Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 9:14 - ಕನ್ನಡ ಸಮಕಾಲಿಕ ಅನುವಾದ

14 ಯೆಹೋವ ದೇವರೇ, ಅವರಿಗೆ ಕೊಡಿರಿ. ಅವರಿಗೆ ನೀವು ಏನು ಕೊಡುತ್ತೀರಿ? ಗರ್ಭ ಸ್ರಾವ, ಗರ್ಭವನ್ನು ಮತ್ತು ಬತ್ತಿದ ಸ್ತನಗಳನ್ನು ಅವರಿಗೆ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತೀಯೋ? ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಸರ್ವೇಶ್ವರಾ, ಇವರಿಗೆ ಏನನ್ನು ವಿಧಿಸುವೆ? ಇವರಿಗೆ ಎಂಥ ಗತಿಯನ್ನು ಬರಮಾಡುವೆ? ಅವರ ಮಹಿಳೆಯರಿಗೆ ಗರ್ಭಪಾತವಾಗಲಿ! ಅವರ ಮೊಲೆ ಬತ್ತಿಹೋಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 (ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತಿಯೋ? ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೋವನೇ, ನಿನ್ನ ಇಚ್ಛೆಯ ಪ್ರಕಾರ ಅವರಿಗೆ ಕೊಡು. ಮಗುವನ್ನು ಹೆರಲಾರದ ಗರ್ಭವನ್ನು ಅವರಿಗೆ ಕೊಡು. ಮೊಲೆಹಾಲು ಉಣಿಸಲಾರದ ಸ್ತನಗಳನ್ನು ಅವರಿಗೆ ಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 9:14
11 ತಿಳಿವುಗಳ ಹೋಲಿಕೆ  

ಏಕೆಂದರೆ, ‘ಇಗೋ, ಬಂಜೆಯರೂ ಹೆರದವರೂ ಹಾಲು ಕುಡಿಸದವರೂ ಧನ್ಯರು,’ ಎಂದು ಜನರು ಹೇಳುವ ದಿವಸಗಳು ಬರುತ್ತವೆ.


ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ.


ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! ದೇಶದಲ್ಲಿ ಈ ಜನರು ಮಹಾ ವಿಪತ್ತಿಗೂ ಕೋಪಕ್ಕೂ ಗುರಿಯಾಗುವರು.


ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!


ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!


ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ. ಅವರ ಬೇರು ಒಣಗಿಹೋಗಿದೆ, ಅವರು ಫಲವನ್ನು ಕೊಡುವುದಿಲ್ಲ, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.


ಎಫ್ರಾಯೀಮ್ ಟೈರ್‌ನಂತಹ ಸುಂದರವಾದ ಸ್ಥಳದಲ್ಲಿ ನೆಡುವುದನ್ನು ನಾನು ಕಂಡೆನು. ಆದರೆ ಎಫ್ರಾಯೀಮ್ ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು.”


ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು. ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ.


ಅವರ ಹೋರಿಯು ಅಭಿವೃದ್ಧಿಯಾಗಿರುವುದು; ಅವರ ಆಕಳು ತಪ್ಪದೆ ಈಯುವುದು.


ಗರ್ಭ ಸ್ರಾವವಾಗಲಿ, ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವುದಿಲ್ಲ. ನಾನು ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ಅನುಗ್ರಹಿಸುವೆನು.


ನಿಮ್ಮ ಗರ್ಭದ ಫಲಕ್ಕೂ ಪಶುಗಳ ಹಿಂಡಿಗೂ, ಕುರಿಗಳ ಮಂದೆಗಳಿಗೂ ಶಾಪ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು