Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 32:26 - ಕನ್ನಡ ಸಮಕಾಲಿಕ ಅನುವಾದ

26 ಮೋಶೆಯು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, “ಯೆಹೋವ ದೇವರ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಲಿ,” ಎಂದನು. ಆಗ ಲೇವಿಯರೆಲ್ಲರು ಅವನ ಬಳಿಗೆ ಕೂಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅವರು ಕ್ರಮವಿಲ್ಲದೆ ಸ್ವೇಚ್ಛೆಯಾಗಿ ನಡೆದುಕೊಳ್ಳುವುದನ್ನು ನೋಡಿ ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, “ಯೆಹೋವನ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರೂ ಅವನ ಬಳಿಗೆ ಸೇರಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಹೀಗೆ ಅವರು ಕ್ರಮವಿಲ್ಲದೆ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದನ್ನು ಮೋಶೆ ನೋಡಿ, ಪಾಳೆಯದ ಹೊರಬಾಗಿಲಲ್ಲಿ ನಿಂತುಕೊಂಡು, “ಸರ್ವೇಶ್ವರನ ಪರವಾಗಿರುವವರೆಲ್ಲರು ನನ್ನ ಬಳಿಗೆ ಬರಬೇಕು,” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವರು ಕ್ರಮವಿಲ್ಲದೆ ಸ್ವೇಚ್ಫೆಯಾಗಿ ನಡೆದುಕೊಳ್ಳುವದನ್ನು ಮೋಶೆ ನೋಡಿ ಪಾಳೆಯದ ಬಾಗಲಲ್ಲಿ ನಿಂತುಕೊಂಡು - ಯೆಹೋವನ ಪಕ್ಷದವರೆಲ್ಲರು ನನ್ನ ಬಳಿಗೆ ಬರಬೇಕು ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 32:26
8 ತಿಳಿವುಗಳ ಹೋಲಿಕೆ  

“ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.


ಯೇಹುವು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ, “ನನ್ನ ಕಡೆ ಇರುವವರು ಯಾರು?” ಎಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿಯಲ್ಲಿಂದ ಅವನನ್ನು ನೋಡಿದರು.


ಇದಾದ ಮೇಲೆ ಯೆಹೋಶುವನು ಯೆರಿಕೋವಿನ ಬಳಿಯಲ್ಲಿ ಇದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಆಗ ಒಬ್ಬ ಮನುಷ್ಯನು ಅವನಿಗೆದುರಾಗಿ ನಿಂತಿದ್ದನು. ಆತನ ಕೈಯಲ್ಲಿ ಹಿರಿದ ಖಡ್ಗ ಇರುವುದನ್ನು ಕಂಡನು. ಯೆಹೋಶುವನು ಆತನ ಬಳಿಗೆ ಹೋಗಿ ಆತನಿಗೆ, “ನೀವು ನಮ್ಮವರೋ ಅಥವಾ ಶತ್ರು ಕಡೆಯವರೋ?” ಎಂದು ಕೇಳಿದನು.


ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು.


ಮೋಶೆಯು ಜನರು ಕ್ರಮವಿಲ್ಲದಿರುವುದನ್ನು ಕಂಡನು. ಆರೋನನು ಅವರನ್ನು ಮಿತಿಮೀರಿ ಇಷ್ಟಬಂದಂತೆ ಮಾಡುವದಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ಅವರ ವೈರಿಗಳ ಮುಂದೆ ಅಪಹಾಸ್ಯಕ್ಕೆ ಆಸ್ಪದವಾಯಿತು.


ಆಗ ಅವನು ಅವರಿಗೆ, “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಪ್ರತಿಯೊಬ್ಬನು ತನ್ನ ಖಡ್ಗವನ್ನು ಪಕ್ಕದಲ್ಲಿ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಂದು ದ್ವಾರದಿಂದ ಇನ್ನೊಂದು ದ್ವಾರಕ್ಕೆ ಹೋಗಿ ಹೋಗುತ್ತಾ ಬರುತ್ತಾ ತನ್ನ ಸಹೋದರನನ್ನೂ, ತನ್ನ ಜೊತೆಗಾರನನ್ನೂ ಮತ್ತು ನೆರೆಹೊರೆಯವನೆಂದು ಲಕ್ಷಿಸದೆ ಕೊಲ್ಲಲಿ,’ ” ಎಂದು ಹೇಳಿದನು.


ಅವನು ತನ್ನ ತಂದೆತಾಯಿಗಳ ಬಗ್ಗೆ, ‘ಅವರಿಗಾಗಿ ನನಗೆ ಗೌರವವಿಲ್ಲ.’ ಅವನು ತನ್ನ ಸಹೋದರರನ್ನೂ ಗುರುತಿಸಲಿಲ್ಲ ತನ್ನ ಸ್ವಂತ ಮಕ್ಕಳನ್ನೂ ಅರಿಯಲಿಲ್ಲ, ಏಕೆಂದರೆ ಅವನು ನಿಮ್ಮ ವಾಕ್ಯವನ್ನು ಕೈಗೊಂಡು ನಿಮ್ಮ ಒಡಂಬಡಿಕೆಯನ್ನು ಕಾಪಾಡಿದ್ದಾನೆ.


ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು? ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು