ವಿಮೋಚನಕಾಂಡ 39:3 - ಕನ್ನಡ ಸಮಕಾಲಿಕ ಅನುವಾದ3 ಅವರು ಬಂಗಾರವನ್ನು ಹೊಡೆದು, ತೆಳುವಾದ ತಗಡುಗಳನ್ನಾಗಿ ಮಾಡಿ, ಅದನ್ನು ಕತ್ತರಿಸಿ ಎಳೆಗಳನ್ನಾಗಿ ಮಾಡಿ, ಆ ಎಳೆಗಳನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡುವುದಕ್ಕೆ ಉಪಯೋಗಿಸಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದೊಡನೆಯೂ ಹತ್ತಿಯ ಬಟ್ಟೆಯೊಡನೆಯೂ ಕಸೂತಿ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸವನ್ನು ಮಾಡುವುದಕ್ಕಾಗಿ ಬಂಗಾರವನ್ನು ಬಡಿದು ಹಗುರವಾದ ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದೊಡನೆ ಮತ್ತು ನಾರಿನ ಬಟ್ಟೆಯೊಡನೆ ಕಲಾತ್ಮಕ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸ ಮಾಡುವುದಕ್ಕಾಗಿ ಬಂಗಾರವನ್ನು ತಟ್ಟಿ ತಗಡುಗಳನ್ನು ಮಾಡಿ, ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದೊಡನೆಯೂ ನಾರಿನ ಬಟ್ಟೆಯೊಡನೆಯೂ ವಿಚಿತ್ರವಾದ [ಕಸೂತಿ] ಕೆಲಸದವರ ಪದ್ಧತಿಯ ಮೇರೆಗೆ ಬುಟೇದಾರಿಯ ಕೆಲಸವನ್ನು ಮಾಡುವದಕ್ಕಾಗಿ ಬಂಗಾರವನ್ನು ಹೊಡೆದು ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 (ಅವರು ಚಿನ್ನವನ್ನು ಸುತ್ತಿಗೆಯಿಂದ ಹೊಡೆದು ತೆಳುವಾದ ತಗಡುಗಳನ್ನು ಮಾಡಿದರು. ಬಳಿಕ ಅವರು ಅದನ್ನು ಕತ್ತರಿಸಿ ಉದ್ದವಾದ ದಾರಗಳನ್ನಾಗಿ ಮಾಡಿದರು. ಅವರು ಚಿನ್ನವನ್ನು ನೀಲಿ, ನೇರಳೆ, ಕೆಂಪುದಾರಗಳಿಗೂ ಮತ್ತು ಶ್ರೇಷ್ಠ ನಾರುಬಟ್ಟೆಗೂ ಹೆಣೆದರು. ಇದು ಬಹಳ ನಿಪುಣನಾದ ಕೆಲಸಗಾರನು ಮಾಡಿದ ಕೆಲಸವಾಗಿತ್ತು.) ಅಧ್ಯಾಯವನ್ನು ನೋಡಿ |