Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 35:31 - ಕನ್ನಡ ಸಮಕಾಲಿಕ ಅನುವಾದ

31 ಅವರು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಚಿನ್ನ, ಬೆಳ್ಳಿ, ತಾಮ್ರಗಳಿಂದ ಕೆಲಸ ನಡೆಸುವುದಕ್ಕೂ, ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ವಿಚಿತ್ರ ಕೆತ್ತನೆ ಕೆಲಸ ಮಾಡುವುದಕ್ಕೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಚಿನ್ನ ಬೆಳ್ಳಿ ತಾಮ್ರಗಳಿಂದ ಕೆಲಸನಡಿಸುವದಕ್ಕೂ ರತ್ನಗಳನ್ನು ಕೆತ್ತುವದಕ್ಕೂ ಮರದಲ್ಲಿ ವಿಚಿತ್ರವಾಗಿ ಕೆತ್ತನೇ ಕೆಲಸವನ್ನು ಮಾಡುವದಕ್ಕೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಯೆಹೋವನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿ, ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 35:31
13 ತಿಳಿವುಗಳ ಹೋಲಿಕೆ  

ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.


ಅವನು ದಾನನ ಪುತ್ರಿಯರಲ್ಲಿರುವ ಒಬ್ಬಳ ಮಗನಾಗಿದ್ದಾನೆ. ಅವನ ತಂದೆ ಟೈರಿನವನು. ಅವನು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಕಲ್ಲು, ಮರ, ಧೂಮ್ರವರ್ಣ, ನೀಲವರ್ಣ, ನಯವಾದ ನಾರಿನ ವಸ್ತ್ರ, ರಕ್ತವರ್ಣ ಇವುಗಳಲ್ಲಿ ಕೆಲಸವನ್ನು ಮಾಡುವುದಕ್ಕೂ ತರಬೇತಿಯನ್ನು ಹೊಂದಿದ್ದನು. ತನಗೆ ಒಪ್ಪಿಸಲಾಗುವ ಎಲ್ಲಾ ತರಹದ ಕೆತ್ತನೆಯ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನಿನ್ನ ತಂದೆಯೂ ನನ್ನ ಒಡೆಯನಾದ ದಾವೀದನೂ ಗೊತ್ತುಮಾಡಿದ ಕಲಾಕುಶಲರೊಡನೆ ಇವನು ಕೆಲಸಮಾಡಲಿ.


ಏಕೆಂದರೆ, ಜ್ಞಾನ ಮತ್ತು ತಿಳುವಳಿಕೆಯ ಎಲ್ಲಾ ನಿಕ್ಷೇಪಗಳೂ ಕ್ರಿಸ್ತ ಯೇಸುವಿನಲ್ಲಿಯೇ ಮರೆಯಾಗಿವೆ.


ಏಕೆಂದರೆ ಅವನ ದೇವರು ಅವನಿಗೆ ಸೂಚಿಸುತ್ತಾರೆ. ಮತ್ತು ಸರಿಯಾದ ಮಾರ್ಗವನ್ನು ಕಲಿಸುತ್ತಾರೆ.


ಇದಲ್ಲದೆ ನಾನು ಜ್ಞಾನದ ಆತ್ಮದಿಂದ ತುಂಬಿದ ವಿವೇಕದ ಹೃದಯವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.


ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ ಎಲ್ಲಾ ವಿಧವಾದ ಕೌಶಲ್ಯದಿಂದಲೂ ತುಂಬಿಸಿದ್ದೇನೆ.


ಆಗ ಮೋಶೆಯು ಇಸ್ರಾಯೇಲರಿಗೆ, “ನೋಡಿರಿ, ಯೆಹೋವ ದೇವರು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ಆರಿಸಿಕೊಂಡಿದ್ದಾರೆ,


ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದರಲ್ಲಿಯೂ


ಕೆತ್ತನೆಯ ಕೆಲಸಗಳನ್ನು, ವಿನ್ಯಾಸದ ಕೆಲಸಗಳನ್ನು, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ, ನಯವಾದ ನಾರುಬಟ್ಟೆ ಇವುಗಳಲ್ಲಿ ಕಸೂತಿ ಕೆಲಸಗಳನ್ನು ಮಾಡುವುದಕ್ಕೆ ಮತ್ತು ನೇಯ್ಗೆಯ ಕೆಲಸ ಮಾಡುವುದಕ್ಕೆ ಎಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಯೆಹೋವ ದೇವರು ಅವರಿಗೆ ಜ್ಞಾನವನ್ನು ಅನುಗ್ರಹಿಸಿದ್ದಾರೆ.


ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು