Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹಬಕ್ಕೂಕ 2:10 - ಕನ್ನಡ ಸಮಕಾಲಿಕ ಅನುವಾದ

10 ನೀನು ಬಹು ಜನಾಂಗಗಳನ್ನು ನಿರ್ಮೂಲ ಮಾಡಿದ್ದು, ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು. ನಿನಗೆ ನೀನೇ ಕೆಡುಕು ಮಾಡಿಕೊಂಡಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನೀನು ಬಹು ಜನರನ್ನು ನಿರ್ಮೂಲ ಮಾಡಿದ್ದು ನಿನ್ನ ಕುಂಟುಂಬಕ್ಕೆ ಅವಮಾನವನ್ನೇ ತಂದಂತಾಯಿತು, ನಿನಗೇ ನೀನೇ ಕೆಡುಕು ಮಾಡಿಕೊಂಡಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನಿನ್ನ ಯೋಜನೆಗಳಿಂದ ನಿನ್ನ ಮನೆತನಕ್ಕೆ ಅಪಕೀರ್ತಿ ತಂದುಕೊಂಡಿರುವೆ. ಹಲವಾರು ನಾಡುಗಳನ್ನು ನಿರ್ಮೂಲಮಾಡಿ ನಿನ್ನ ವಂಶಕ್ಕೆ ವಿನಾಶವನ್ನು ಬರಮಾಡಿಕೊಂಡಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನೀನು ಬಹುಜನಾಂಗಗಳನ್ನು ನಿರ್ಮೂಲಮಾಡಿದ್ದು ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು, ನಿನಗೇ ಕೆಡುಕುಮಾಡಿಕೊಂಡಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹಬಕ್ಕೂಕ 2:10
16 ತಿಳಿವುಗಳ ಹೋಲಿಕೆ  

ನಿನೆವೆಯೇ, ನಿನ್ನ ವಿಷಯವಾಗಿ ಯೆಹೋವ ದೇವರು ಆಜ್ಞಾಪಿಸುವುದೇನೆಂದರೆ: ಹೆಸರೆತ್ತಲು ನಿನಗೆ ಸಂತಾನವಿಲ್ಲದಂತೆ ಮಾಡುವೆನು. ನಿನ್ನ ದೇವರ ಮಂದಿರದಲ್ಲಿರುವ ಕೆತ್ತಿದ ವಿಗ್ರಹವನ್ನೂ, ಎರಕ ಬೊಂಬೆಯನ್ನೂ ನಾಶಮಾಡುವೆನು. ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.


ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು.


ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.


ಮಹಿಮೆಯ ಬದಲಾಗಿ ನಾಚಿಕೆಯಿಂದ ನೀನು ತುಂಬಿರುವೆ. ಈಗ ನಿನ್ನ ಸರದಿ, ಕುಡಿದು ಬೆತ್ತಲೆಯಾಗು. ಯೆಹೋವ ದೇವರ ಬಲಗೈಯಲ್ಲಿನ ಪಾತ್ರೆ ನಿನ್ನ ಕಡೆಗೆ ತಿರುಗುವುದು. ನಿನ್ನ ಘನತೆಯನ್ನು ಅವಮಾನವು ಮುಚ್ಚುವುದು.


ಅವನನ್ನೂ, ಅವನ ಸಂತಾನವನ್ನೂ, ಅವನ ಸೇವಕರನ್ನೂ, ಅವರ ಅಕ್ರಮಕ್ಕಾಗಿ ದಂಡಿಸುವೆನು. ಅವರ ಮೇಲೆಯೂ, ಯೆರೂಸಲೇಮಿನ ನಿವಾಸಿಗಳ ಮೇಲೆಯೂ, ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡದಂಥ ಕೇಡನ್ನೆಲ್ಲಾ ಬರಮಾಡುವೆನು.’ ”


ಯೆಹೂದದ ಅರಸನಾದ ಹಿಜ್ಕೀಯನೂ, ಎಲ್ಲಾ ಯೆಹೂದ್ಯರೂ ಅವನನ್ನು ಕೊಂದು ಹಾಕಿದರೋ? ಇಲ್ಲವೇ ಇಲ್ಲ. ಅವನು ಯೆಹೋವ ದೇವರಿಗೆ ಭಯಪಟ್ಟು, ಯೆಹೋವ ದೇವರ ಸಮ್ಮುಖದಲ್ಲಿ ಮೊರೆಯಿಟ್ಟನಲ್ಲವೋ? ಆಮೇಲೆ ಯೆಹೋವ ದೇವರು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು!” ಎಂದರು.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ, ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆಯಿರಿ. ಏಕೆಂದರೆ ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕುಳಿತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವುದಿಲ್ಲ.”


ನೀವು ಒಣಹುಲ್ಲನ್ನು ಗರ್ಭಧರಿಸಿ, ಪೈರಿನ ಮೋಟನ್ನು ಹೆರುವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗುವುದು.


ಆದರೆ ನನ್ನನ್ನು ಬಿಟ್ಟು ದೂರಹೋಗುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ, ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”


ಈ ಜನರು ಒಳಸಂಚು ಮಾಡುವುದು ತಮ್ಮ ಸ್ವಂತ ರಕ್ತಕ್ಕೆ. ಅವರು ಮಾಡುವ ದುರಾಲೋಚನೆ ಅವರನ್ನೇ ನಾಶಮಾಡುವುದು.


ಈ ಪತ್ರವು ಅವರ ಬಳಿಗೆ ಬಂದಾಗ, ಅವರು ರಾಜಪುತ್ರರನ್ನು ಹಿಡಿದು, ಎಪ್ಪತ್ತು ಮಂದಿಯನ್ನು ಕೊಂದು, ಅವರ ತಲೆಗಳನ್ನು ಪುಟ್ಟಿಗಳಲ್ಲಿ ಹಾಕಿ ಇಜ್ರೆಯೇಲ್ ಪಟ್ಟಣದಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.


ತರುವಾಯ ಅರಸನಾದ ಸೊಲೊಮೋನನು, “ಅದೋನೀಯನು ಈ ಮಾತನ್ನು ತನ್ನ ಪ್ರಾಣಕ್ಕೆ ವಿರೋಧವಾಗಿ ಹೇಳದೆ ಇದ್ದರೆ, ನನಗೆ ದೇವರು ಹಾಗೆಯೂ, ಅದಕ್ಕಿಂತಲೂ ಅಧಿಕವಾಗಿಯೂ ಮಾಡಲಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಆಣೆ ಇಟ್ಟನು.


ತಮ್ಮ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ ಮನುಷ್ಯರ ಧೂಪದ ಪಾತ್ರೆಗಳನ್ನು ಬಲಿಪೀಠವನ್ನು ಮುಚ್ಚತಕ್ಕ ಅಗಲವಾದ ತಗಡುಗಳನ್ನಾಗಿ ಮಾಡಬೇಕು. ಏಕೆಂದರೆ ಅವುಗಳನ್ನು ಯೆಹೋವ ದೇವರ ಸಮ್ಮುಖದಲ್ಲಿ ಅರ್ಪಿಸಿದ ಕಾರಣ ಅವು ಪರಿಶುದ್ಧವಾದವುಗಳು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು,” ಎಂದರು.


ಅರಸನ ಭಯವು ಸಿಂಹದ ಘರ್ಜನೆಯಂತಿದೆ; ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.


“ಆದ್ದರಿಂದ ಈಗ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ: ಏಕೆ ನಿಮಗೆ ಉಳಿದಿರುವವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ, ಹೆಂಗಸರನ್ನೂ, ಮಗುವನ್ನೂ, ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು, ನಿಮ್ಮ ಪ್ರಾಣಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳುತ್ತೀರಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು