Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 36:10 - ಕನ್ನಡ ಸಮಕಾಲಿಕ ಅನುವಾದ

10 ಅವರು ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಐದೈದು ಪರದೆಗಳನ್ನು ಒಂದೊಂದಾಗಿ ಜೋಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಕೆಲಸಗಾರರು ಪರದೆಗಳನ್ನು ಒಟ್ಟಾಗಿ ಜೋಡಿಸಿ ಪರದೆಗಳ ಎರಡು ಭಾಗಗಳನ್ನಾಗಿ ಮಾಡಿದರು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 36:10
15 ತಿಳಿವುಗಳ ಹೋಲಿಕೆ  

ಆದ್ದರಿಂದ ನಮ್ಮಲ್ಲಿ ಆತ್ಮಿಕ ಪರಿಪಕ್ವತೆಯುಳ್ಳವರು ಇದೇ ಮನೋಭಾವವುಳ್ಳವರಾಗಿರಬೇಕು. ಕೆಲವು ವಿಷಯಗಳ ಮೇಲೆ ಭಿನ್ನಾಭಿಪ್ರಾಯವಿದ್ದರೆ, ಅದನ್ನೂ ದೇವರು ನಿಮಗೆ ಸ್ಪಷ್ಟಪಡಿಸುವರು.


ನೀವು ಒಂದೇ ಮನಸ್ಸು, ಒಂದೇ ಪ್ರೀತಿ, ಆತ್ಮ, ಹಾಗೂ ಒಂದೇ ಗುರಿಯುಳ್ಳವರಾಗಿ, ನನ್ನ ಸಂತೋಷವನ್ನು ಪರಿಪೂರ್ಣಗೊಳಿಸಿರಿ.


ಎಲ್ಲವನ್ನು ಎಲ್ಲಾ ವಿಧದಲ್ಲಿಯೂ ತುಂಬಿಸುವ ದೇವರಿಂದ ಕ್ರಿಸ್ತನ ದೇಹವಾಗಿರುವ ಸಭೆಯು ಪರಿಪೂರ್ಣ ಉಳ್ಳದ್ದಾಗಿದೆ.


ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ.


ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ.


ಪ್ರಿಯರೇ, ನೀವೆಲ್ಲರೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು, ನಿಮ್ಮೊಳಗೆ ಗುಂಪುಗಾರಿಕೆ, ಪಕ್ಷಬೇಧಗಳಿರದೆ, ಒಂದೇ ಮನಸ್ಸು ಮತ್ತು ಒಂದೇ ಆಲೋಚನೆಗಳಲ್ಲಿ ಪರಿಪೂರ್ಣವಾದ ಅನ್ಯೋನ್ಯತೆಯಲ್ಲಿರಬೇಕೆಂದು ನಾನು ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.


ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು.


“ಆಗ ನಾನು ಜನರ ತುಟಿಗಳನ್ನು ಶುದ್ಧೀಕರಿಸುವೆನು. ಅವರೆಲ್ಲರೂ ಯೆಹೋವ ದೇವರ ಹೆಸರಿನಿಂದ ಮೊರೆಯಿಡುವರು. ಏಕಮನಸ್ಸಿನಿಂದ ಆತನಿಗೆ ಸೇವೆಮಾಡುವರು.


ಸಹೋದರರು ಒಂದಾಗಿ ಬಾಳುವುದು ಎಷ್ಟೋ ಒಳ್ಳೆಯದು! ಎಷ್ಟೋ ರಮ್ಯವಾದದ್ದು!


ಯೆರೂಸಲೇಮು, ಗಂಭೀರವಾಗಿಯೂ ಗಟ್ಟಿಯಾಗಿಯೂ ಕಟ್ಟಿರುವ ಪಟ್ಟಣವಾಗಿದೆ.


ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಬೇಕು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಬೇಕು.


ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿದ್ದವು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದ್ದವು.


ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿದ್ದಲ್ಲದೆ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು