1 ಅರಸುಗಳು 1:42 - ಪರಿಶುದ್ದ ಬೈಬಲ್42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201942 ಆಗ ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, “ಬಾ ನೀನು ಯೋಗ್ಯ ಪುರುಷನೂ, ಶುಭವರ್ತಮಾನವನ್ನು ತರುವವನೂ ಆಗಿರುತ್ತೀ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)42 ಯಾಜಕ ಎಬ್ಯಾತಾರನ ಮಗ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ, “ನಿನ್ನಂಥ ಯೋಗ್ಯಪುರುಷ ಶುಭಸಮಾಚಾರವನ್ನೇ ತಂದಿರಬೇಕು, ಒಳಗೆ ಬಾ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)42 ಯಾಜಕನಾದ ಎಬ್ಯಾತಾರನ ಮಗ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು ಅವನಿಗೆ - ಬಾ, ನೀನು ಯೋಗ್ಯಪುರುಷನೂ ಶುಭವರ್ತಮಾನತರುವವನೂ ಆಗಿರುತ್ತೀ ಅಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ42 ಅವನು ಇನ್ನೂ ಮಾತನಾಡುತ್ತಿರುವಾಗ, ಯಾಜಕನಾಗಿರುವ ಅಬಿಯಾತರನ ಮಗ ಯೋನಾತಾನನು ಬಂದನು. ಅದೋನೀಯನು ಅವನಿಗೆ, “ಒಳಗೆ ಬಾ. ಏಕೆಂದರೆ ನೀನು ಯೋಗ್ಯ ಮನುಷ್ಯನೂ, ಒಳ್ಳೆಯ ಸಮಾಚಾರ ತರುವವನೂ ಆಗಿರುತ್ತೀ?” ಎಂದನು. ಅಧ್ಯಾಯವನ್ನು ನೋಡಿ |