Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 8:28 - ಕನ್ನಡ ಸಮಕಾಲಿಕ ಅನುವಾದ

28 ಅದಕ್ಕೆ ಫರೋಹನು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರಿಗೆ ಮರುಭೂಮಿಯಲ್ಲಿ ಯಜ್ಞವನ್ನರ್ಪಿಸುವಂತೆ ನಿಮ್ಮನ್ನು ಕಳುಹಿಸುತ್ತೇನೆ. ಆದರೆ ದೂರ ಹೋಗಬೇಡಿರಿ, ನನಗೋಸ್ಕರ ಪ್ರಾರ್ಥನೆಮಾಡಿರಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅದಕ್ಕೆ ಫರೋಹನು ಅವರಿಗೆ, “ನಿಮ್ಮ ದೇವರಾದ ಯೆಹೋವನಿಗೆ ಅರಣ್ಯದಲ್ಲಿ ಯಜ್ಞಮಾಡುವಂತೆ ನಾನು ನಿಮಗೆ ಅಪ್ಪಣೆ ಕೊಡುತ್ತೇನೆ. ಆದರೆ ಬಹಳ ದೂರ ಹೋಗಬಾರದು. ನನಗೋಸ್ಕರ ಪ್ರಾರ್ಥನೆ ಮಾಡಿರಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅದಕ್ಕೆ ಫರೋಹನು, “ಒಳ್ಳೆಯದು, ಮರುಭೂಮಿಯಲ್ಲಿ ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿ ಒಪ್ಪಿಸಲು ನಿಮಗೆ ಅಪ್ಪಣೆಕೊಡುತ್ತೇನೆ. ಆದರೆ ದೂರ ಹೋಗಕೂಡದು. ನನಗಾಗಿ ಪ್ರಾರ್ಥನೆ ಮಾಡಬೇಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅದಕ್ಕೆ ಫರೋಹನು - ಒಳ್ಳೇದು, ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಮಾಡುವಂತೆ ನಿಮಗೆ ಅಪ್ಪಣೆ ಕೊಡುತ್ತೇನೆ; ಆದರೆ ದೂರ ಹೋಗಕೂಡದು; ನನಗೋಸ್ಕರ ಪ್ರಾರ್ಥನೆಮಾಡಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅದಕ್ಕೆ ಫರೋಹನು, “ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಲು ನಾನು ನಿಮಗೆ ಅಪ್ಪಣೆ ಕೊಡುವೆನು; ಆದರೆ ಬಹುದೂರ ಹೋಗಬೇಡಿ; ಈಗ ಹೋಗಿ ನನಗೋಸ್ಕರ ಪ್ರಾರ್ಥಿಸಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 8:28
13 ತಿಳಿವುಗಳ ಹೋಲಿಕೆ  

ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಯೆಹೋವ ದೇವರನ್ನು ಬೇಡಿಕೊಂಡು ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಯೆಹೋವ ದೇವರಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು,” ಎಂದನು.


ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.


ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು.


ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.


ಅವರ ಹೃದಯವು ವಂಚಕವಾದದ್ದು. ಈಗ ಅವರು ಅಪರಾಧಗಳನ್ನು ಹೊರಬೇಕು. ಯೆಹೋವ ದೇವರು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವರು.


ಇದಲ್ಲದೆ ಅವರು ಪರಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ, ಅರಸನ ಪ್ರಾಣಕ್ಕೋಸ್ಕರವೂ, ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡಬೇಕು.


ಹೀಗಿರುವುದರಿಂದ ಈಗ ಒಂದೇ ಸಾರಿ ಮಾತ್ರ ನನ್ನ ಪಾಪವನ್ನು ಕ್ಷಮಿಸಬೇಕು. ಈ ಮರಣಕರವಾದ ಉಪದ್ರವವನ್ನು ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಿರಿ,” ಎಂದನು.


ಆಗ ಮೋಶೆಯು ಅವನಿಗೆ, “ನಾನು ನಿನ್ನನ್ನು ಬಿಟ್ಟು ಹೋಗಿ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ, ಅವನ ಸೇವಕರನ್ನೂ, ಅವರ ಜನರನ್ನೂ ಬಿಟ್ಟು ಹೋಗುವುವು. ಆದರೆ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುವುದಕ್ಕೆ ಫರೋಹನಾದ ನೀನು ಜನರನ್ನು ಕಳುಹಿಸದೆ ಇನ್ನು ಮೇಲೆ ವಂಚಿಸಬಾರದು,” ಎಂದನು.


ಜಗತ್ತಿನಲ್ಲಿ ಇರುವ ಎಲ್ಲದಕ್ಕೂ ಈಗಾಗಲೇ ಹೆಸರನ್ನು ಇಡಲಾಗಿದೆ. ಮನುಷ್ಯನು ಯಾರು ಎಂದೂ ಗೊತ್ತಾಗಿದೆ. ತನಗಿಂತ ಬಲಿಷ್ಟನೊಂದಿಗೆ ಯಾರೂ ಹೋರಾಡುವುದಿಲ್ಲ.


ಆದರೆ ಫರೋಹನು ತನಗೆ ಉಪಶಮನವಾಯಿತೆಂದು ನೋಡಿದಾಗ, ಯೆಹೋವ ದೇವರು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣ ಮಾಡಿಕೊಂಡು, ಮೋಶೆ ಮತ್ತು ಆರೋನರ ಮಾತನ್ನು ಕೇಳಲಿಲ್ಲ.


ಪ್ರವಾದಿಯಾದ ಯೆರೆಮೀಯನಿಗೆ, “ನಮ್ಮ ವಿಜ್ಞಾಪನೆ ನಿಮ್ಮ ಮುಂದೆ ಬರಲಿ. ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ, ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ? ನಮಗೋಸ್ಕರವೂ ಎಂದರೆ ಈ ಸಮಸ್ತ ಶೇಷಕ್ಕೋಸ್ಕರವೂ,


ಆದರೂ ಈಜಿಪ್ಟಿನ ಅರಸನು ನೀವು ಎಷ್ಟು ಬಲವಂತ ಮಾಡಿದರೂ ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂದು ನನಗೆ ನಿಶ್ಚಯವಾಗಿ ತಿಳಿದಿದೆ.


ಯೆಹೋವ ದೇವರು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತನ್ನು ಕೇಳಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು