ವಿಮೋಚನಕಾಂಡ 8:21 - ಕನ್ನಡ ಸಮಕಾಲಿಕ ಅನುವಾದ21 ನೀನು ನನ್ನ ಜನರನ್ನು ಕಳುಹಿಸದೆ ಹೋದರೆ, ನಾನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಮನೆಗಳಿಗೂ ನೊಣಗಳನ್ನು ಕಳುಹಿಸುವೆನು. ಈಜಿಪ್ಟಿನವರ ಮನೆಗಳೂ, ಅವರು ವಾಸವಾಗಿರುವ ಭೂಮಿಯೂ ನೊಣಗಳಿಂದ ತುಂಬಿರುವುವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಆದರೆ ನೀನು, ನನ್ನ ಜನರಿಗೆ ಅಪ್ಪಣೆಕೊಡದೇ ಹೋದರೆ, ನಾನು ನಿನಗೂ, ನಿನ್ನ ಪರಿವಾರದವರಿಗೂ, ನಿನ್ನ ಮನೆಗಳಿಗೂ ನೊಣಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ, ಅವರ ಎಲ್ಲಾ ಭೂಮಿಗಳಲ್ಲಿಯೂ ಆ ನೊಣಗಳು ತುಂಬಿಕೊಳ್ಳುವವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಕೊಡದೆ ಹೋದರೆ ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಮಾರುಗಳಿಗೂ ನೊಣಗಳ ಕಾಟವನ್ನು ಉಂಟುಮಾಡುವೆನು. ಈಜಿಪ್ಟಿನವರು ವಾಸಿಸುವ ಮನೆಗಳಲ್ಲೂ ಅವರು ಕಾಲೂರುವ ನೆಲಗಳಲ್ಲೂ ಆ ನೊಣಗಳು ತುಂಬಿಕೊಳ್ಳುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಅಪ್ಪಣೆಕೊಡದೆ ಹೋದರೆ ನಾನು ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಗಳಿಗೂ ವಿಷದ ಹುಳಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ ಅವರು ಇರುವ ಎಲ್ಲಾ ಭೂವಿುಯಲ್ಲಿಯೂ ಆ ಹುಳಗಳು ತುಂಬಿಕೊಳ್ಳುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ಹುಳಗಳು ನಿನ್ನ ಮೇಲೆಯೂ ನಿನ್ನ ಅಧಿಕಾರಿಗಳ ಮೇಲೆಯೂ ನಿನ್ನ ಜನರ ಮೇಲೆಯೂ ನಿಮ್ಮ ಮನೆಗಳಲ್ಲಿಯೂ ತುಂಬಿಕೊಳ್ಳುವವು; ನೆಲದ ಮೇಲೆಲ್ಲಾ ಇರುವವು. ಅಧ್ಯಾಯವನ್ನು ನೋಡಿ |