Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 31:15 - ಕನ್ನಡ ಸಮಕಾಲಿಕ ಅನುವಾದ

15 ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಯೆಹೋವ ದೇವರಿಗೆ ಪರಿಶುದ್ಧವಾದ ಸಬ್ಬತ್ ದಿನ. ಆ ಸಬ್ಬತ್ ದಿನದಲ್ಲಿ ಕೆಲಸ ಮಾಡುವವರೆಲ್ಲಾ ಸಾಯಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆರು ದಿನಗಳು ಕೆಲಸ ಮಾಡಬೇಕು. ಏಳನೆಯ ದಿನ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ. ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಆರು ದಿನಗಳು ಕೆಲಸ ಮಾಡಬಹುದು. ಏಳನೆಯ ದಿನ ವಿಶ್ರಾಂತಿದಿನವಾದ ಸಬ್ಬತ್, ಸರ್ವೇಶ್ವರನಾದ ನನಗೆ ಪರಿಶುದ್ಧ ದಿನ. ಇಂಥ ಸಬ್ಬತ್ ದಿನದಲ್ಲಿ ದುಡಿಯುವವನಿಗೆ ಮರಣ ಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆರು ದಿನಗಳು ಕೆಲಸಮಾಡಬೇಕು; ಏಳನೆಯ ದಿವಸ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ; ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 31:15
21 ತಿಳಿವುಗಳ ಹೋಲಿಕೆ  

ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.


“ ‘ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಸಬ್ಬತ್ ದಿನ. ಆ ದಿನವು ಪರಿಶುದ್ಧ ದಿನವಾಗಿರುವುದು. ನೀವು ಆ ದಿನದಲ್ಲಿ ಕೆಲಸಮಾಡಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿಯೂ ಅದು ಯೆಹೋವ ದೇವರ ಸಬ್ಬತ್ ದಿನವಾಗಿರುವುದು.


ಅದಕ್ಕೆ ಮೋಶೆ, “ಯೆಹೋವ ದೇವರು ಆಜ್ಞಾಪಿಸಿದ ಮಾತು ಇದೇ: ‘ನಾಳೆ ಯೆಹೋವ ದೇವರಿಗೆ ಪರಿಶುದ್ಧ ಸಬ್ಬತ್ ದಿನವಾಗಿದೆ. ಇಂದೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನವರೆಗೆ ಇಟ್ಟುಕೊಳ್ಳಿರಿ,’ ” ಎಂದನು.


“ಆರು ದಿನಗಳು ಕೆಲಸಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು.


ಅವರು ಮನೆಗೆ ಹಿಂತಿರುಗಿ ಪರಿಮಳ ದ್ರವ್ಯವನ್ನೂ ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡರು; ಆದರೆ ಮೋಶೆಯ ಆಜ್ಞಾನುಸಾರವಾಗಿ ಸಬ್ಬತ್ ದಿನದಲ್ಲಿ ವಿಶ್ರಮಿಸಿಕೊಂಡರು.


ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.


ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು.


ನನಗೂ, ಇಸ್ರಾಯೇಲರಿಗೂ ಇದೇ ಶಾಶ್ವತವಾದ ಗುರುತು. ಏಕೆಂದರೆ ಆರು ದಿವಸಗಳಲ್ಲಿ ಯೆಹೋವ ದೇವರು ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸ ನಿಲ್ಲಿಸಿ, ವಿಶ್ರಮಿಸಿಕೊಂಡರು ಎಂದು ಹೇಳು,’ ” ಎಂದರು.


ಆದ್ದರಿಂದ ದೇವಜನರಿಗೆ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಇದೆ.


“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಒಳಗಿನ ಅಂಗಳದ ಪೂರ್ವದಿಕ್ಕಿನ ಎದುರಾಗಿರುವ ಬಾಗಿಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲಾಗಬೇಕು. ಆದರೆ ಸಬ್ಬತ್ ದಿನದಲ್ಲಿ ಅದು ತೆರೆದಿರಬೇಕು. ಅಮಾವಾಸ್ಯೆಯ ದಿನದಲ್ಲೂ ಅದು ತೆರೆದಿರಬೇಕು.


ಇದು ನಿಮಗೆ ಸಬ್ಬತ್ ದಿನವಾಗಿರುವುದು. ನೀವು ನಿಮ್ಮನ್ನು ಉಪವಾಸ ಇಡಬೇಕು. ಆ ತಿಂಗಳಿನ ಒಂಬತ್ತನೆಯ ದಿವಸದ ಸಾಯಂಕಾಲದಿಂದ ಹಿಡಿದು ಮರುದಿನದ ಸಂಜೆಯವರೆಗೆ ಸಬ್ಬತ್ ದಿನವನ್ನು ಆಚರಿಸಬೇಕು,” ಎಂಬದೇ.


“ ‘ಹೀಗಿರುವುದರಿಂದ ನೀವು ಸಬ್ಬತ್ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರ ಮಾಡುವ ಪ್ರತಿಯೊಬ್ಬನು ಸಾಯಲೇಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ, ಅವರನ್ನು ನಿಮ್ಮ ಜನರೊಳಗಿಂದ ತೆಗೆದುಹಾಕಬೇಕು.


ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ,” ಎಂದನು.


“ಆರು ದಿವಸ ನೀವು ನಿಮ್ಮ ಕೆಲಸಗಳನ್ನು ಮಾಡಬೇಕು. ಏಳನೆಯ ದಿನದಲ್ಲಿ ನೀವು, ನಿಮ್ಮ ಎತ್ತು ಮತ್ತು ನಿಮ್ಮ ಕತ್ತೆ ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿಮ್ಮ ಮನೆಯಲ್ಲಿ ಜನಿಸಿದ ದಾಸದಾಸಿಯರೂ ಪರದೇಶಸ್ಥರೂ ದಣಿವು ಆರಿಸಿಕೊಳ್ಳಲಿ.


ಹೀಗಿರಲಾಗಿ ಇಸ್ರಾಯೇಲರು ತಮ್ಮ ತಲತಲಾಂತರಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ ದಿನವನ್ನು ಕೈಗೊಳ್ಳಬೇಕು.


ಸಬ್ಬತ್ ದಿನದಲ್ಲಿ ನೀವು ವಾಸಮಾಡುವ ಯಾವ ಮನೆಯಲ್ಲಿಯೂ ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.


“ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ, ನಿಮ್ಮೊಡನೆ ವಾಸಿಸುತ್ತಿರುವ ಪರಕೀಯರೂ, ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು, ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು.


ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು