Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 34:25 - ಕನ್ನಡ ಸಮಕಾಲಿಕ ಅನುವಾದ

25 “ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕಹಬ್ಬದ ಬಲಿಯಲ್ಲಿ ಯಾವುದೂ ಬೆಳಗಿನವರೆಗೆ ಉಳಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 “ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಸ್ಕದಲ್ಲಿ ನೀವು ಸಮರ್ಪಿಸಿದ ಯಜ್ಞಮಾಂಸವನ್ನು ಮರುದಿನದ ಸೂರ್ಯೋದಯದವರೆಗೂ ಉಳಿಸಿಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ನನಗೆ ಬಲಿಯರ್ಪಿಸುವಾಗ ಆ ಬಲಿಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಸ್ಕದಲ್ಲಿ ನೀವು ಸಮರ್ಪಿಸುವ ಬಲಿ ಮಾಂಸವನ್ನು ಮರುದಿನದವರೆಗೂ ಉಳಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಸ್ಕದಲ್ಲಿ ನೀವು ಸಮರ್ಪಿಸಿದ ಯಜ್ಞಮಾಂಸವನ್ನು ಮರುದಿನದವರೆಗೂ ಉಳಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು; “ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 34:25
12 ತಿಳಿವುಗಳ ಹೋಲಿಕೆ  

“ಬಲಿ ಅರ್ಪಣೆಯ ರಕ್ತವನ್ನು ಹುಳಿಯಿರುವ ರೊಟ್ಟಿಯ ಸಂಗಡ ಅರ್ಪಿಸಬಾರದು. “ಯಾವುದೇ ಹಬ್ಬದ ಅರ್ಪಣೆಯಲ್ಲಿ ಕೊಬ್ಬನ್ನು ಬೆಳಗಿನವರೆಗೆ ಇಟ್ಟುಕೊಳ್ಳಬಾರದು.


ಅದರಲ್ಲಿ ಬೆಳಗಿನವರೆಗೆ ಏನನ್ನೂ ಉಳಿಸಬಾರದು. ಬೆಳಗಿನವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.


ಅದರೊಂದಿಗೆ ಹುಳಿರೊಟ್ಟಿಯನ್ನು ತಿನ್ನಬಾರದು. ಏಳು ದಿವಸ ಹುಳಿಯಿಲ್ಲದ ಶ್ರಮೆಯ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ತ್ವರೆಯಾಗಿ ಈಜಿಪ್ಟ್ ದೇಶದೊಳಗಿಂದ ನೀವು ಹೊರಗೆ ಬಂದದ್ದರಿಂದ ನೀವು ಜೀವಿಸುವ ದಿವಸಗಳಲ್ಲೆಲ್ಲಾ ಇದನ್ನು ಜ್ಞಾಪಕಮಾಡಿಕೊಳ್ಳಬೇಕು.


ಅವರು ಅದರಿಂದ ಮರುದಿವಸಕ್ಕೆ ಏನನ್ನೂ ಉಳಿಸಬಾರದು. ಅದರಲ್ಲಿ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು, ಪಸ್ಕದ ಸಮಸ್ತ ಕಟ್ಟಳೆಗಳ ಪ್ರಕಾರವಾಗಿ ಅದನ್ನು ಆಚರಿಸಬೇಕು.


ಉಪಕಾರ ಸ್ತುತಿಗಾಗಿ ಅವನು ಸಮಾಧಾನ ಬಲಿಯ ಮಾಂಸವನ್ನು ಅರ್ಪಿಸಲಾದ ದಿನವೇ ತಿನ್ನಬೇಕು. ಅವನು ಅದರಲ್ಲಿ ಬೆಳಗಿನವರೆಗೆ ಯಾವುದನ್ನೂ ಉಳಿಸಬಾರದು.


ಪ್ರತಿಷ್ಠೆ ಬಲಿ ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಡಬೇಕು. ಅದು ಪರಿಶುದ್ಧವಾಗಿರುವುದರಿಂದ ಅದನ್ನು ಮರುದಿನ ತಿನ್ನಬಾರದು.


ಹುಳಿ ಕಲಸಿದ್ದು ಯಾವುದೇ ಆಗಿರಲಿ ನೀವು ತಿನ್ನಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು,” ಎಂದು ಹೇಳಿದರು.


ಆ ರಾತ್ರಿಯಲ್ಲಿಯೇ ಮಾಂಸವನ್ನು ಸುಟ್ಟು, ಅದನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.


ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು.”


“ ‘ಯೆಹೋವ ದೇವರಿಗೆ ನೀನು ತರುವ ಧಾನ್ಯ ಸಮರ್ಪಣೆಯು ಯಾವುದೂ ಹುಳಿಯಿಂದ ಮಾಡಿದ್ದಾಗಿರಬಾರದು. ಏಕೆಂದರೆ ಯೆಹೋವ ದೇವರಿಗೆ ನೀವು ಬೆಂಕಿಯಿಂದ ಮಾಡುವ ಯಾವ ಸಮರ್ಪಣೆಯಲ್ಲಿ ಹುಳಿಯನ್ನಾಗಲಿ, ಜೇನನ್ನಾಗಲಿ ಬೆರೆಸಬಾರದು.


ಏಳು ದಿವಸ ಹುಳಿ ಕಲಸಿದ ರೊಟ್ಟಿ ನಿಮ್ಮ ಮೇರೆಗಳಲ್ಲಿ ಎಲ್ಲಿಯೂ ಕಾಣಬಾರದು. ಮೊದಲನೆಯ ದಿವಸದ ಸಾಯಂಕಾಲದಲ್ಲಿ ನೀವು ಯಜ್ಞವಾಗಿ ಸಮರ್ಪಿಸಿದ ಮಾಂಸದಲ್ಲಿ ಏನೂ ಮರುದಿವಸದವರೆಗೆ ಉಳಿಯಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು