ವಿಮೋಚನಕಾಂಡ 36:3 - ಕನ್ನಡ ಸಮಕಾಲಿಕ ಅನುವಾದ3 ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯಿಂದ ಪಡೆದುಕೊಂಡರು. ಇಸ್ರಾಯೇಲರು ಪ್ರತಿದಿನ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅವರು ದೇವಮಂದಿರದ ನಿರ್ಮಾಣಕ್ಕಾಗಿ ಜನರು ಕೊಟ್ಟಿದ್ದ ಕಾಣಿಕೆಗಳನ್ನು ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಯೇಲರು ಪ್ರತಿದಿನ ಬೆಳಿಗ್ಗೆ ಮೋಶೆಯ ಬಳಿಗೆ ಬಂದು ಹೆಚ್ಚೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಾಯೇಲ್ಯರು ಪ್ರತಿದಿನದ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಹೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಇಸ್ರೇಲರು ಕಾಣಿಕೆಗಳಾಗಿ ತಂದ ವಸ್ತುಗಳನ್ನೆಲ್ಲಾ ಮೋಶೆಯು ಅವರಿಗೆ ಕೊಟ್ಟನು. ಅವರು ದೇವರ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಈ ವಸ್ತುಗಳನ್ನು ಉಪಯೋಗಿಸಿದರು. ಪ್ರತಿ ಮುಂಜಾನೆ ಜನರು ಕಾಣಿಕೆಗಳನ್ನು ತರುತ್ತಲೇ ಇದ್ದರು. ಅಧ್ಯಾಯವನ್ನು ನೋಡಿ |