Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 12:8 - ಕನ್ನಡ ಸಮಕಾಲಿಕ ಅನುವಾದ

8 ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ, “ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು. ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಎಫ್ರಯಿಮ್ ಹೇಳಿಕೊಳ್ಳುವುದೇನೆಂದರೆ: “ನಾನು ಐಶ್ವರ್ಯವಂತನಾಗಿಬಿಟ್ಟೆ, ನನಗಾಗಿ ಆಸ್ತಿಪಾಸ್ತಿಯನ್ನು ಗಳಿಸಿಕೊಂಡಿದ್ದೇನೆ. ನನ್ನ ಗಳಿಕೆಯಲ್ಲಿ ಪಾಪವೆಂಬ ದೋಷವೇನೂ ಇಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಎಫ್ರಾಯೀಮು - ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ ಅಂದುಕೊಳ್ಳುತ್ತದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 12:8
29 ತಿಳಿವುಗಳ ಹೋಲಿಕೆ  

ಏಕೆಂದರೆ ನೀನು ನಿನ್ನ ವಿಷಯದಲ್ಲಿ, ‘ನಾನು ಐಶ್ವರ್ಯವಂತನು, ನಾನು ಸಂಪಾದಕನಾಗಿದ್ದೇನೆ ಮತ್ತು ಕೊರತೆ ನನಗಿಲ್ಲ,’ ಎಂದು ಹೇಳಿಕೊಳ್ಳುತ್ತಿ. ಆದರೆ ನೀನು ಕೇವಲ ದುರವಸ್ಥೆಯುಳ್ಳವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾದವನು ಎಂಬುದನ್ನು ತಿಳಿಯದೆ ಇದ್ದೀ.


ಅನ್ಯಾಯದ ಸುಲಿಗೆಯಲ್ಲಿ ಭರವಸೆ ಇಡಬೇಡಿರಿ. ಸೂರೆಮಾಡಿದ್ದರಲ್ಲಿ ಗರ್ವಪಡಬೇಡಿರಿ. ಆಸ್ತಿಯು ಹೆಚ್ಚಾದರೆ ಅದರ ಮೇಲೆ ಮನಸ್ಸಿಡಬೇಡಿರಿ.


ಹೀಗೆ ಅನಾರೋಗ್ಯಕರವಾದ ವಿವಾದಗಳನ್ನೂ ಕೆಲವು ಮಾತುಗಳ ಕುರಿತಾಗಿರುವ ತರ್ಕಗಳನ್ನೂ ಸೃಷ್ಟಿಸುವ ಪ್ರಸಿದ್ಧರಾಗಿದ್ದಾರೆ. ಅಂಥವರು ದೇವಭಕ್ತಿಯನ್ನು ಆರ್ಥಿಕ ಲಾಭವನ್ನಾಗಿ ಭಾವಿಸುವವರಾಗಿದ್ದಾರೆ.


ಅವುಗಳನ್ನು ಕೊಂಡುಕೊಳ್ಳುವವರು, ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ. ಅವುಗಳನ್ನು ಮಾರುವವರು, ‘ನಾನು ಐಶ್ವರ್ಯವಂತನಾದೆನು, ಯೆಹೋವ ದೇವರಿಗೆ ಸ್ತೋತ್ರ,’ ಎಂದೆನ್ನುತ್ತಾರೆ. ಅವರ ಸ್ವಂತ ಕುರುಬರೂ ಅವುಗಳನ್ನು ಕನಿಕರಿಸುವುದಿಲ್ಲ.


“ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.


ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ; ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ.


“ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ, ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದ ಮನುಷ್ಯನು ಇವನೇ!”


ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು, ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು.


ನಿಮ್ಮ ದೇವರಾದ ಯೆಹೋವ ದೇವರನ್ನು ಮರೆತು, “ನಮ್ಮ ಹಸ್ತ ಬಲ ಸಾಮರ್ಥ್ಯವೇ ನಮಗೆ ಈ ಆಸ್ತಿಯನ್ನು ಸಂಪಾದಿಸಿತು,” ಎಂದು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೊಳ್ಳಿರಿ.


ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು.


ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.


“ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು.


ಅಲ್ಲದೆ, ನಾನು ನನ್ನ ಪ್ರಾಣಕ್ಕೆ, “ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ,” ’ ಎಂದುಕೊಂಡನು.


ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು.


“ನೀವು ನನಗೆ ವಿರೋಧವಾಗಿ ಅಹಂಕಾರದಿಂದ ಮಾತುಗಳನ್ನಾಡಿದಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೂ ನೀವು, ‘ನಿನಗೆ ವಿರೋಧವಾಗಿ ನಾವು ಏನು ಮಾತಾಡಿದ್ದೇವೆ?’ ಎನ್ನುತ್ತೀರಿ.”


ಆದ್ದರಿಂದ ತಮ್ಮ ಬಲೆಗೆ ಬಲಿ ಅರ್ಪಿಸಿ, ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ. ಏಕೆಂದರೆ ಇವುಗಳಿಂದ ಅವರ ಭೋಜನ ಪುಷ್ಟಿಯಾಗಿಯೂ, ಅವರ ಆಹಾರ ರುಚಿಯುಳ್ಳದ್ದಾಗಿಯೂ ಇದೆ.


“ಇದಲ್ಲದೆ ನೀನು, ‘ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ,’ ಎಂದು ಹೇಳುವುದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು. ನೀನು ಮಾಡಿದ್ದನ್ನು ತಿಳಿದುಕೋ. ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ.


ಆದರೂ ನೀನು, ‘ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ದೇವರ ಕೋಪವು ನನ್ನನ್ನು ಬಿಟ್ಟು ತಿರುಗುವುದು,’ ಎಂದು ಹೇಳುತ್ತೀ. ನೀನು, ‘ನಾನು ಪಾಪಮಾಡಲಿಲ್ಲ’ ಎಂದು ಹೇಳುವುದರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.


“ನಿಮ್ಮ ಮಾತುಗಳಿಂದ ಯೆಹೋವ ದೇವರಿಗೆ ಬೇಸರ ಮಾಡಿದ್ದೀರಿ. “ಆದರೂ, ನಾವು ಯಾವುದರಲ್ಲಿ ಆತನಿಗೆ ಬೇಸರ ಮಾಡಿದ್ದೇವೆ?” ಎಂದು ಕೇಳುತ್ತೀರಿ. “ಕೆಟ್ಟದ್ದನ್ನು ಮಾಡುವವರೆಲ್ಲರು, ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆ ಎಂದೂ, ನ್ಯಾಯದ ದೇವರು ಎಲ್ಲಿ? ಎಂದೂ ನೀವು ಹೇಳುವುದರಿಂದಲೇ.”


ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ ನಿನ್ನ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯ ಗರ್ವಪಟ್ಟಿದೆ.


ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ. ಅವರು ದುಷ್ಟತನದ ಮೇಲೆ ಅವರ ಮನಸ್ಸನ್ನು ಇಡುತ್ತಾರೆ.


ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು. ಅವರು ತೃಪ್ತರಾದಾಗ, ಅಹಂಕಾರಿಗಳಾದರು, ಅನಂತರ ಅವರು ನನ್ನನ್ನು ಮರೆತುಬಿಟ್ಟರು.


ಇಸ್ರಾಯೇಲೇ, ನಿನ್ನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೋ. ಏಕೆಂದರೆ ನಿನ್ನ ಪಾಪಗಳೇ, ನಿನ್ನ ಬೀಳುವಿಕೆಗೆ ಕಾರಣ.


ಮೋಸದ ತಕ್ಕಡಿ ಯೆಹೋವ ದೇವರಿಗೆ ಅಸಹ್ಯವಾಗಿದೆ; ಆದರೆ ನ್ಯಾಯದ ತೂಕ ಅವರಿಗೆ ಮೆಚ್ಚುಗೆ.


ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ, ಅವರ ಮನೆಗಳು ಮೋಸದಿಂದ ತುಂಬಿವೆ. ಆದ್ದರಿಂದ ಅವರು ಶಕ್ತಿವಂತರೂ, ಐಶ್ವರ್ಯವಂತರೂ ಆಗಿದ್ದಾರೆ.


ನೀವು ಹೇಳುವುದೇನೆಂದರೆ, “ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಗೋಧಿಯನ್ನು ಮಾರುವ ಹಾಗೆ ಸಬ್ಬತ್ ದಿನವು ಯಾವಾಗ ಮುಗಿಯುವುದು? ಕೊಳಗವನ್ನು ಚಿಕ್ಕದಾಗಿಯೂ ತೊಲಗಳನ್ನು ದೊಡ್ಡದಾಗಿಯೂ, ಕಳ್ಳತಕ್ಕಡಿಗಳನ್ನು ಮೋಸಕ್ಕಾಗಿಯೂ ಮಾಡೋಣವೆಂದೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು