Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 28:34 - ಕನ್ನಡ ಸಮಕಾಲಿಕ ಅನುವಾದ

34 ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಚಿನ್ನದ ಗೆಜ್ಜೆಯೂ ದಾಳಿಂಬೆಯೂ ಒಂದಾದ ಮೇಲೆ ಒಂದು ಆ ನಿಲುವಂಗಿಯ ಅಂಚಿನ ಸುತ್ತಲೂ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಚಿನ್ನದ ಗೆಜ್ಜೆಯು ಹಾಗು ದಾಳಿಂಬೆಯಂತಿರುವ ಚಂಡು ಒಂದಾದ ಮೇಲೆ ಒಂದು ಆ ಮೇಲಂಗಿಯ ಅಂಚಿನ ಸುತ್ತಲು ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಚಿನ್ನದ ಗೆಜ್ಜೆಯೂ ದಾಳಿಂಬದಂತಿರುವ ಚಂಡೂ ಒಂದಾದ ಮೇಲೆ ಒಂದು ಆ ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 28:34
15 ತಿಳಿವುಗಳ ಹೋಲಿಕೆ  

ಕರ್ತ ಯೇಸುವಿಗೆ ಯೋಗ್ಯರಾಗಿ ಜೀವಿಸಿ ಎಲ್ಲಾ ವಿಧದಲ್ಲಿ ಅವರನ್ನೇ ಮೆಚ್ಚಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯದಲ್ಲಿ ಫಲಕೊಡುತ್ತಾ ದೇವರ ತಿಳುವಳಿಕೆಯಲ್ಲಿ ವೃದ್ಧಿಯಾಗುತ್ತಿರಬೇಕೆಂತಲೂ


ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.


ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು. ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು. ನಾನು ದ್ರಾಕ್ಷಿ ಮಿಶ್ರಪಾನಕವನ್ನು ಕೊಡುತ್ತಿದ್ದೆನು. ದಾಳಿಂಬೆ ರಸವನ್ನು ನಿನಗೆ ಕುಡಿಸುತ್ತಿದ್ದೆನು.


ದ್ರಾಕ್ಷಿಬಳ್ಳಿಯು ಚಿಗುರಿದೆಯೋ, ದಾಳಿಂಬೆ ಗಿಡ ಹೂಬಿಟ್ಟಿದೆಯೋ ಎಂದು ಕಣಿವೆಯಲ್ಲಿನ ಫಲಗಳನ್ನು ನೋಡಲು ನಾನು ಬಾದಾಮಿಯ ತೋಟಕ್ಕೆ ಹೋದೆನು.


ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.


ನಿನ್ನ ತೋಟದಲ್ಲಿ ದಾಳಿಂಬೆ ವನವೂ ಫಲಕೊಡುವ ಉತ್ತಮ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಇವೆ.


ನಿನ್ನ ತುಟಿ ಕೆಂಪು ದಾರದ ಹಾಗೆ ಇವೆ. ನಿನ್ನ ಮಾತು ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆ ವಿಭಾಗಿಸಿದ ದಾಳಿಂಬೆಯ ಹಣ್ಣಿನ ಹಾಗೆ ಇದೆ.


ಅಡವಿಯ ಮರಗಳಲ್ಲಿ ಸೇಬಿನ ಮರದಂತೆ ಯುವಜನರಲ್ಲಿ ನನ್ನ ಪ್ರಿಯನಿದ್ದಾನೆ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತುಕೊಂಡೆನು. ಅವನ ಫಲವು ನನ್ನ ರುಚಿಗೆ ಮಧುರವಾಗಿತ್ತು.


ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.


ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ದಾಳಿಂಬೆ ಹಣ್ಣಿನಂತೆ ಅದರ ಅಂಚಿನ ಸುತ್ತಲೂ ಮಾಡಿ, ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನೂ ಸುತ್ತಲೂ ಇರಿಸಬೇಕು.


ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಅವನು ಯೆಹೋವ ದೇವರ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ, ಅವನು ಸಾಯದಂತೆ ಅವನ ಶಬ್ದವು ಕೇಳಿಸಬೇಕು.


ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಿದರು. ಅದು ನೇಕಾರನ ಕೆಲಸವಾಗಿತ್ತು.


ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಸೇವೆಗೋಸ್ಕರ ಮಾಡಿದ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು