Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 3:20 - ಕನ್ನಡ ಸಮಕಾಲಿಕ ಅನುವಾದ

20 ಹೀಗಿರುವುದರಿಂದ ನನ್ನ ಕೈಯನ್ನು ಚಾಚಿ ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿ, ನಾನು ಅದನ್ನು ನಾನಾ ವಿಧವಾಗಿ ಬಾಧಿಸುವೆನು. ತರುವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆದಕಾರಣ ನಾನು ನನ್ನ ಕೈಯನ್ನು ಚಾಚಿ ಐಗುಪ್ತ ದೇಶದಲ್ಲಿ ಮಹತ್ಕಾರ್ಯಗಳನ್ನು ಮಾಡಿ ಅದನ್ನು ನಾನಾ ವಿಧವಾಗಿ ಬಾಧಿಸುವೆನು. ಅನಂತರ ಅರಸನು ನಿಮ್ಮನ್ನು ಕಳುಹಿಸಿಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆದಕಾರಣ ನನ್ನ ಭುಜಬಲವನ್ನು ಪ್ರದರ್ಶಿಸುವೆನು. "ಅಲ್ಲಿ ಮಹಾತ್ಕಾರ್ಯಗಳನ್ನು ಮಾಡಿ, ಈಜಿಪ್ಟ್ ದೇಶವನ್ನೆ ನಾನಾವಿಧವಾಗಿ ಬಾಧಿಸುವೆನು. ಆಮೇಲೆ ಅರಸನು ನಿಮ್ಮನ್ನು ಬಿಡುಗಡೆಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆದಕಾರಣ ನಾನು ಕೈಚಾಚಿ ಐಗುಪ್ತದೇಶದ ಮಧ್ಯದಲ್ಲಿ ಮಹತ್ಕಾರ್ಯಗಳನ್ನು ಮಾಡಿ ಅದನ್ನು ನಾನಾ ವಿಧವಾಗಿ ಬಾಧಿಸುವೆನು; ಆಮೇಲೆ ಅರಸನು ನಿಮ್ಮನ್ನು ಬಿಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆದ್ದರಿಂದ ನಾನು ಕೈಚಾಚಿ ಈಜಿಪ್ಟಿನ ವಿರುದ್ಧ ಮಹತ್ಕಾರ್ಯಗಳನ್ನು ಮಾಡಿ ಅನೇಕ ವಿಧದಲ್ಲಿ ಅದನ್ನು ಬಾಧಿಸುವೆನು. ಆಗ ಅವನು ನಿಮ್ಮನ್ನು ಹೋಗಗೊಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 3:20
30 ತಿಳಿವುಗಳ ಹೋಲಿಕೆ  

ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.


ಈಜಿಪ್ಟಿನವರು ಗರ್ವಿಗಳಾಗಿ ಇಸ್ರಾಯೇಲರನ್ನು ಕುಗ್ಗಿಸಿದಾಗ, ನೀವು ಫರೋಹನ ಮೇಲೆಯೂ, ಅವನ ಸಮಸ್ತ ಅಧಿಕಾರಿಗಳ ಮೇಲೆಯೂ, ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದಿರಿ. ಈ ಪ್ರಕಾರವೇ ನೀವು ಇಂದಿನವರೆಗೂ ನಿಮ್ಮ ಹೆಸರಿನ ಕೀರ್ತಿಯನ್ನು ಸ್ಥಾಪಿಸಿದ್ದೀರಿ.


ಯೆಹೋವ ದೇವರು ನಮ್ಮ ಕಣ್ಣ ಮುಂದೆಯೇ ಈಜಿಪ್ಟಿನ ಮೇಲೆಯೂ, ಫರೋಹನ ಮೇಲೆಯೂ, ಅವನ ಎಲ್ಲಾ ಮನೆಯ ಮೇಲೆಯೂ ಭಯಂಕರವಾದ ದೊಡ್ಡ ಗುರುತುಗಳನ್ನೂ, ಅದ್ಭುತಗಳನ್ನೂ ಕಳುಹಿಸಿದರು.


ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.


“ಆದ್ದರಿಂದ ಇಸ್ರಾಯೇಲರಿಗೆ, ‘ನಾನೇ ಯೆಹೋವ ದೇವರು. ನಾನು ನಿಮ್ಮನ್ನು ಈಜಿಪ್ಟಿನ ಬಿಟ್ಟಿಕೆಲಸದಿಂದ ಅವರಿಗೆ ದಾಸತ್ವದಲ್ಲಿರುವುದರಿಂದ, ನಾನು ಚಾಚಿದ ಬಾಹುವಿನಿಂದಲೂ ಬಲವಾದ ನ್ಯಾಯತೀರ್ಪುಗಳಿಂದಲೂ ನಿಮ್ಮನ್ನು ಬಿಡಿಸುವೆನು.


ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.


ಆಗ ಅವರು ಈಜಿಪ್ಟಿನಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿಯಾಗದ ಕಾರಣ, ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿದರು. ಏಕೆಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಈಜಿಪ್ಟಿನಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ.


ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡೆಸುತ್ತೇನೆ.


ಯೆಹೋವ ದೇವರೇ, ನಿಮ್ಮ ಕೈ ಮೇಲಕ್ಕೆ ಎತ್ತಲಾಗಿದೆ. ಆದರೆ ಅವರು ಅದನ್ನು ಕಾಣುವುದಿಲ್ಲ. ನಿಮ್ಮ ಜನರಿಗಾಗಿ ನಿಮ್ಮ ಉತ್ಸಾಹವನ್ನು ಅವರು ನೋಡಲಿ ಮತ್ತು ನಾಚಿಕೆಪಡಲಿ; ನಿನ್ನ ವಿರೋಧಿಗಳಿಗಾಗಿದ್ದ ಅಗ್ನಿಯು ಅದನ್ನು ದಹಿಸಿಬಿಡಲಿ.


ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರನ್ನು ಹೊಡೆಯುವರು; ಗಾಯಮಾಡಿ ಸ್ವಸ್ಥ ಮಾಡುವರು. ಅವರು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು, ದೇವರು ಅವರನ್ನು ಆಲೈಸಿ ಸ್ವಸ್ಥ ಮಾಡುವರು.


ಹಾಮ ದೇಶದಲ್ಲಿ ಅದ್ಭುತಗಳನ್ನೂ, ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.


ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.


ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು.


ಅವರು ಒಬ್ಬ ಪ್ರವಾದಿಯನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದರು. ಅವನು ಅವರಿಗೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, “ನೀವು ದಾಸತ್ವದಲ್ಲಿದ್ದ ನಿಮ್ಮನ್ನು ನಾನು ಈಜಿಪ್ಟಿನಿಂದ ಬರಮಾಡಿದೆನು.


ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿ ನಿಮ್ಮ ಕಣ್ಣ ಮುಂದೆಯೇ ನಿಮಗೆ ಮಾಡಿದ್ದೆಲ್ಲದರ ಹಾಗೆ ಯಾವ ದೇವರು ಒಂದು ಜನಾಂಗವನ್ನು ಮತ್ತೊಂದು ಜನಾಂಗದಿಂದ ತಮಗಾಗಿ ಆಯ್ದು ತೆಗೆದುಕೊಳ್ಳುವುದಕ್ಕೆ ಪರೀಕ್ಷೆಗಳು, ಗುರುತುಗಳು, ಅದ್ಭುತಗಳು ಇವುಗಳ ಮೂಲಕವಾಗಿಯೂ, ಯುದ್ಧದಿಂದಲೂ, ಭುಜಬಲದಿಂದಲೂ, ಚಾಚಿದ ತೋಳಿನಿಂದಲೂ, ದೊಡ್ಡ ಭಯಗಳಿಂದಲೂ ಪ್ರಯತ್ನ ಮಾಡಿದರೋ?


ಯೆಹೋವ ದೇವರು ಮೋಶೆಗೆ, “ಇನ್ನು ಒಂದೇ ಉಪದ್ರವವನ್ನು ಫರೋಹನ ಮೇಲೆಯೂ, ಈಜಿಪ್ಟ್ ಮೇಲೆಯೂ ಬರಮಾಡುವೆನು. ಆಮೇಲೆ ಅವನು ಇಲ್ಲಿಂದ ಕಳುಹಿಸುವನು. ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲರನ್ನೂ ಕಳುಹಿಸಿಬಿಡುವನು.


ಆಗ ಯೆಹೋವ ದೇವರು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನನ್ನ ಬಲವಾದ ಹಸ್ತವನ್ನು ಕಂಡು ಅವನು ಅವರನ್ನು ಹೋಗಗೊಡಿಸುವನು. ನನ್ನ ಬಲವಾದ ಹಸ್ತದ ಕಾರಣದಿಂದ ಅವನು ಅವರನ್ನು ತನ್ನ ದೇಶದೊಳಗಿಂದ ಹೊರಡಿಸುವನು,” ಎಂದರು.


ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.


ಆಗ ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗುವಾಗ, ನಾನು ನಿನ್ನ ಕೈಯಲ್ಲಿ ಮಾಡಿಸಿದ ಎಲ್ಲಾ ಸೂಚಕಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವುದಿಲ್ಲ.


ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.


ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.


ಯೆಹೋವ ದೇವರೇ, ನಿಮ್ಮ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳದ್ದಾಗಿದೆ; ಯೆಹೋವ ದೇವರೇ, ನಿಮ್ಮ ಬಲಗೈ ಶತ್ರುವನ್ನು ಜಜ್ಜಿ ಪುಡಿ ಮಾಡಿತು.


ಯೆಹೋವ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ವೈಭವ ಹೊಂದಿದವರೂ, ಮಹಿಮೆಯಲ್ಲಿ ಅತಿಶಯರೂ, ಅದ್ಭುತಗಳನ್ನು ಮಾಡುವವರೂ ಆದ ನಿಮ್ಮ ಹಾಗೆ ಯಾರಿದ್ದಾರೆ?


ನೀನು ಈಜಿಪ್ಟ್ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವರಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು