Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 10:2 - ಕನ್ನಡ ಸಮಕಾಲಿಕ ಅನುವಾದ

2 ಅವರ ಹೃದಯವು ವಂಚಕವಾದದ್ದು. ಈಗ ಅವರು ಅಪರಾಧಗಳನ್ನು ಹೊರಬೇಕು. ಯೆಹೋವ ದೇವರು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇಸ್ರಾಯೇಲರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ. ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹ ಸ್ತಂಭಗಳನ್ನು ಹಾಳುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇಸ್ರಾಯೇಲ್ಯರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ; ಯೆಹೋವನೇ ಅವರ ಯಜ್ಞವೇದಿಗಳನ್ನು ಮುರಿದುಬಿಡುವನು. ಅವರ ವಿಗ್ರಹಸ್ತಂಭಗಳನ್ನು ಹಾಳುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಇಸ್ರೇಲ್ ಜನರು ದೇವರನ್ನು ಮೋಸಪಡಿಸಲು ನೋಡಿದರು. ಆದರೆ ಈಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಯೆಹೋವನು ಅವರು ಯಜ್ಞವೇದಿಕೆಗಳನ್ನು ನಾಶಮಾಡುವನು. ಅವರ ಸ್ಮಾರಕಕಲ್ಲುಗಳನ್ನು ಆತನು ಪುಡಿ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 10:2
24 ತಿಳಿವುಗಳ ಹೋಲಿಕೆ  

ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.


ಆಗ ಎಲೀಯನು ಸಕಲ ಜನರ ಬಳಿಗೆ ಬಂದು, “ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರವರೆಗೂ ನಿಂತುಕೊಂಡಿರುವಿರಿ? ಯೆಹೋವ ದೇವರು ದೇವರಾಗಿದ್ದರೆ, ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ,” ಎಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.


ವ್ಯಭಿಚಾರಿಗಳೇ, ಇಹಲೋಕ ಸ್ನೇಹವು ದೇವರೊಂದಿಗಿರುವ ಶತ್ರುತ್ವ ಎಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರಬೇಕೆಂಬುವವನು ದೇವರಿಗೆ ಶತ್ರುವಾಗಿದ್ದಾನೆ.


ಅಂತಹ ವ್ಯಕ್ತಿ ಎರಡು ಮನಸ್ಸುಳ್ಳವನೂ ತನ್ನ ಮಾರ್ಗಗಳಲ್ಲೆಲ್ಲಾ ಚಂಚಲನೂ ಆಗಿದ್ದಾನೆ.


ಮಾಳಿಗೆಗಳ ಮೇಲೆ ತಲೆಬಾಗಿಸಿ ಆಕಾಶದ ನಕ್ಷತ್ರಗಣಕ್ಕೆ ಆರಾಧಿಸುವವರನ್ನೂ ಯೆಹೋವ ದೇವರ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ


“ಯಾವ ಸೇವಕನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು. ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ,” ಎಂದರು.


“ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ.


“ಆ ದಿನದಲ್ಲಿ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು. ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಪ್ರವಾದಿಗಳನ್ನೂ, ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿಹೋಗುವಂತೆ ಮಾಡುವೆನು.


ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ, ತನ್ನ ದೋಷಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು, ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”


“ಎಫ್ರಾಯೀಮು ಜನಾಂಗಗಳೊಂದಿಗೆ ತನ್ನನ್ನು ಬೆರೆಸಿಕೊಂಡಿದೆ. ಎಫ್ರಾಯೀಮು ತಿರುವಿ ಹಾಕದ ರೊಟ್ಟಿಯಾಗಿದ್ದಾನೆ.


ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”


ಅವರು ಏನೂ ತಿಳಿಯದವರು ಇಲ್ಲವೆ ಏನೂ ಗ್ರಹಿಸಲಾರದವರು. ಏಕೆಂದರೆ ಆತನು ಅವರ ಕಣ್ಣು ಕಾಣದಂತೆಯೂ, ಹೃದಯಗಳು ಗ್ರಹಿಸದಂತೆಯೂ ಮುಚ್ಚಿಬಿಟ್ಟಿದ್ದಾನೆ.


ಆಗ ಅವರು ದಾಗೋನನನ್ನು ತೆಗೆದು, ಅದನ್ನು ಅದರ ಸ್ಥಳದಲ್ಲಿ ತಿರುಗಿ ಇಟ್ಟರು. ಅವರು ಮಾರನೆಯ ದಿವಸ ಬೆಳಿಗ್ಗೆ ಎದ್ದಾಗ, ದಾಗೋನ್ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ದಾಗೋನನ ತಲೆಯೂ ಅದರ ಎರಡು ಕೈಗಳೂ ಕತ್ತರಿಸಲಾಗಿ ಹೊಸ್ತಿಲ ಮೇಲೆ ಬಿದ್ದಿದ್ದವು.


ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.


ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು.


ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ಅಲ್ಲಿನ ಜನರು ಅಯೋಗ್ಯರೇ? ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ? ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.


ಅವರ ದೇವರುಗಳಿಗೆ ನೀವು ಅಡ್ಡಬೀಳಲೂಬಾರದು, ಅವುಗಳನ್ನು ಆರಾಧಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ, ಅವರನ್ನು ನಿರ್ಮೂಲ ಮಾಡಿಬಿಟ್ಟು, ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದುಹಾಕಬೇಕು.


ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಧೂಪವೇದಿಗಳನ್ನು ಕಡಿದುಹಾಕಿ, ನಿಮ್ಮ ಹೆಣಗಳನ್ನು ನಿಮ್ಮ ವಿಗ್ರಹಗಳ ಮೇಲೆ ಹಾಕುವೆನು. ನಿಮ್ಮ ಬಗ್ಗೆ ನಾನು ಅಸಹ್ಯಪಡುವೆನು.


ದುಷ್ಟನು ಮೋಸದ ಸಂಬಳವನ್ನು ಸಂಪಾದಿಸುತ್ತಾನೆ, ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹವಾದ ಬಹುಮಾನವಿರುವುದು.


ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು