Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 27:20 - ಕನ್ನಡ ಸಮಕಾಲಿಕ ಅನುವಾದ

20 “ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ದೀಪವು ಯಾವಾಗಲೂ ಉರಿಯುವಂತೆ ಇಸ್ರಾಯೇಲ್ಯರು ಒಲಿವ್ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಒಲಿವ್ ಎಣ್ಣೆಯನ್ನು ತೆಗೆದುಕೊಂಡು ಬರುವಂತೆ ಅವರಿಗೆ ಅಪ್ಪಣೆಕೊಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 “ಆ ದೀಪವು ಯಾವಾಗಲೂ ಉರಿಯುತ್ತಿರಬೇಕು. ಅದಕ್ಕೆ ಎಣ್ಣೇ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಎಣ್ಣೆಯನ್ನು ತೆಗೆದುಕೊಡಬೇಕೆಂದು ಇಸ್ರಯೇಲರಿಗೆ ಅಪ್ಪಣೆ ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ದೀಪವು ಯಾವಾಗಲೂ ಉರಿಯುವಂತೆ ಇಸ್ರಾಯೇಲ್ಯರು ಎಣ್ಣೇಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಎಣ್ಣೆಯನ್ನು ತೆಗೆದುಕೊಡಬೇಕೆಂದು ಅವರಿಗೆ ಅಪ್ಪಣೆಯನ್ನು ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಉತ್ತಮವಾದ ಆಲಿವ್‌ಎಣ್ಣೆಯನ್ನು ತರಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಪ್ರತಿ ಸಾಯಂಕಾಲ ಉರಿಸುವ ದೀಪಕ್ಕೆ ಈ ಎಣ್ಣೆಯನ್ನು ಉಪಯೋಗಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 27:20
13 ತಿಳಿವುಗಳ ಹೋಲಿಕೆ  

ನೀವು ನನ್ನ ವೈರಿಗಳ ಮುಂದೆಯೇ ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ. ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.


“ಹಿಪ್ಪೆಯ ಮರ ಅವುಗಳಿಗೆ, ‘ಯಾವುದರಿಂದ ದೇವರನ್ನೂ, ಮನುಷ್ಯನನ್ನೂ ಘನಪಡಿಸುತ್ತಾರೋ, ಈ ನನ್ನ ಎಣ್ಣೆಯನ್ನು ಬಿಟ್ಟು, ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ?’ ಎಂದಿತು.


ಶುದ್ಧವಾದ ದೀಪಸ್ತಂಭವನ್ನು, ಅದರ ದೀಪಗಳನ್ನು, ಕ್ರಮವಾಗಿಡುವ ದೀಪಗಳನ್ನು, ಅದರ ಉಪಕರಣಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು,


ಇವರು, “ಎಣ್ಣೆಯ ಮರಗಳೂ ಭೂಲೋಕದ ಒಡೆಯ ಆಗಿರುವವರ ಮುಂದೆ ನಿಂತಿರುವ ಎರಡು ದೀಪಸ್ತಂಭಗಳೂ ಆಗಿದ್ದಾರೆ.”


ದೀಪಕ್ಕಾಗಿ ಓಲಿವ್ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,


ಗುಡಾರದ ಕೆಲಸಕ್ಕೆ ಬೇಕಾಗುವ ಎಲ್ಲಾ ಉಪಕರಣಗಳು, ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದವುಗಳಾಗಿರಬೇಕು.


ದೀಪಕ್ಕಾಗಿ ಓಲಿವ್ ಎಣ್ಣೆ ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಮತ್ತು ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,


ಸುಗಂಧದ್ರವ್ಯಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆಯನ್ನೂ ತಂದರು.


ಮೇಜನ್ನು ಒಳಗೆ ತಂದು, ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪಸ್ತಂಭವನ್ನು ಒಳಗೆ ತಂದು, ನೀನು ಅದರ ದೀಪಗಳನ್ನು ಅಂಟಿಸಬೇಕು.


ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು