Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 9:34 - ಕನ್ನಡ ಸಮಕಾಲಿಕ ಅನುವಾದ

34 ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಆದರೆ ಆನೆಕಲ್ಲು ಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನೂ, ಅವನ ಪರಿವಾರದವರೂ ತಮ್ಮ ಹೃದಯಗಳನ್ನು ಕಠಿಣಮಾಡಿಕೊಂಡು ಇನ್ನೂ ಪಾಪ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಆದರೆ ಆ ಮಳೆ, ಆ ಕಲ್ಲುಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನು ಹಾಗು ಅವನ ಪರಿವಾರದವರು ತಮ್ಮ ಹೃದಯಗಳನ್ನು ಪುನಃ ಕಠಿಣವಾಗಿಸಿಕೊಂಡು, ಪಾಪ ಕಟ್ಟಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಆದರೆ ಆ ಬಿರುಮಳೆಯೂ ಕಲ್ಲಿನ ಮಳೆಯೂ ಗುಡುಗೂ ನಿಂತು ಹೋದದ್ದನ್ನು ಫರೋಹನು ಕಂಡಾಗ ಅವನೂ ಅವನ ಪರಿವಾರದವರೂ ಇನ್ನೂ ಪಾಪಿಷ್ಠರಾಗಿ ತಮ್ಮ ಹೃದಯಗಳನ್ನು ಮೊಂಡುಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 9:34
11 ತಿಳಿವುಗಳ ಹೋಲಿಕೆ  

ಆಗ ಯೆಹೋವ ದೇವರು ಮೋಶೆಗೆ, “ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ.


ಏಕೆಂದರೆ ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವುದರಿಂದ ಮನುಷ್ಯರ ಹೃದಯವು ಅವರನ್ನು ಕೆಟ್ಟದ್ದು ಮಾಡುವ ಯುಕ್ತಿಯಲ್ಲಿಯೇ ತುಂಬಿರುವುದು.


ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿಬಿದ್ದನು. ಹೇಗೆಂದರೆ ಅವನು ಇಸ್ರಾಯೇಲಿನ ಯೆಹೋವ ದೇವರ ಕಡೆಗೆ ತಿರುಗದೆ, ಹಟಮಾರಿಯಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.


ಆಮೋನನು ತನ್ನ ತಂದೆ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ, ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. ಆದರೆ ಆಮೋನನು ಅಧಿಕವಾಗಿ ಅಪರಾಧ ಮಾಡಿದನು.


ಇದಲ್ಲದೆ ಈ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಇನ್ನೂ ಅಧಿಕವಾಗಿ ಯೆಹೋವ ದೇವರಿಗೆ ಅಪನಂಬಿಗಸ್ತನಾದನು.


ಆದರೆ ಫರೋಹನು ತನಗೆ ಉಪಶಮನವಾಯಿತೆಂದು ನೋಡಿದಾಗ, ಯೆಹೋವ ದೇವರು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣ ಮಾಡಿಕೊಂಡು, ಮೋಶೆ ಮತ್ತು ಆರೋನರ ಮಾತನ್ನು ಕೇಳಲಿಲ್ಲ.


ಆಗ ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗುವಾಗ, ನಾನು ನಿನ್ನ ಕೈಯಲ್ಲಿ ಮಾಡಿಸಿದ ಎಲ್ಲಾ ಸೂಚಕಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವುದಿಲ್ಲ.


ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.


ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ.


ಈಜಿಪ್ಟಿನವರೂ, ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ, ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವುದೇನು? ದೇವರು ಅವರ ಮಧ್ಯದಲ್ಲಿ ಆಶ್ಚರ್ಯಕರವಾದ ಕ್ರಿಯೆಗಳನ್ನು ನಡಿಸಿದಾಗ, ಅವರು ಇಸ್ರಾಯೇಲರನ್ನು ಅವರು ಹೋಗುವಹಾಗೆ ಕಳುಹಿಸಲಿಲ್ಲವೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು