Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 9:1 - ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ ಸಂತೋಷ ಪಡಬೇಡ. ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. ಎಲ್ಲಾ ಧಾನ್ಯದ ಕಣಗಳಲ್ಲಿ ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲ್, ಹರ್ಷಿಸದಿರು; ಇತರ ರಾಷ್ಟ್ರಗಳೊಡನೆ ಆನಂದಿಸದಿರು. ನಿನ್ನ ದೇವರನ್ನು ತೊರೆದು ವ್ಯಭಿಚಾರ ಮಾಡಿರುವೆ. ಇತರರ ಕಣಗಳಿಂದ ದೊರಕುವ ಕಾಳು ನಿನ್ನ ವ್ಯಭಿಚಾರದ ಸಂಭಾವನೆಯೆಂದು ಹಂಬಲಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಸ್ರಾಯೇಲೇ, ಜನಾಂಗಗಳಂತೆ ವಿುತಿಮೀರಿ ಉಲ್ಲಾಸಿಸಬೇಡ; ನೀನು ನಿನ್ನ ದೇವರನ್ನು ಬಿಟ್ಟು ಸೂಳೆತನ ನಡಿಸಿದ್ದೀ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇಸ್ರೇಲೇ, ಇತರ ಜನಾಂಗಗಳವರಂತೆ ಹಬ್ಬವನ್ನು ಆಚರಿಸಬೇಡ, ಉಲ್ಲಾಸಗೊಳ್ಳಬೇಡ. ನೀನು ವೇಶ್ಯೆಯಂತೆ ವರ್ತಿಸಿ ನಿನ್ನ ದೇವರನ್ನು ತೊರೆದುಬಿಟ್ಟೆ. ಪ್ರತಿಯೊಂದು ಕಣದ ಮೇಲೆ ಲೈಂಗಿಕ ಪಾಪವನ್ನು ನಡೆಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 9:1
24 ತಿಳಿವುಗಳ ಹೋಲಿಕೆ  

ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು.


ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.


ಆದರೆ ಸ್ವಂತ ಬಾಯಿಂದ ಹೊರಡುವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ. ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನಾರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ. ನಾವೂ, ನಮ್ಮ ತಂದೆಗಳೂ, ನಮ್ಮ ಅರಸರೂ, ನಮ್ಮ ಪ್ರಧಾನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ಮಾಡುವೆವು. ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.


ಧನಿಕರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.


ಆದರೆ ನೀವು ನಿಮ್ಮ ಹೊಗಳಿಕೆಯ ಯೋಜನೆಗಳಲ್ಲಿ ಹೆಮ್ಮೆಪಡುತ್ತೀರಿ. ಅಂಥಾ ಅಹಂಭಾವವೆಲ್ಲಾ ಕೆಟ್ಟದ್ದೆ.


ಏನೂ ಇಲ್ಲದಿದ್ದರಲ್ಲಿ ಸಂತೋಷ ಪಡುವವರೇ, ನೀವು ಹೆಚ್ಚಳ ಪಡುವುದು ಶೂನ್ಯವಾಗಿರುವುದರಲ್ಲಿಯೇ? “ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿಲ್ಲವೇ?” ಅಂದುಕೊಳ್ಳುತ್ತೀರಿ.


“ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ. ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.”


ಅವರು ಯೆಹೋವ ದೇವರಿಗೆ ಅಪನಂಬಿಗಸ್ತರಾಗಿದ್ದಾರೆ. ಅವರು ವ್ಯಭಿಚಾರದ ಮಕ್ಕಳನ್ನು ಪಡೆದಿದ್ದಾರೆ. ಅವರು ತಮ್ಮ ಅಮಾವಾಸ್ಯೆ ಹಬ್ಬಗಳನ್ನು ಆಚರಿಸಿದಾಗ, ಅವರ ಹೊಲಗಳು ನುಂಗಿಬಿಡಲಾಗುವವು.


“ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.


ತನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು, ಅವಳು ಹೇಳಿದ ಅವಳ ದ್ರಾಕ್ಷಿಬಳ್ಳಿಗಳನ್ನು, ಅವಳ ಅಂಜೂರದ ಮರಗಳನ್ನು ನಾನು ಹಾಳು ಮಾಡಿ, ಅವುಗಳನ್ನು ನಾನು ಕಾಡನ್ನಾಗಿ ಮಾಡುವೆನು. ಕಾಡುಮೃಗಗಳು ಅವುಗಳನ್ನು ನುಂಗುವವು.


ಸಂಹರಿಸಲು ಸಾಣೆಹಿಡಿದಿದೆ; ಮಿಂಚುವಂತೆ ಮಸೆಯಲಾಗಿದೆ. “ ‘ಹಾಗಾದರೆ ನನ್ನ ಮಗ ಯೆಹೂದದ ರಾಜದಂಡದಲ್ಲಿ ನಾವು ಸಂತೋಷ ಪಡಬಹುದೋ? ಅಂಥ ಪ್ರತಿಯೊಂದು ಬೆತ್ತವನ್ನೂ ಖಡ್ಗವು ತಿರಸ್ಕರಿಸುತ್ತದೆ.


“ ‘ “ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”


ಎದೋಮಿನ ಪುತ್ರಿಯೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು ಮತ್ತು ಸಂತೋಷಪಡು; ಆದರೆ ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವುದು. ನೀನು ಕುಡಿದು, ಬೆತ್ತಲೆಯಾಗಿರುವೆ.


ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ.


ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.


ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.


“ಹುಳಿಹಿಟ್ಟಿನ ರೊಟ್ಟಿಯನ್ನು ಹೋಮ ಮಾಡಿ, ಸ್ತೋತ್ರದ ಯಜ್ಞವನ್ನೂ ಅರ್ಪಿಸಿರಿ. ಕಾಣಿಕೆ ಕೊಟ್ಟದ್ದನ್ನು ಹೇಳಿಕೊಳ್ಳಿರಿ. ಇಸ್ರಾಯೇಲರೇ, ಹೀಗೆ ಮಾಡುವುದು ಇಷ್ಟವಾಗಿದೆ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು. ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು. ಹೀಗಿರುವುದರಿಂದ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ, ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ, ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


“ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು, ನಿನ್ನ ಬಂಧನಗಳನ್ನು ಹರಿದುಬಿಟ್ಟೆನು. ಆದರೆ, ‘ನಾನು ಸೇವೆಮಾಡುವುದಿಲ್ಲ!’ ಎಂದು ನೀನು ಹೇಳಿದೆ. ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೂ ನೀನು ವೇಶ್ಯೆಯಾಗಿ ನಡೆದಿದ್ದೀ.


“ ‘ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸೆಯಿಟ್ಟು, ನಿನ್ನ ಕೀರ್ತಿಯ ನಿಮಿತ್ತವಾಗಿ ವೇಶ್ಯೆಯಾದೆ. ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ವ್ಯಭಿಚಾರ ಮಾಡಿದೆ ಮತ್ತು ನಿನ್ನ ಸೌಂದರ್ಯ ಅವನದಾಯಿತು.


“ ‘ನೀನು ನಾಚಿಕೆಯಿಲ್ಲದ ವೇಶ್ಯೆಯಂತೆ ವರ್ತಿಸಿದಾಗ ನಾನು ಕೋಪದಿಂದ ತುಂಬಿದೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು