ಹೋಶೇಯ 5:1 - ಕನ್ನಡ ಸಮಕಾಲಿಕ ಅನುವಾದ1 “ಯಾಜಕರೇ, ಇದನ್ನು ನೀವು ಕೇಳಿರಿ; ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 “ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜವಂಶದವರೇ ಕಿವಿಗೊಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ವಿುಚ್ಪದಲ್ಲಿ ಉರುಲಾಗಿಯೂ ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 “ಯಾಜಕರೇ, ಇಸ್ರೇಲ್ ಜನಾಂಗವೇ, ಅರಸನ ಪರಿವಾರದವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಯಾಕೆಂದರೆ ನಿಮಗೆ ನ್ಯಾಯತೀರ್ಪು ಬಂದಿದೆ. “ಮಿಚ್ಪದಲ್ಲಿ ನೀವು ಉರುಲಿನಂತೆ ಇದ್ದಿರಿ. ತಾಬೋರಿನಲ್ಲಿ ನೆಲದ ಮೇಲೆ ಹರಡಿಸಿದ್ದ ಬಲೆಯಂತೆ ಇದ್ದಿರಿ. ಅಧ್ಯಾಯವನ್ನು ನೋಡಿ |
“ಮಗನು ತಂದೆಯನ್ನೂ, ದಾಸನು ಯಜಮಾನನನ್ನೂ ಸನ್ಮಾನಿಸುತ್ತಾನೆ. ಹಾಗಾದರೆ ನಾನು ತಂದೆಯಾಗಿದ್ದರೆ ನನ್ನ ಸನ್ಮಾನವೆಲ್ಲಿ? ನಾನು ಯಜಮಾನನಾಗಿದ್ದರೆ ನನಗೆ ತೋರಿಸುವ ಭಯಭಕ್ತಿಯೆಲ್ಲಿ?” “ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರು ನೀವೇ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಆದರೆ ನೀವು, ‘ನಿಮ್ಮ ಹೆಸರನ್ನು ಯಾವುದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆ?’ ಎಂದು ಕೇಳುತ್ತೀರಿ.”