ವಿಮೋಚನಕಾಂಡ 28:29 - ಕನ್ನಡ ಸಮಕಾಲಿಕ ಅನುವಾದ29 “ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲರ ಹೆಸರುಗಳನ್ನು ಯಾವಾಗಲೂ ಯೆಹೋವ ದೇವರ ಮುಂದೆ ಜ್ಞಾಪಕ ಮಾಡುವುದಕ್ಕಾಗಿ ನ್ಯಾಯದ ಎದೆಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ನ್ಯಾಯತೀರ್ಪಿನ ಎದೆಯ ಪದಕದ ಮೇಲೆ ಇಸ್ರಾಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ಸತತವಾಗಿ ಯೆಹೋವನ ನೆನಪಿಗೆ ತರುವುದಕ್ಕಾಗಿ ಅದನ್ನು ತನ್ನ ಎದೆಯ ಮೇಲೆ ನಿತ್ಯವೂ ಧರಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 “ದೈವನಿರ್ಣಯದ ಚೀಲವುಳ್ಳ ಆ ಫಲಕದ ಮೇಲೆ ಇಸ್ರಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಅದನ್ನು ತನ್ನ ಎದೆಯ ಮೇಲೆ ಧರಿಸಿಕೊಂಡು ಪವಿತ್ರಸ್ಥಾನದೊಳಗೆ ಬರುವಾಗಲೆಲ್ಲಾ ಆ ಹೆಸರುಗಳನ್ನು ಸರ್ವೇಶ್ವರನಾದ ನನ್ನ ನೆನಪಿಗೆ ಸತತವಾಗಿ ತರುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ದೈವನಿರ್ಣಯದ ಪದಕದ ಮೇಲೆ ಇಸ್ರಾಯೇಲ್ಯರ ಕುಲಗಳ ಹೆಸರುಗಳು ಬರೆದಿರುವದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ನಿತ್ಯವಾಗಿ ಯೆಹೋವನ ನೆನಪಿಗೆ ತರುವದಕ್ಕಾಗಿ ತನ್ನ ಹೃದಯದ ಮೇಲೆ ವಹಿಸುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. ಅಧ್ಯಾಯವನ್ನು ನೋಡಿ |