಲಿನ ರಾಜನಾದ ಅಹಜ್ಯನು ಯೆಹೋಷಾಫಾಟನಿಗೆ ಸಹಾಯಮಾಡಲು ಹೋದನು. ಅಹಜ್ಯನು ಆ ಹಡಗುಗಳಲ್ಲಿ ತನ್ನ ಸ್ವಂತ ನಾವಿಕರಲ್ಲಿ ಕೆಲವರನ್ನು ಯೆಹೋಷಾಫಾಟನ ಜನರೊಂದಿಗೆ ಕಳುಹಿಸುತ್ತೇನೆಂದು ಯೆಹೋಷಾಫಾಟನಿಗೆ ತಿಳಿಸಿದನು. ಆದರೆ ಯೆಹೋಷಾಫಾಟನು ಅಹಜ್ಯನ ಜನರನ್ನು ಸ್ವೀಕರಿಸಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು