“ಇಸ್ರಾಯೇಲರ ಹಿರಿಯರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್ ಜನರ ಹಿರಿಯರ ಸಹಿತವಾಗಿ ಈಜಿಪ್ಟಿನ ಅರಸನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾಗಿರುವ ಯೆಹೋವ ದೇವರು ನಮಗೆ ಪ್ರತ್ಯಕ್ಷನಾಗಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞಮಾಡಬೇಕಾಗಿದೆ. ಅದಕ್ಕಾಗಿ ನಮ್ಮನ್ನು ಬಿಡು ಎಂದು ಬೇಡಿಕೊಳ್ಳುತ್ತೇವೆ,’ ಎಂದು ಹೇಳಬೇಕು.
ಆಗ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ಜನರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದ ಮೇಲೆ ದೇವರಾದ ನನ್ನನ್ನು ಆರಾಧಿಸುವಿರಿ. ನಾನು ನಿನ್ನನ್ನು ಕಳುಹಿಸಿದವನು ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.
ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹೂ ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು, ಅದರಲ್ಲಿ ಬೆಂಕಿಯನ್ನು ಹಾಕಿ, ಅದರಲ್ಲಿ ಸುವಾಸನೆಯ ಧೂಪವನ್ನು ಹಾಕಿ, ಯೆಹೋವ ದೇವರು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದರು.
ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವುದನ್ನು ಅನುಸರಿಸಿ ನಡೆಯಬೇಕು. ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ, ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿಮ್ಮ ಮುಂದೆಯೇ ಹೊರಡಿಸಿಬಿಡುತ್ತೇನೆ.
ನಮ್ಮ ಪಶುಪ್ರಾಣಿಗಳನ್ನೂ ನಾವು ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನೂ ಬಿಡಲಾರೆವು. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವುದಕ್ಕೆ ಅವುಗಳಿಂದಲೇ ಬಲಿ ಅರ್ಪಿಸಬೇಕು. ಯೆಹೋವ ದೇವರಿಗೆ ಯಾವ ಅರ್ಪಣೆ ಮಾಡಬೇಕೆಂಬುದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯದು,” ಎಂದನು.
ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ, “ಇಸ್ರಾಯೇಲಿನ ಯೆಹೋವ ದೇವರು, ‘ಮರುಭೂಮಿಯಲ್ಲಿ ನನಗೆ ನನ್ನ ಜನರು ಹಬ್ಬವನ್ನಾಚರಿಸುವುದಕ್ಕೆ ಅವರನ್ನು ಹೋಗಗೊಡಿಸು,’ ಎಂದು ಹೇಳುತ್ತಾರೆ,” ಎಂದರು.
ಆಗ ಅವರು ಫರೋಹನಿಗೆ, “ಹಿಬ್ರಿಯರ ದೇವರು ನಮ್ಮನ್ನು ಸಂದರ್ಶಿಸಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿವಸ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞ ಅರ್ಪಿಸುವುದಕ್ಕೆ ನಾವು ಹೋಗಬೇಕು. ಇಲ್ಲವಾದರೆ ಅವರು ಉಪದ್ರವದಿಂದಲೋ ಖಡ್ಗದಿಂದಲೋ ನಮ್ಮನ್ನು ದಂಡಿಸುವರು,” ಎಂದರು.