ಹೋಶೇಯ 10:13 - ಕನ್ನಡ ಸಮಕಾಲಿಕ ಅನುವಾದ13 ಆದರೆ ನೀವು ದುಷ್ಟತ್ವವನ್ನು ಬಿತ್ತಿ, ಅನ್ಯಾಯವನ್ನು ಕೊಯ್ದಿರಿ, ವಂಚನೆಯ ಫಲವನ್ನು ತಿಂದಿದ್ದೀರಿ. ಏಕೆಂದರೆ ನೀವು ನಿಮ್ಮ ಸ್ವಂತ ಬಲದಲ್ಲಿ ನಿಮ್ಮ ಶೂರರಲ್ಲಿಯೂ ಭರವಸೆಯಿಟ್ಟಿದ್ದೀರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನೀವು ಮಾಡಿದ ವ್ಯವಸಾಯವು ದುಷ್ಟತನ, ನಿಮಗಾದ ಬೆಳೆಯು ಅನ್ಯಾಯ ನೀವು ನಿಮ್ಮ ಕಟ್ಟುಪಾಡಿನಲ್ಲಿಯೂ, ನಿಮ್ಮ ಶೂರರ ರಥಗಳಲ್ಲಿಯೂ ಭರವಸವಿಟ್ಟಿದ್ದರಿಂದ ಮೋಸದ ಫಲವನ್ನು ಅನುಭವಿಸಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಇದಕ್ಕೆ ಬದಲಾಗಿ ನೀನು ಅಧರ್ಮದ ಬೀಜವನ್ನು ಬಿತ್ತಿರುವೆ, ಅನ್ಯಾಯದ ಬೆಳೆಯನ್ನು ಕೊಯ್ದಿರುವೆ. ಅಸತ್ಯದ ಫಲವನ್ನು ಉಂಡಿರುವೆ. ನಿನ್ನ ಭುಜಬಲದಲ್ಲೂ ಸಮರಶೂರರಲ್ಲೂ ಭರವಸೆಯಿಟ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನೀವು ಮಾಡಿದ ವ್ಯವಸಾಯವು ದುಷ್ಟತನ, ನಿಮಗಾದ ಬೆಳೆಯು ಅನ್ಯಾಯ; ನೀವು ನಿಮ್ಮ ಕಟ್ಟುಪಾಡಿನಲ್ಲಿಯೂ ನಿಮ್ಮ ಶೂರರ ಬಾಹುಳ್ಯದಲ್ಲಿಯೂ ಭರವಸವಿಟ್ಟದರಿಂದ ಮೋಸದ ಫಲವನ್ನು ಅನುಭವಿಸಿದ್ದೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ. ಅಧ್ಯಾಯವನ್ನು ನೋಡಿ |