Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 4:12 - ಕನ್ನಡ ಸಮಕಾಲಿಕ ಅನುವಾದ

12 ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನನ್ನ ಜನರು ಮರದ ತುಂಡನ್ನು ಹಿಡಿದು ಕಣಿ ಕೇಳುತ್ತಾರೆ; ಕೈಯಲ್ಲಿ ಹಿಡಿದ ದೊಣ್ಣೆಯಿಂದ ವಿವೇಕವಾಣಿಯನ್ನು ಪಡೆಯಲೆತ್ನಿಸುತ್ತಾರೆ. ವ್ಯಭಿಚಾರಗುಣ ಅವರನ್ನು ತಪ್ಪುದಾರಿಗೆ ಎಳೆದಿದೆ. ದೇವರ ಸದ್ಭಕ್ತಿಯನ್ನು ತೊರೆದು ಅವರು ಧರ್ಮಭ್ರಷ್ಠರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನನ್ನ ಜನರು ತಮ್ಮ ಮರದ ತುಂಡನ್ನು ಪ್ರಶ್ನೆ ಕೇಳುತ್ತಾರೆ, ಅವರ ಕೋಲು ಅವರಿಗೆ ಅರುಹನ್ನು ಉಂಟುಮಾಡುತ್ತದೆ; ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನನ್ನ ಜನರು ಮರದ ತುಂಡುಗಳಿಂದ ಸಲಹೆಗಳನ್ನು ಕೇಳುವರು. ಆ ಮರದ ತುಂಡುಗಳು ಅವರಿಗೆ ಉತ್ತರಿಸುವವು ಎಂದು ಅವರು ನೆನಸುತ್ತಾರೆ. ಯಾಕೆಂದರೆ, ವೇಶ್ಯೆಯರಂತೆ ಅವರು ಆ ಸುಳ್ಳು ದೇವರುಗಳನ್ನು ಹಿಂದಟ್ಟಿಕೊಂಡು ಹೋಗುವರು. ಅವರು ತಮ್ಮ ದೇವರುಗಳನ್ನು ಬಿಟ್ಟು ವೇಶ್ಯೆಯರಂತೆ ವರ್ತಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 4:12
25 ತಿಳಿವುಗಳ ಹೋಲಿಕೆ  

“ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.


ಅವರು ಮರಕ್ಕೆ, ‘ನೀನು ನನ್ನ ತಂದೆ,’ ಎಂದೂ ಕಲ್ಲಿಗೆ, ‘ನೀನು ನನ್ನನ್ನು ಹೆತ್ತಿದ್ದೀ,’ ಎಂದೂ ಹೇಳುತ್ತಾರಲ್ಲಾ. ಏಕೆಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ಅವರ ಕಷ್ಟಕಾಲದಲ್ಲಿ ಎದ್ದು, ‘ನಮ್ಮನ್ನು ರಕ್ಷಿಸು,’ ಎಂದು ಮೊರೆಯಿಡುವರು.


ಮರಕ್ಕೆ, ‘ಎಚ್ಚರವಾಗು!’ ಮೂಕವಾದ ಕಲ್ಲಿಗೆ, ‘ಎದ್ದೇಳು!’ ಎಂದು ಹೇಳುವವನಿಗೆ ಕಷ್ಟ! ಅದು ಮಾರ್ಗದರ್ಶನ ನೀಡುವುದೇ? ಅದು ಬಂಗಾರ, ಬೆಳ್ಳಿಯಿಂದ ಹೊದಿಸಿದ್ದಾರೆ. ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.”


ಆಗ ಯೆಹೋವ ದೇವರು ಮೋಶೆಗೆ, “ನೀನು ಮೃತನಾಗಿ, ನಿನ್ನ ಪಿತೃಗಳ ಸಂಗಡ ಸೇರುವಿ. ಈ ಜನರು ದೇವದ್ರೋಹಿಗಳಾಗಿ, ಅವರು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಪೂಜೆ ಮಾಡಿ, ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿದ ಒಡಂಬಡಿಕೆಯನ್ನು ಮೀರುವರು.


ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು, ಅದನ್ನು ನೋಡುವಾಗ, ಯೆಹೋವ ದೇವರ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರಮಾಡಿ, ನಿಮ್ಮ ಹೃದಯ ಹಾಗೂ ಇಚ್ಛೆಗನುಸಾರ ನಿಮ್ಮ ಕಣ್ಣುಗಳು ಜಾರತ್ವ ಮಾಡುವಂತೆ ಹಿಂಬಾಲಿಸದೆ ಇರುವಿರಿ.


ಒಬ್ಬ ಸುಳ್ಳುಗಾರನೂ ಮೋಸಗಾರನೂ ಬಂದು, ‘ನಿನಗೆ ದ್ರಾಕ್ಷಾರಸವೂ ಮದ್ಯಪಾನವೂ ಯಥೇಚ್ಛವಾಗಿ ದೊರೆಯುವುದೆಂದು ನಾನು ಪ್ರವಾದಿಸುವೆನು,’ ಎಂದು ಹೇಳಿದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.


ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ ಸಂತೋಷ ಪಡಬೇಡ. ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. ಎಲ್ಲಾ ಧಾನ್ಯದ ಕಣಗಳಲ್ಲಿ ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.


ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ.


ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ.


ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.


ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು, ಅಹಾಬನ ಮನೆಯವರು ದೇವದ್ರೋಹ ಮಾಡಿದಂತೆ, ಯೆಹೂದದವರನ್ನೂ, ಯೆರೂಸಲೇಮಿನ ನಿವಾಸಿಗಳನ್ನೂ ದ್ರೋಹ ಮಾಡಲು ಪ್ರೇರೇಪಿಸಿ, ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆಯವರಾದ ನಿನ್ನ ಸಹೋದರರನ್ನು ಕೊಂದುಹಾಕಿದ್ದರಿಂದ,


ಆಗ ನಾನು ಆ ಮನುಷ್ಯನಿಗೂ, ಅವನ ಕುಟುಂಬಕ್ಕೂ ವಿರೋಧವಾಗಿಯೂ, ವಿಮುಖವಾಗಿಯೂ ಇರುವೆನು. ಮೋಲೆಕನನ್ನು ಪೂಜೆ ಮಾಡಿದ್ದಕ್ಕಾಗಿ ಅವನನ್ನೂ, ದೇವದ್ರೋಹಿಗಳಾಗಿ ಅವನನ್ನು ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.


ಜಾರತ್ವ ಮಾಡುವಂತೆ ಅವರು ಇದುವರೆಗೆ ಪೂಜಿಸುತ್ತಿದ್ದ ಆ ಮೇಕೆ ದೇವತೆಗಳಿಗೆ ಇನ್ನೆಂದಿಗೂ ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಯಮ.’


ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.


ಅಸ್ಸೀರಿಯ ನಮ್ಮನ್ನು ರಕ್ಷಿಸುವುದಿಲ್ಲ. ನಾವು ಕುದುರೆಗಳ ಮೇಲೆ ಸವಾರಿ ಮಾಡುವುದಿಲ್ಲ. ನಮ್ಮ ಕೈಗಳಿಂದ ಉಂಟು ಮಾಡಿದವುಗಳಿಗೆ, ‘ನೀವು ನಮ್ಮ ದೇವರುಗಳೇ,’ ಎಂದು ನಾವು ಇನ್ನು ಮುಂದೆ ಹೇಳುವುದೇ ಇಲ್ಲ. ಏಕೆಂದರೆ ನಿಮ್ಮಲ್ಲಿ ದಿಕ್ಕಿಲ್ಲದವರಿಗೆ ಅನುಕಂಪ ದೊರೆಯುತ್ತದೆ.”


ಆಗ ಅವರು ಅವನಿಗೆ, “ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವುದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು,” ಎಂದರು.


ಇಸ್ರಾಯೇಲರನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಇದೆಲ್ಲವೂ ಆಯಿತು. ಅವರು ಬೇರೆ ದೇವರುಗಳನ್ನು ಆರಾಧಿಸಿದರು.


“ಸಮಾರ್ಯದ ಪ್ರವಾದಿಗಳಲ್ಲಿ ಅಸಹ್ಯಕರ ವಿಷಯವನ್ನು ನೋಡಿದ್ದೇನೆ. ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ, ನನ್ನ ಜನರಾದ ಇಸ್ರಾಯೇಲನ್ನು ತಪ್ಪುವಂತೆ ಮಾಡಿದ್ದಾರೆ.


“ ‘ “ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”


ಇಸ್ರಾಯೇಲಿನ ಮನೆತನದವರಲ್ಲಿ ಅತಿ ಭಯಂಕರವಾದ ಸಂಗತಿಯನ್ನು ನೋಡಿದೆನು. ಅಲ್ಲಿ ಎಫ್ರಾಯೀಮಿನ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಅಪವಿತ್ರವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು