Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 25:8 - ಕನ್ನಡ ಸಮಕಾಲಿಕ ಅನುವಾದ

8 “ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 “ನಾನು ಅವರ ಮಧ್ಯದಲ್ಲಿ ವಾಸಮಾಡುವುದಕ್ಕೆ ನನಗೆ ಒಂದು ಗುಡಾರವನ್ನು ಕಟ್ಟಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನಾನು ಜನರ ಮಧ್ಯೆ ವಾಸಿಸುವುದಕ್ಕೆ ನನಗೊಂದು ಗುಡಾರವನ್ನು ಕಟ್ಟಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಾನು ಅವರ ಮಧ್ಯದಲ್ಲಿ ವಾಸಿಸುವದಕ್ಕೆ ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಇದಲ್ಲದೆ ದೇವರು ಮೋಶೆಗೆ, “ಜನರು ನನಗೋಸ್ಕರವಾಗಿ ಒಂದು ಪವಿತ್ರ ಗುಡಾರವನ್ನು ಕಟ್ಟಬೇಕು. ಆಗ ನಾನು ಅವರ ನಡುವೆ ಅದರಲ್ಲಿ ವಾಸಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 25:8
25 ತಿಳಿವುಗಳ ಹೋಲಿಕೆ  

ದೇವರ ಆಲಯಕ್ಕೂ ವಿಗ್ರಹಗಳಿಗೂ ಏನು ಒಪ್ಪಂದ? ನಾವು ಜೀವಿಸುವ ದೇವರ ಆಲಯವಾಗಿದ್ದೇವೆ. ದೇವರು ಹೀಗೆ ಹೇಳಿದ್ದಾರೆ: “ನಾನು ಅವರೊಂದಿಗೆ ವಾಸಿಸುವೆನು, ಅವರ ಮಧ್ಯದಲ್ಲಿ ತಿರುಗಾಡುವೆನು. ನಾನು ಅವರಿಗೆ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.”


ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು.


ನನ್ನ ಜನವಾದ ಇಸ್ರಾಯೇಲರ ಕೈಬಿಡದೆ, ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿರುವೆನು,” ಎಂದರು.


ಇಸ್ರಾಯೇಲರ ಮಧ್ಯದಲ್ಲಿ ನಾನು ವಾಸಮಾಡಿ, ಅವರಿಗೆ ನಾನು ದೇವರಾಗಿರುವೆನು.


“ಚೀಯೋನ್ ಪುತ್ರಿಯೇ, ಹಾಡಿ ಹರ್ಷಿಸು. ಏಕೆಂದರೆ, ನಾನು ಬರುವೆನು ಮತ್ತು ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಚೀಯೋನಿಗೆ ನಾನು ತಿರುಗಿಕೊಂಡು, ನಾನು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು. ಆಗ ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೇನಾಧೀಶ್ವರ ಯೆಹೋವ ದೇವರ ಪರ್ವತವು ಪರಿಶುದ್ಧ ಪರ್ವತವೆಂದೂ ಕರೆಯಿಸಿಕೊಳ್ಳುವುದು.”


ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ. ಏಕೆಂದರೆ, ಇಸ್ರಾಯೇಲಿನ ಪರಿಶುದ್ಧರು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವರಾಗಿದ್ದಾರೆ.”


ಸ್ತ್ರೀ ಪುರುಷವೆಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನು ಹೊರಹಾಕಬೇಕು. ನಾನು ಅವರ ಮಧ್ಯದಲ್ಲಿ ವಾಸಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಪಾಳೆಯದ ಹೊರಗೆ ಕಳುಹಿಸಬೇಕು,” ಎಂಬುದೆ.


ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ಮತ್ತು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನೇ ಯೆಹೋವ ದೇವರು.


ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ, ಯೆಹೋವ ದೇವರ ಮುಂದಿನ ಪವಿತ್ರ ಸ್ಥಳದ ತೆರೆಯ ಮುಂದೆ ರಕ್ತವನ್ನು ಏಳು ಸಾರಿ ಚಿಮುಕಿಸಬೇಕು.


“ಯೆಹೋವ ದೇವರು ನನ್ನ ಬಲವೂ ಕೀರ್ತನೆಯೂ ಆಗಿದ್ದಾರೆ; ಅವರು ನನ್ನ ರಕ್ಷಣೆಯಾದರು; ಅವರು ನನ್ನ ದೇವರು, ಅವರನ್ನು ಕೊಂಡಾಡುವೆನು; ಅವರು ನನ್ನ ತಂದೆಯ ದೇವರು, ನಾನು ಅವರನ್ನು ಘನಪಡಿಸುವೆನು.


ಮೋಶೆಯು ಆರೋನನ ಚಿಕ್ಕಪ್ಪನಾದ ಉಜ್ಜೀಯೇಲನ ಮಕ್ಕಳಾದ ಮೀಶಾಯೇಲನನ್ನೂ ಎಲ್ಜಾಫಾನನನ್ನೂ ಕರೆದು, “ನಿಮ್ಮ ಸಹೋದರರನ್ನು ಪರಿಶುದ್ಧ ಸ್ಥಳದಿಂದ ಪಾಳೆಯದ ಹೊರಗೆ ಹೊತ್ತುಕೊಂಡು ಹೋಗಿರಿ,” ಎಂದನು.


“ಅರಣ್ಯದಲ್ಲಿ ದೇವದರ್ಶನ ಗುಡಾರ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ದೇವರು ಮೋಶೆಗೆ ಆಜ್ಞಾಪಿಸಿದಂತೆ, ಅವನಿಗೆ ತೋರಿಸಿದ ಮಾದರಿಯಂತೆ ಅದನ್ನು ರೂಪಿಸಲಾಗಿತ್ತು.


ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ಅವರ ದೇವರಾದ ಯೆಹೋವ ದೇವರು ನಾನೇ ಎಂದು ಅವರಿಗೆ ತಿಳಿಯುವುದು. ನಾನೇ ಅವರ ದೇವರಾದ ಯೆಹೋವ ದೇವರು.


ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳುವೆನು. ನನ್ನ ಪ್ರಾಣವು ನಿಮ್ಮನ್ನು ತಿರಸ್ಕರಿಸುವುದಿಲ್ಲ.


ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿಗಳನ್ನು, ಅರ್ಪಣೆಗಳನ್ನು, ಬೆಳೆಯ ದಶಮಾಂಶಗಳನ್ನು, ಯೆಹೋವ ದೇವರಿಗಾಗಿ ವಿಶೇಷ ಉಡುಗೊರೆಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.


ಯಾಜಕನಾಗಿರುವ ಎಲಿಯಾಜರನ ಪುತ್ರ ಫೀನೆಹಾಸನು ರೂಬೇನ್, ಗಾದ್ ಹಾಗೂ ಮನಸ್ಸೆಯ ಗೋತ್ರದವರಿಗೆ, “ನೀವು ಯೆಹೋವ ದೇವರಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಅವರು ನಮ್ಮ ಮಧ್ಯದಲ್ಲಿರುತ್ತಾರೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವ ದೇವರ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ,” ಎಂದನು.


ಅವರನ್ನು ಒಳಗೆ ಬರಮಾಡಿ, ಯೆಹೋವ ದೇವರೇ, ನಿಮ್ಮ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ ಯೆಹೋವ ದೇವರೇ, ನೀವು ವಾಸಿಸುವುದಕ್ಕೆ ಮಾಡಿಕೊಂಡಿರುವ ನಿಮ್ಮ ಸ್ವತ್ತಾಗಿರುವ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿರಿ.


ನಿಮ್ಮ ದೇವರಾದ ಯೆಹೋವ ದೇವರನ್ನು ಹುಡುಕಲು ನಿಮ್ಮ ಹೃದಯವನ್ನೂ, ನಿಮ್ಮ ಪ್ರಾಣವನ್ನೂ ಒಪ್ಪಿಸಿ, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ದೇವರ ಪರಿಶುದ್ಧ ಪಾತ್ರೆಗಳನ್ನು ಯೆಹೋವ ದೇವರ ನಾಮಕ್ಕಾಗಿ ಕಟ್ಟಲಾಗುವ ಆಲಯದೊಳಗೆ ತರುವ ಹಾಗೆ, ಎದ್ದು ಯೆಹೋವ ದೇವರಾದ ದೇವರಿಗೆ ಪರಿಶುದ್ಧ ಸ್ಥಳವನ್ನು ಕಟ್ಟಿಸಿರಿ,” ಎಂದನು.


ಇದಾದ ಮೇಲೆ ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ಧಿಗೊಳಿಸುವೆನು. ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.


ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಯೆಹೋವ ದೇವರಾದ ನಾನೇ ಇಸ್ರಾಯೇಲರನ್ನು ಪರಿಶುದ್ಧಗೊಳಿಸಿದೆನೆಂದು ಎಲ್ಲಾ ದೇಶದ ಜನಾಂಗಗಳು ಸಹ ತಿಳಿದುಕೊಳ್ಳುವರು.’ ”


ಅವರು ನನಗೆ, “ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ನನ್ನ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲರ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಎಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರದಿಂದಲೂ ಅವರ ಅರಸರ ಮರಣದ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ವಿಧಿಗಳ ಅರ್ಪಣೆಯಿಂದ ಅಪವಿತ್ರಗೊಳಿಸುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು