Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 12:2 - ಕನ್ನಡ ಸಮಕಾಲಿಕ ಅನುವಾದ

2 ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸರ್ವೇಶ್ವರ ಜುದೇಯದ ಮೇಲೆ ಆಪಾದನೆ ಹೊರಿಸಿದ್ದಾರೆ. ಯಕೋಬನನ್ನು ಅದರ ನಡತೆಗೆ ತಕ್ಕಂತೆ ದಂಡಿಸುತ್ತಾರೆ. ಅದರ ಕೃತ್ಯಗಳಿಗನುಸಾರವಾಗಿ ಪ್ರತೀಕಾರ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಯೆಹೋವನು ಯೆಹೂದದ ಮೇಲೆ ವ್ಯಾಜ್ಯಹಾಕಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತೀಕಾರಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 12:2
32 ತಿಳಿವುಗಳ ಹೋಲಿಕೆ  

ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.


ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.


ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.


ಮೋಸಹೋಗಬೇಡಿರಿ, ದೇವರು ಪರಿಹಾಸ್ಯಕ್ಕೆ ಒಳಗಾಗುವವರಲ್ಲ. ಏಕೆಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.


ದೇವರು, “ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲ ಕೊಡುವರು.”


ಮನುಷ್ಯಪುತ್ರನಾದ ನಾನು ನನ್ನ ತಂದೆಯ ಮಹಿಮೆಯಲ್ಲಿ ನನ್ನ ದೂತರೊಡನೆ ಬಂದಾಗ, ನಾನು ಪ್ರತಿಯೊಬ್ಬರಿಗೂ ಅವರವರ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವೆನು.


ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ, ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ. ಆದರೆ ಯೆಹೋವ ದೇವರು ಅವುಗಳಿಗೆ ಮೆಚ್ಚುವುದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕಮಾಡಿಕೊಂಡು, ಅವರ ಪಾಪಗಳನ್ನು ಶಿಕ್ಷಿಸಿದರು. ಅವರು ಈಜಿಪ್ಟಿಗೆ ಹಿಂದಿರುಗುವರು.


ಯಾಜಕನು ಹೇಗೋ ಹಾಗೆಯೇ ಜನರು ಇರುವರು. ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವೆನು.


ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಅವಳ ಪ್ರೇಮಿಗಳ ಹಿಂದೆ ಹೋಗಿ, ಬಾಳ್ ದೇವತೆಗಳಿಗೆ ಧೂಪ ಸುಟ್ಟ ದಿವಸಗಳಿಗಾಗಿ ನಾನು ಅವಳನ್ನು ದಂಡಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಭೂಮಿಯ ಅಂತ್ಯಗಳವರೆಗೆ ಘೋಷವು ಬರುವುದು. ಯೆಹೋವ ದೇವರಿಗೆ ಜನಾಂಗಗಳ ಸಂಗಡ ವ್ಯಾಜ್ಯವಿದೆ. ಅವರು ಎಲ್ಲಾ ಮನುಷ್ಯರ ಸಂಗಡ ನ್ಯಾಯಕ್ಕೆ ನಿಲ್ಲುವರು. ದುಷ್ಟರನ್ನು ಖಡ್ಗಕ್ಕೆ ಒಪ್ಪಿಸುವರು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು. ತನ್ನ ವೈರಿಗಳಿಗೆ ಉರಿಯನ್ನೂ, ತನ್ನ ಶತ್ರುಗಳಿಗೆ ಪ್ರತಿಫಲವನ್ನೂ, ದ್ವೀಪಗಳಿಗೆ ಪ್ರತಿಫಲವನ್ನೂ ಸಲ್ಲಿಸುವನು.


ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.


ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”


ಕೆಡುಕರಿಗೆ ಕಷ್ಟ! ಅವರಿಗೆ ಕೇಡೇ ಇರಲಿ. ಏಕೆಂದರೆ ಅವರ ಕೈಗಳ ಪ್ರತಿಫಲವು ಅವರಿಗೆ ಕೊಡಲಾಗುವುದು.


ಗಿಬೆಯದ ದಿವಸಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ. ಆದ್ದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕ ಮಾಡಿಕೊಳ್ಳುವನು. ಅವರ ಪಾಪಕ್ಕೆ ತನ್ನ ದಂಡನೆಯನ್ನು ವಿಧಿಸುವನು.


ಆದರೆ ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕ ಮಾಡುತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನೆಸಿಕೊಳ್ಳುವುದಿಲ್ಲ. ಈಗ ಅವರ ಪಾಪಗಳು ಅವರನ್ನು ಸುತ್ತಿಕೊಂಡಿವೆ. ಅವು ನನ್ನ ಮುಖದ ಮುಂದೆ ಇವೆ.


ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ. ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ, ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ. ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ.


ಆದರೆ ಅಸ್ಸೀರಿಯದ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನೆಂದರೆ, ಹೋಶೇಯನು ಅಸ್ಸೀರಿಯದ ಅರಸನಿಗೆ ವರ್ಷ ವರ್ಷಕ್ಕೂ ಕೊಡುವ ಕಪ್ಪವನ್ನು ಕೊಡದೆ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ದೂತರನ್ನು ಕಳುಹಿಸಿದನು. ಆದ್ದರಿಂದ ಅಸ್ಸೀರಿಯದ ಅರಸನು ಅವನನ್ನು ಕಟ್ಟಿ, ಸೆರೆಮನೆಯಲ್ಲಿ ಬಂಧಿಸಿದನು.


“ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಪೂರ್ವದಿಕ್ಕಿನ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟೋ?


ಆದರೂ ಅವರು ತಮ್ಮ ಬಾಯಿಗಳಿಂದ ದೇವರಿಗೆ ಮುಖಸ್ತುತಿ ಮಾಡಿ, ತಮ್ಮ ನಾಲಿಗೆಯಿಂದ ದೇವರನ್ನು ಸುಳ್ಳಾಗಿ ಹೋಗಳುತ್ತಿದ್ದರು.


ತಾಯಿಯ ಗರ್ಭದಿಂದ ಅವನು ಹೇಗೆ ಬರಿಗೈಯಲ್ಲಿ ಬಂದನೋ, ಹಾಗೆ ಬರಿಗೈಯಲ್ಲಿ ಗತಿಸಿ ಹೋಗುವನು. ಅವನು ಪ್ರಯಾಸ ಪಟ್ಟದ್ದಕ್ಕಾಗಿ ಯಾವುದನ್ನು ತೆಗೆದುಕೊಂಡು ಹೋಗುವುದಿಲ್ಲ.


ನೆಗೆವಿನ ಮೃಗಗಳ ವಿಷಯವಾದ ಪ್ರವಾದನೆ: ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿಗಳ ಬೆನ್ನ ಮೇಲೆ ತಮ್ಮ ಬದುಕನ್ನೂ, ಒಂಟೆಗಳ ಮೇಲೆ ತಮ್ಮ ದ್ರವ್ಯಗಳನ್ನು ತಮಗೆ ಪ್ರಯೋಜನವಿಲ್ಲದ ಜನಕ್ಕೆ ತೆಗೆದುಕೊಂಡು ಹೋಗುತ್ತಾರೆ.


ನಾನು ಇಸ್ರಾಯೇಲನ್ನು ಗುಣ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಪಾಪಗಳನ್ನು ಬಹಿರಂಗಪಡಿಸುತ್ತೇನೆ. ಮತ್ತು ಸಮಾರ್ಯದ ಕೆಟ್ಟತನವನ್ನು ಪ್ರಕಟಪಡಿಸುತ್ತೇನೆ. ಅವರು ಸುಳ್ಳನ್ನು ನಡೆಸುತ್ತಾರೆ. ಕಳ್ಳನು ಒಳಗೆ ಬರುತ್ತಾನೆ ಮತ್ತು ಕಳ್ಳರ ಗುಂಪು ಹೊರಗೆ ಸುಲಿದುಕೊಳ್ಳುತ್ತದೆ.


“ಎಫ್ರಾಯೀಮು ಸಹ ಸುಲಭವಾಗಿ ಮೋಸಕ್ಕೆ ಒಳಗಾಗುವ ಪಾರಿವಾಳದ ಹಾಗಿದ್ದಾನೆ. ಈಗ ಅವರು ಈಜಿಪ್ಟನ್ನು ಕರೆಯುತ್ತಾರೆ. ಈಗ ಅವರು ಅಸ್ಸೀರಿಯದ ಆಶ್ರಯಕ್ಕೆ ಹೋಗುತ್ತಾರೆ.


ಅವರು ಒಂಟಿಯಾದ ಕಾಡುಕತ್ತೆಯ ಹಾಗೆ ಅಸ್ಸೀರಿಯಗೆ ಹೋಗಿದ್ದಾರೆ. ಎಫ್ರಾಯೀಮು ಪ್ರೇಮಿಗಳಿಗೆ ತನ್ನನ್ನು ಮಾರಿಕೊಂಡಿದೆ.


ಎಫ್ರಾಯೀಮು ಜನಾಂಗಗಳಿಗೆ ತಮ್ಮನ್ನು ಮಾರಿಕೊಂಡಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿಸುವೆನು. ಅವರು ಪ್ರಬಲ ಅರಸನ ಹಿಂಸೆಯಿಂದಾಗಿ ಕಷ್ಟಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು