Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 2:3 - ಕನ್ನಡ ಸಮಕಾಲಿಕ ಅನುವಾದ

3 ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ತೆಗೆದು, ಅವಳು ಹುಟ್ಟಿದ ದಿವಸದಲ್ಲಿದ್ದ ಹಾಗೆ ಅವಳನ್ನು ಬೆತ್ತಲೆ ಮಾಡುತ್ತೇನೆ. ಅವಳನ್ನು ಮರುಭೂಮಿಯಂತೆ ಮಾಡಿ, ಅವಳನ್ನು ಒಣಗಿದ ಭೂಮಿಯಂತೆ ಇಟ್ಟು, ದಾಹದಿಂದ ಅವಳನ್ನು ಕೊಲ್ಲುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇಲ್ಲವಾದರೆ ನಾನು ಅವಳ ಬಟ್ಟೆಯನ್ನು ಕಿತ್ತು ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸಿಬಿಟ್ಟು ಕಾಡನ್ನಾಗಿ ಮಾಡಿ ಮರುಭೂವಿುಯ ಸ್ಥಿತಿಗೆ ತಂದು ನೀರಡಿಕೆಯಿಂದ ಸಾಯಿಸುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 2:3
27 ತಿಳಿವುಗಳ ಹೋಲಿಕೆ  

ಎಲ್ಲಾ ಅಸಹ್ಯ ಕಾರ್ಯಗಳನ್ನೂ, ವ್ಯಭಿಚಾರಗಳನ್ನೂ ಮಾಡುತ್ತಿದ್ದಾಗ, ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ, ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದುದನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.


ಈಗ ಅದು ಮರುಭೂಮಿಯಲ್ಲಿ ಒಣಗಿ, ನೀರಿಲ್ಲದಂಥ ಪ್ರದೇಶದಲ್ಲಿ ನೆಡಲಾಗಿದೆ.


ಒಂದು ವೇಳೆ, “ಇವು ನನಗೆ ಏಕೆ ಸಂಭವಿಸಿದವು?” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ನೆರಿಗೆಯು ಕೀಳಲಾಗುವುದು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.


ನೀನು ಕಂಡ ಆ ಮೃಗ ಮತ್ತು ಹತ್ತು ಕೊಂಬುಗಳು ಆ ಜಾರಸ್ತ್ರೀಯನ್ನು ದ್ವೇಷಿಸಿ, ಆಕೆಯನ್ನು ಗತಿಯಿಲ್ಲದವಳನ್ನಾಗಿಯೂ ಆಕೆಯನ್ನು ಬಟ್ಟೆ ಇಲ್ಲದವಳನ್ನಾಗಿಯೂ ಆಕೆಯ ಮಾಂಸವನ್ನು ತಿಂದು, ಆಕೆಯನ್ನು ಬೆಂಕಿಯಲ್ಲಿ ಸುಟ್ಟುಬಿಡುವವು.


ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.


ಯೆಹೋವ ದೇವರು ಯೆಹೂದದ ಅರಸನ ಅರಮನೆಗೆ ಹೀಗೆ ಹೇಳುತ್ತಾರೆ: “ನೀನು ನನಗೆ ಗಿಲ್ಯಾದೂ, ಲೆಬನೋನಿನ ಗಿರಿಶೃಂಗ ಆಗಿದ್ದೀ. ಆದರೂ ನಿಶ್ಚಯವಾಗಿ ನಿನ್ನನ್ನು ಮರುಭೂಮಿಯಾಗಿಯೂ, ನಿವಾಸಿಗಳಿಲ್ಲದ ಪಟ್ಟಣಗಳನ್ನಾಗಿಯೂ ಮಾಡುವೆನು.


ಅವನು ಅಡವಿಯಲ್ಲಿರುವ ಜಾಲಿ ಗಿಡದ ಹಾಗಿರುವನು. ಒಳ್ಳೆಯದು ಬರುವಾಗ ನೋಡದೆ ಇರುವನು. ನಿವಾಸಿಗಳಿಲ್ಲದ ಚೌಳು ನೆಲವಾಗಿರುವ ಮರುಭೂಮಿಯ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.


ಆದ್ದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ, ನಿನ್ನ ಮುಖದ ಮೇಲೆ ಎತ್ತುವೆನು.


ಅನೇಕ ಕುರುಬರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಹೊಲವನ್ನು ತುಳಿದುಬಿಟ್ಟಿದ್ದಾರೆ; ನಾನು ಮೆಚ್ಚಿದ ಭಾಗವನ್ನು ಹಾಳಾದ ಮರುಭೂಮಿಯಾಗಿ ಮಾಡಿದ್ದಾರೆ.


ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಮರುಭೂಮಿಯಾಯಿತು; ಅದರ ಪಟ್ಟಣಗಳೆಲ್ಲಾ ಯೆಹೋವ ದೇವರ ಮುಂದೆಯೂ, ಅವರ ಉಗ್ರಕೋಪದ ಉರಿಯ ಮುಂದೆಯೂ ಬಿದ್ದು ಹೋಗಿದ್ದವು.


“ಇಸ್ರಾಯೇಲರೇ, ನೀವು ಯೆಹೋವ ದೇವರ ವಾಕ್ಯವನ್ನು ಗಮನಿಸಿರಿ: “ನಾನು ಇಸ್ರಾಯೇಲಿನ ಮರುಭೂಮಿಯಾದೆನೋ? ಗಾಡಾಂಧಕಾರದ ದೇಶವಾದೆನೋ? ನನ್ನ ಜನರು, ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ, ನಾವು ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವುದಿಲ್ಲ,’ ಎಂದು ಹೇಳುವುದು ಹೇಗೆ?


ಅವರು, ‘ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿ ನಮ್ಮನ್ನು ಮರುಭೂಮಿಯಲ್ಲಿ ಕಾಡು ಕುಳಿಗಳು ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದುಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡೆಸಿದ ಯೆಹೋವ ದೇವರು ಎಲ್ಲಿ?’ ಎಂದು ಪ್ರಶ್ನೆ ಮಾಡಲಿಲ್ಲ.


ನಿನ್ನ ಪರಿಶುದ್ಧ ಪಟ್ಟಣಗಳು ಅಡವಿಯಾದವು. ಚೀಯೋನು ಅಡವಿಯಾಯಿತು. ಯೆರೂಸಲೇಮು ಹಾಳಾಯಿತು.


ನಿನ್ನ ಬೆತ್ತಲೆತನವು ಮರೆಮಾಡದೇ ಇದ್ದುದರಿಂದ ನೀನು ನಾಚಿಕೆಗೆ ಈಡಾಗುವೆ. ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.


ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನು ನಾಚಿಕೆಪಟ್ಟು ಕಡಿದು ಬೀಳುವುದು. ಶಾರೋನ್ ಬೆಂಗಾಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ.


ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು.


ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿ, “ನಮ್ನನ್ನೂ, ನಮ್ಮ ಮಕ್ಕಳನ್ನೂ, ನಮ್ಮ ಪಶುಗಳನ್ನೂ ದಾಹದಿಂದ ಕೊಲ್ಲುವುದಕ್ಕಾಗಿ ಏಕೆ ಈಜಿಪ್ಟಿನೊಳಗಿಂದ ಇಲ್ಲಿಗೆ ಬರಮಾಡಿದೆ,” ಎಂದರು.


ಈಗ ಅವಳ ತುಚ್ಚತನವನ್ನು, ಅವಳ ಪ್ರೇಮಿಗಳ ಕಣ್ಣುಗಳ ಮುಂದೆ ಬಯಲು ಪಡಿಸುವೆನು. ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.


ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ. ಇವರು ಬಾವಿಗಳಿಗೆ ಬರುತ್ತಾರೆ. ಆದರೆ ನೀರು ಸಿಕ್ಕಲ್ಲ. ಬರೀ ಪಾತ್ರೆಗಳುಳ್ಳವರಾಗಿ ತಿರುಗಿಕೊಳ್ಳುತ್ತಾರೆ. ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ, ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.


ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವ ದೇವರು ಬೀಸಮಾಡುವ ಪೂರ್ವ ಗಾಳಿಯು ಬರಲು, ಅವನ ಬುಗ್ಗೆಯು ಬತ್ತುವುದು. ಅವನ ಒರತೆಯು ಒಣಗುವುದು. ಅವನ ಬೊಕ್ಕಸಗಳ ನಿಧಿಯನ್ನು ಶತ್ರುಗಳು ಸೂರೆಮಾಡುವರು.


ಏಕೆಂದರೆ ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲನ್ನಾಗಲಿ, ಯೆಹೂದವನ್ನಾಗಲಿ ಕೈಬಿಡಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು