Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 40:3 - ಕನ್ನಡ ಸಮಕಾಲಿಕ ಅನುವಾದ

3 ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ತೆರೆಯಿಂದ ಮರೆಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ತೆರೆಯಿಂದ ಮರೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪವಿತ್ರಗುಡಾರದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡು. ಪೆಟ್ಟಿಗೆಯನ್ನು ಪರದೆಯಿಂದ ಮುಚ್ಚಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 40:3
16 ತಿಳಿವುಗಳ ಹೋಲಿಕೆ  

ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ,


ಮಂಜೂಷವನ್ನು, ಅದರ ಕೋಲುಗಳನ್ನು, ಅವುಗಳೊಂದಿಗೆ ಕರುಣಾಸನವನ್ನು, ಮರೆಮಾಡುವ ಪರದೆಯನ್ನು,


ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.


ಆ ಹೋರಿಯ ರಕ್ತದಿಂದ ಸ್ವಲ್ಪ ತೆಗೆದುಕೊಂಡು, ಕರುಣಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು, ಕರುಣಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೇಕು.


ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.


“ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಬೇಕು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.


“ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು.


ಎರಡನೆಯ ತೆರೆಯ ಆಚೆ ಅತಿ ಪವಿತ್ರ ಸ್ಥಳ ಎಂದು ಕರೆಯಲಾದ ಗುಡಾರವಿತ್ತು.


ಏಕೆಂದರೆ ನಾನು ಈಜಿಪ್ಟಿನಿಂದ ಇಸ್ರಾಯೇಲರನ್ನು ಬರಮಾಡಿದ ದಿವಸ ಮೊದಲುಗೊಂಡು, ಇಂದಿನವರೆಗೂ ಆಲಯದಲ್ಲಿ ವಾಸಮಾಡದೆ ಒಂದು ಗುಡಾರದ ಸ್ಥಳದಿಂದ ಇನ್ನೊಂದು ಗುಡಾರದ ಸ್ಥಳಕ್ಕೂ, ಒಂದು ತಂಗುವ ಸ್ಥಳದಿಂದ ಇನ್ನೊಂದು ತಂಗುವ ಸ್ಥಳಕ್ಕೂ ಹೋಗುತ್ತಿದ್ದೆನು.


“ದೇವದರ್ಶನದ ಗುಡಾರ, ಒಡಂಬಡಿಕೆಯ ಮಂಜೂಷ, ಅದರ ಮೇಲಿರುವ ಕರುಣಾಸನ, ಗುಡಾರದ ಎಲ್ಲಾ ಉಪಕರಣಗಳು,


ಮೋಶೆಯು ಇಸ್ರಾಯೇಲರ ಇಡೀ ಸಮೂಹಕ್ಕೆ ಹೇಳಿದ್ದು: “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ.


ಈ ಪ್ರಕಾರ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲರು ಅದರಂತೆಯೇ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು