ಹೋಶೇಯ 10:5 - ಕನ್ನಡ ಸಮಕಾಲಿಕ ಅನುವಾದ5 ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು. ಅಧ್ಯಾಯವನ್ನು ನೋಡಿ |