Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 4:1 - ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಸ್ರಾಯೇಲ್ಯರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದಹಾಕಿದ್ದಾನೆ. ಏಕಂದರೆ ಪ್ರೀತಿ ಸತ್ಯತೆ ದೇವಜ್ಞಾನಗಳು ದೇಶದಲ್ಲಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇಸ್ರೇಲ್ ಜನರೇ, ಯೆಹೋವನ ಮಾತಿಗೆ ಕಿವಿಗೊಡಿರಿ! ಈ ದೇಶದಲ್ಲಿ ವಾಸಿಸುವ ಜನರ ವಿರುದ್ಧವಾಗಿ ಯೆಹೋವನು ತನ್ನ ವಾದವನ್ನು ಅವರ ಮುಂದಿಡುತ್ತಾನೆ. “ಈ ದೇಶದಲ್ಲಿರುವ ಜನರು ಯೆಹೋವನನ್ನು ನಿಜವಾಗಿಯೂ ತಿಳಿದಿಲ್ಲ. ಅವರು ಯೆಹೋವನಿಗೆ ಸತ್ಯವಂತರೂ ಅಲ್ಲ. ನಿಷ್ಠಾವಂತರೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 4:1
44 ತಿಳಿವುಗಳ ಹೋಲಿಕೆ  

“ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ. ನನ್ನನ್ನು ಅವರು ಅರಿಯರು; ಮೂರ್ಖ ಮಕ್ಕಳಾಗಿದ್ದಾರೆ, ಅವರು ಗ್ರಹಿಕೆಯಿಲ್ಲದವರು; ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ, ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.”


ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.


ಸ್ವಸ್ಥಚಿತ್ತರಾಗಿರಿ, ಪಾಪಮಾಡುವುದನ್ನು ನಿಲ್ಲಿಸಿರಿ. ಕೆಲವರಂತೂ ದೇವರನ್ನೇ ಅಲಕ್ಷ್ಯಮಾಡುವವರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕೆಂದು ನಾನು ಇದನ್ನು ಹೇಳುತ್ತೇನೆ.


ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.


ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.


ಭೂಮಿಯ ಅಂತ್ಯಗಳವರೆಗೆ ಘೋಷವು ಬರುವುದು. ಯೆಹೋವ ದೇವರಿಗೆ ಜನಾಂಗಗಳ ಸಂಗಡ ವ್ಯಾಜ್ಯವಿದೆ. ಅವರು ಎಲ್ಲಾ ಮನುಷ್ಯರ ಸಂಗಡ ನ್ಯಾಯಕ್ಕೆ ನಿಲ್ಲುವರು. ದುಷ್ಟರನ್ನು ಖಡ್ಗಕ್ಕೆ ಒಪ್ಪಿಸುವರು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


ಆದ್ದರಿಂದ ನಾನು, “ನಿಶ್ಚಯವಾಗಿ ಇವರು ಬಡವರು ಮತ್ತು ಬುದ್ಧಿಹೀನರು. ಏಕೆಂದರೆ, ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ಅರಿಯರು.


ರಾಷ್ಟ್ರಗಳೇ, ಕೇಳುವುದಕ್ಕೆ ಹತ್ತಿರ ಬನ್ನಿರಿ, ಕಿವಿಗೊಡಿರಿ. ಭೂಮಿಯೂ, ಅದರಲ್ಲಿರುವ ಸಮಸ್ತವೂ; ಲೋಕವೂ, ಅದರ ಎಲ್ಲಾ ಹುಟ್ಟುವಳಿಯೂ ಕೇಳಲಿ.


“ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.


ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕೇಳಲು ಇಷ್ಟ ಉಳ್ಳವರು ಕೇಳಲಿ.


ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಜಯ ಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.


ನೀವು ಅವರನ್ನು ಅರಿತುಕೊಂಡಿಲ್ಲ; ಆದರೆ ನಾನು ಅವರನ್ನು ಅರಿತಿದ್ದೇನೆ. ನಾನು ಅವರನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗುವೆನು. ಆದರೆ ನಾನು ಅವರನ್ನು ಅರಿತಿದ್ದೇನೆ. ಅವರ ಮಾತನ್ನು ಪಾಲಿಸುತ್ತೇನೆ.


ಹೀಗಿರುವುದರಿಂದ ನೀನು ಈಗ ಯೆಹೋವ ದೇವರ ವಾಕ್ಯವನ್ನು ಕೇಳು: ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ, ಇಸಾಕನ ಮನೆತನಕ್ಕೆ ವಿರೋಧವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವೆಯಲ್ಲಾ.


“ಯಾಜಕರೇ, ಇದನ್ನು ನೀವು ಕೇಳಿರಿ; ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ.


“ ‘ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವ ದೇವರ ವಾಗ್ದಾನವನ್ನು ಕೇಳು. ನಿನ್ನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಖಡ್ಗದಿಂದ ಸಾಯುವುದಿಲ್ಲ.


‘ಓ ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ಇಗೋ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುತ್ತೇನೆ. ಅದನ್ನು ಕೇಳುವವರೆಲ್ಲರ ಕಿವಿಗೆ ಜುಮ್ಮೆನ್ನುವುದು.


ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.


ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.


“ಏಕೆಂದರೆ, ಅವರಲ್ಲಿ ಚಿಕ್ಕವನು ಮೊದಲುಗೊಂಡು ದೊಡ್ಡವರತನಕ, ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರವರೆಗೆ ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.


ಇದರ ನಿಮಿತ್ತ ಭೂಮಿಯು ದುಃಖಿಸುವುದು. ಮೇಲಿರುವ ಆಕಾಶವು ಕಪ್ಪಾಗುವುದು. ಏಕೆಂದರೆ ನಾನು ಅದನ್ನು ಹೇಳಿದ್ದರಿಂದ ನಿಶ್ಚಯಿಸಿದ್ದೇನೆ. ಮಾನಸಾಂತರ ಪಡುವುದಿಲ್ಲ. ಇಲ್ಲವೆ ಅದರಿಂದ ಹಿಂದಿರುಗುವುದಿಲ್ಲ.”


ಓ ಯಾಕೋಬಿನ ಮನೆತನವೇ, ಇಸ್ರಾಯೇಲಿನ ಮನೆತನದ ಎಲ್ಲಾ ಕುಲಗಳೇ, ಯೆಹೋವ ದೇವರ ವಾಕ್ಯವನ್ನು ನೀವು ಕೇಳಿರಿ.


ಯೆಹೋವ ದೇವರ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, ‘ಯೆಹೋವ ದೇವರು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ’ ಎಂದು ಹೇಳಿದ್ದಾರಲ್ಲಾ. ಅವರಿಗಂತೂ ಅವಮಾನವಾಗುವುದು.


ಏಕೆಂದರೆ ಅದು ಯೆಹೋವ ದೇವರು ಮುಯ್ಯಿ ತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರುಷವು ಒದಗಿದೆ.


ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನರನ್ನು ಆಳುವ ಹಾಸ್ಯದ ಜನರಾದ ನೀವು ಯೆಹೋವ ದೇವರ ಮಾತನ್ನು ಕೇಳಿರಿ.


“ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷಿ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಸೊದೋಮಿನ ಅಧಿಪತಿಗಳೇ, ನೀವು ಯೆಹೋವ ದೇವರ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳೇ! ನಮ್ಮ ದೇವರ ನಿಯಮಕ್ಕೆ ಕಿವಿಗೊಡಿರಿ.


ಆಗ ಮೀಕಾಯನು, “ಆದ್ದರಿಂದ ಯೆಹೋವ ದೇವರ ವಾಕ್ಯವನ್ನು ಕೇಳು: ಯೆಹೋವ ದೇವರು ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡಿರುವುದನ್ನೂ ಆಕಾಶದ ಸಮಸ್ತ ಸೈನ್ಯವು ಅವರ ಬಲಗಡೆ, ಎಡಗಡೆ ಮತ್ತು ಸುತ್ತಲೂ ನಿಂತಿರುವುದನ್ನೂ ನಾನು ಕಂಡೆನು.


ನೀತಿಗೋಸ್ಕರ ಕರೆಯುವವನು ಯಾವನೂ ಇಲ್ಲ, ಸತ್ಯಕ್ಕೋಸ್ಕರ ನ್ಯಾಯ ವಿಚಾರಿಸುವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡುತ್ತಾರೆ. ಸುಳ್ಳನ್ನು ಮಾತನಾಡುತ್ತಾರೆ. ಕೇಡನ್ನು ಗರ್ಭಧರಿಸಿ, ಅಕ್ರಮವನ್ನು ಹೆರುತ್ತಾರೆ.


ಸಮಾಧಾನದ ಮಾರ್ಗವನ್ನೇ ಅವರು ಅರಿಯರು. ಅವರ ದಾರಿಗಳಲ್ಲಿ ನ್ಯಾಯವಿಲ್ಲ. ತಮ್ಮ ಹಾದಿಗಳನ್ನು ವಕ್ರಮಾಡಿಕೊಂಡಿದ್ದಾರೆ. ಅವುಗಳಲ್ಲಿ ನಡೆಯುವವರೆಲ್ಲರೂ ಸಮಾಧಾನವನ್ನರಿಯರು.


“ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವುದಿಲ್ಲ. ಏಕೆಂದರೆ ಅವರು ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಹೋಗುತ್ತಾ, ನನ್ನನ್ನು ಅರಿಯದೆ ಇದ್ದಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.


ಏಕೆಂದರೆ ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲನ್ನಾಗಲಿ, ಯೆಹೂದವನ್ನಾಗಲಿ ಕೈಬಿಡಲಿಲ್ಲ.


ಹಿರಿಯರೇ, ಇದನ್ನು ಕೇಳಿರಿ: ದೇಶದ ನಿವಾಸಿಗಳೇ, ಕಿವಿಗೊಡಿರಿ. ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ?


ನಿಮ್ಮಲ್ಲಿ ಅನ್ಯದೇವರು ಇರಬಾರದು; ಪರದೇವರಿಗೆ ಅಡ್ಡ ಬೀಳಬಾರದು.


“ಆದ್ದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯವಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಇದಲ್ಲದೆ ನಿಮ್ಮ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.


ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: “ಇಗೋ, ನಾನು ಅವರನ್ನು ಕರಗಿಸಿ ಪರಿಶೋಧಿಸುತ್ತೇನೆ. ಏಕೆಂದರೆ ನನ್ನ ಜನರ ಪಾಪಗಳಿಗೋಸ್ಕರ ನಾನು ಇನ್ನೇನು ಮಾಡಲಿ?


ಏಕೆಂದರೆ ನಾನು ನಿಮ್ಮ ತಂದೆಗಳಿಗೆ, “ನನ್ನ ಮಾತನ್ನು ಕೇಳಿ,” ಎಂದು ಖಂಡಿತವಾಗಿ ಹೇಳಿದೆನು. ಅವರನ್ನು ಈಜಿಪ್ಟ್ ದೇಶದೊಳಗಿಂದ ಮೇಲೆ ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಜ್ಞಾಪಿಸುತ್ತಾ ಬಂದಿದ್ದೇನೆ.


“ ‘ಆದಕಾರಣ ವ್ಯಭಿಚಾರಿಣಿಯೇ, ನೀನು ಯೆಹೋವ ದೇವರ ವಾಕ್ಯವನ್ನು ಕೇಳು.


“ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.


ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು, ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.


ಇಸ್ರಾಯೇಲರೇ, ಯೆಹೋವ ದೇವರು ನಿಮಗೆ ವಿರೋಧವಾಗಿ ಹೇಳುವ ವಾಕ್ಯವನ್ನು ಕೇಳಿರಿ. ನಾನು ಈಜಿಪ್ಟ್ ದೇಶದೊಳಗಿಂದ ಕರೆದುತಂದ ಸಮಸ್ತ ಕುಟುಂಬಕ್ಕೆ ಹೇಳುವುದೇನೆಂದರೆ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು