Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 33:4 - ಕನ್ನಡ ಸಮಕಾಲಿಕ ಅನುವಾದ

4 ಜನರು ಈ ಕಠಿಣವಾದ ಮಾತುಗಳನ್ನು ಕೇಳಿದಾಗ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇಸ್ರಾಯೇಲ್ ಜನರು ದೋಷಾರೋಪಣೆಯ ಈ ವಾಕ್ಯವನ್ನು ಕೇಳಿದಾಗ ದುಃಖಪಟ್ಟರು. ಅವರಲ್ಲಿ ಒಬ್ಬರೂ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಈ ದುಃಖಕರವಾದ ಮಾತುಗಳನ್ನು ಕೇಳಿ, ಇಸ್ರಯೇಲರು ಶೋಕತಪ್ತರಾದರು; ಒಬ್ಬರೂ ಒಡವೆ ವಸ್ತುಗಳನ್ನು ಧರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಇಸ್ರಾಯೇಲ್ ಜನರು ಈ ದುಃಖಕರವಾದ ವಾಕ್ಯವನ್ನು ಕೇಳಿ ಮನಗುಂದಿದವರಾದರು; ಅವರಲ್ಲಿ ಒಬ್ಬರೂ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಈ ದುಃಖದ ಸಮಾಚಾರವನ್ನು ಕೇಳಿ ಜನರು ನೊಂದುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 33:4
20 ತಿಳಿವುಗಳ ಹೋಲಿಕೆ  

ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು.


ಆಮೇಲೆ ಸಮುದ್ರತೀರದ ಎಲ್ಲಾ ರಾಜಕುಮಾರರು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲುವಂಗಿಗಳನ್ನು ತೆಗೆದುಹಾಕುವರು, ಕಸೂತಿ ಕೆಲಸದಿಂದ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು. ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳುವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯವಾಗಿ ಭಯಭೀತರಾದರು.


ನಿಮ್ಮ ಮುಂಡಾಸಗಳು ನಿಮ್ಮ ತಲೆಯ ಮೇಲೆಯೂ ನಿಮ್ಮ ಪಾದರಕ್ಷೆಯು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವುವು. ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರಳುವಿರಿ.


ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ಮುಂಡಾಸವನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ನಿನ್ನ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳಬೇಡ, ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನಬೇಡಿರಿ.”


ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು.


“ದೇಶದ ಜನರೆಲ್ಲರಿಗೂ, ಯಾಜಕರಿಗೂ ಹೀಗೆ ಹೇಳು: ‘ನೀವು ಈ ಎಪ್ಪತ್ತು ವರ್ಷಗಳು ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸ ಮಾಡಿ, ದುಃಖಿಸುತ್ತಿದ್ದಾಗ, ಆ ನಿಮ್ಮ ಉಪವಾಸವು ನಿಜವಾಗಿಯೂ ನನಗಾಗಿ ಮಾಡಿದ್ದೀರೋ?


ಆಗ ಸರ್ವಶಕ್ತರಾದ ಯೆಹೋವ ದೇವರ ಆಲಯದಲ್ಲಿದ್ದ ಯಾಜಕರ ಸಂಗಡ ಮತ್ತು ಪ್ರವಾದಿಗಳ ಸಂಗಡ ನಾನು ಮಾತನಾಡಿ, “ಇಷ್ಟು ವರ್ಷ ಮಾಡಿದ ಪ್ರಕಾರ, ಐದನೆಯ ತಿಂಗಳಿನಲ್ಲಿ ಉಪವಾಸವಿದ್ದು, ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.


ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು.


ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ, ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ. ಧಾನ್ಯ ಮತ್ತು ದ್ರಾಕ್ಷಾರಸಗಳ ನಿಮಿತ್ತ ಅವರು ತಮ್ಮ ದೇವರುಗಳಿಗೆ ಮನವಿ ಮಾಡುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ, ಆದರೆ ಅವರು ನನ್ನಿಂದ ದೂರವಿರುತ್ತಾರೆ.


ನಿಶ್ಚಿಂತೆಯುಳ್ಳ ಸ್ತ್ರೀಯರೇ, ನೀವು ನಡುಗಿರಿ. ನಿರ್ಭೀತ ಪುತ್ರಿಯರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ, ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.


ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.


ಆಗ ಯೋಬನು ಎದ್ದು ತನ್ನ ಮೇಲಂಗಿಯನ್ನು ಹರಿದುಕೊಂಡನು. ನಂತರ ತನ್ನ ತಲೆ ಬೋಳಿಸಿಕೊಂಡು, ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿ,


ನಾನು ಇದನ್ನು ಕೇಳಿದಾಗ ನನ್ನ ವಸ್ತ್ರವನ್ನೂ, ನನ್ನ ನಿಲುವಂಗಿಯನ್ನೂ ಹರಿದು ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕಿತ್ತು, ಸ್ತಬ್ಧನಾಗಿ ಕುಳಿತುಕೊಂಡೆನು.


ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ, ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿ ತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು, ಯೆಹೋವ ದೇವರ ಆಲಯಕ್ಕೆ ಹೋದನು.


ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ, ಅವನು ತನ್ನ ವಸ್ತ್ರಗಳನ್ನು ಹರಿದು, ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನತೆಯಿಂದ ನಡೆದನು.


ಸೌಲನ ಮೊಮ್ಮಗ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವವರೆಗೂ ಅವನು ತನ್ನ ಪಾದಗಳನ್ನು ಕಟ್ಟಿಕೊಳ್ಳಲಿಲ್ಲ, ಗಡ್ಡವನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.


ಆಗ ಮೋಶೆಯು ಆರೋನನಿಗೂ ಅವನ ಪುತ್ರರಾದ ಎಲಿಯಾಜರನಿಗೂ ಈತಾಮಾರನಿಗೂ, “ನೀವು ಮರಣ ಹೊಂದದಂತೆಯೂ ಕೋಪವು ಜನರೆಲ್ಲರ ಮೇಲೆ ಬಾರದಂತೆಯೂ ನೀವು ನಿಮ್ಮ ಮುಚ್ಚಿದ ತಲೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಆದರೆ ನಿಮ್ಮ ಸಹೋದರರಾಗಿರುವ ಇಸ್ರಾಯೇಲಿನ ಮನೆತನದವರೆಲ್ಲರು ಯೆಹೋವ ದೇವರು ಉರಿಸಿದ ಬೆಂಕಿಯ ನಾಶದ ನಿಮಿತ್ತ ಗೋಳಾಡಲಿ.


ಅದರಂತೆಯೇ ಇಸ್ರಾಯೇಲರು ಹೋರೇಬ್ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು.


ಬೇತ್ ಷೆಮೆಷ್ ಊರಿನ ಜನರು ಯೆಹೋವ ದೇವರ ಮಂಜೂಷದೊಳಗೆ ಇಣಿಕಿ ನೋಡಿದ್ದರಿಂದ, ಯೆಹೋವ ದೇವರು ಅವರೊಳಗೆ ಎಪ್ಪತ್ತು ಮಂದಿಯನ್ನು ಕಠಿಣವಾಗಿ ದಂಡಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು