ಹಬಕ್ಕೂಕ 3:16 - ಕನ್ನಡ ಸಮಕಾಲಿಕ ಅನುವಾದ16 ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅದು ನನಗೆ ಕೇಳಿಸಲು ನನ್ನ ಒಡಲು ನಡುಗಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು. ನಾನು ನಿಂತ ಹಾಗೆಯೇ ನಡುಗಿದೆನು. ವಿಪತ್ಕಾಲವು ನಮ್ಮನ್ನು ಹಿಂಸಿಸುವ ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವವರೆಗೂ ನಾನು ಅದಕ್ಕಾಗಿ ತಾಳ್ಮೆಯಿಂದ ಎದುರುನೋಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಇದಕೇಳಿ ನಡುನಡುಗಿತು ನನ್ನ ಒಡಲು ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು ಕೊಳೆತಂತಾದವು ನನ್ನೆಲುಬುಗಳು ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು ಆಪತ್ತು ಬಂದೊದಗುವುದು ನಮ್ಮನ್ನು ಆಕ್ರಮಿಸುವವರಿಗೆ ಕಾದಿರುವೆ ನಾನು ಸಹನಶೀಲನಾಗಿ ಅಂದಿನವರೆಗೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಅದು ನನಗೆ ಕೇಳಿಸಲು ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ವಿಪತ್ಕಾಲವು ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವಾಗ ನಾನು ಅದನ್ನು ತಾಳ್ಮೆಯಿಂದ ಕಾದಿರಬೇಕೆಂದು ನನಗೆ ತಿಳಿಯಲು ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಆ ವಿಷಯವನ್ನು ಕೇಳಿದಾಗ ನನ್ನ ಶರೀರವೆಲ್ಲಾ ನಡುಗಿತು. ಆಶ್ಟರ್ಯದಿಂದ ನಾನು ಸಿಳ್ಳುಹಾಕಿದೆ. ನನ್ನ ಎಲುಬುಗಳ ಬಲಹೀನತೆಯಿಂದ ನಾನು ನಡುಗುವವನಾಗಿ ನಿಂತೆನು. ಅವರು ಜನರ ಮೇಲೆ ಬೀಳಲು ಬರುವಾಗ ನಾನು ಅವರ ನಾಶನದ ದಿವಸವನ್ನು ಎದುರುನೋಡುತ್ತಿದ್ದೇನೆ. ಅಧ್ಯಾಯವನ್ನು ನೋಡಿ |