Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 25:22 - ಕನ್ನಡ ಸಮಕಾಲಿಕ ಅನುವಾದ

22 ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತನಾಡಿ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅಲ್ಲಿಯೇ ನಾನು ನಿಮಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಅಜ್ಞಾಶಾಸನಗಳನ್ನಿಟ್ಟಿರುವ ಮಂಜೂಷದ ಮೇಲಿನ ಎರಡು ಕೆರೂಬಿಗಳ ನಡುವೆಯೇ ನಾನಿದ್ದು ನಿನ್ನ ಸಂಗಡ ಮಾತಾಡುವೆನು. ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲ ವಿಷಯಗಳನ್ನು ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು; ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತಾಡಿ ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 25:22
24 ತಿಳಿವುಗಳ ಹೋಲಿಕೆ  

ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.


“ಸೇನಾಧೀಶ್ವರ ಯೆಹೋವ ದೇವರೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ.


ಮಂದೆಯಂತೆ ಯೋಸೇಫ್ಯರನ್ನು ನಡೆಸುವ ಇಸ್ರಾಯೇಲರ ಕುರುಬ ಆಗಿರುವ ದೇವರೇ, ಕಿವಿಗೊಡಿರಿ. ಕೆರೂಬಿಗಳ ಮಧ್ಯದಲ್ಲಿ ಆಸೀನವಾಗಿರುವ ದೇವರೇ ಪ್ರಕಾಶಿಸಿರಿ.


ಇದಲ್ಲದೆ ಹಿಜ್ಕೀಯನು ಯೆಹೋವ ದೇವರ ಮುಂದೆ ಪ್ರಾರ್ಥನೆಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವೊಬ್ಬರೇ ಭೂಮಿಯ ಸಮಸ್ತ ರಾಜ್ಯಗಳಿಗೆ ದೇವರಾಗಿದ್ದೀರಿ. ನೀವೇ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ.


ಕೆರೂಬಿಗಳ ಮಧ್ಯದಲ್ಲಿರುವ ಸೇನಾಧೀಶ್ವರ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬರಲು ಶೀಲೋವಿಗೆ ಜನರನ್ನು ಕಳುಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು.


ಅವುಗಳನ್ನು ದೇವದರ್ಶನ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಒಡಂಬಡಿಕೆಯ ಮಂಜೂಷದ ಮುಂದೆ ಇಡಬೇಕು.


ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನಿನ್ನ ಅಣ್ಣನಾದ ಆರೋನನು ಮಂಜೂಷದ ಮೇಲಿರುವ ಕರುಣಾಸನದ ಮುಂದಿರುವ ತೆರೆಯ ಒಳಗೆ ಮಹಾಪರಿಶುದ್ಧ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ, ಇಲ್ಲವಾದರೆ ಅವನು ಸಾಯುತ್ತಾನೆ, ಏಕೆಂದರೆ ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.


ಯೆಹೋವ ದೇವರು ಆಳಿಕೆ ಮಾಡುತ್ತಾರೆ. ರಾಷ್ಟ್ರಗಳು ನಡುಗಲಿ. ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ. ಭೂಮಿಯು ಕದಲಲಿ.


ಆ ಕೆರೂಬಿಗಳ ನಡುವೆ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು ತನ್ನ ಸಂಗಡ ಇದ್ದ ಸಮಸ್ತ ಜನರನ್ನು ಕರೆದುಕೊಂಡು, ಯೆಹೂದದ ಬಾಲಾ ಎಂಬಲ್ಲಿಗೆ ಹೊರಟನು.


ಅದರಲ್ಲಿ ಸ್ವಲ್ಪ ಪುಡಿಮಾಡಿ, ದೇವದರ್ಶನದ ಗುಡಾರದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇಡು. ಅದು ನಿಮಗೆ ಮಹಾಪರಿಶುದ್ಧವಾಗಿರಲಿ.


ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.


ಏಕೆಂದರೆ ಆ ದಿವಸಗಳಲ್ಲಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿದ್ದದರಿಂದಲೂ,


ಯೆಹೋವ ದೇವರೇ, ತಲತಲಾಂತರಗಳಲ್ಲಿ ನೀವು ನಮ್ಮ ವಾಸಸ್ಥಾನವಾಗಿದ್ದೀರಿ.


ಯೆಹೋವ ದೇವರು ಮೋಶೆಯನ್ನು ಕರೆದು, ದೇವದರ್ಶನದ ಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ,


ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.


ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ. “ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.


“ ‘ಬಲಿಪೀಠವನ್ನು ಮಣ್ಣಿನಿಂದ ಮಾಡಬೇಕು. ಅದರ ಮೇಲೆ ನಿಮ್ಮ ಸಮರ್ಪಣೆಗಳಾದ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಮೇಕೆಗಳನ್ನೂ ದನಗಳನ್ನೂ ಅರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.


ಯೆಹೋವ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿದ ಕೂಡಲೆ ಹೊರಟು ಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.


ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ಇಸ್ರಾಯೇಲರಿಗೆ ಮತ್ತು ಅವರ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರಬೇಕು.


ಆಗ ಕೆರೂಬಿಗಳ ನಡುವೆ ವಾಸವಾಗಿರುವ ಯೆಹೋವ ದೇವರ ಹೆಸರಿನಿಂದ ಕರೆಯಲಾದ ದೇವರ ಮಂಜೂಷವನ್ನು ತೆಗೆದುಕೊಂಡು ಬರಲು, ದಾವೀದನೂ, ಸಮಸ್ತ ಇಸ್ರಾಯೇಲರೂ ಯೆಹೂದಕ್ಕೆ ಸೇರಿದ ಕಿರ್ಯತ್ ಯಾರೀಮಿನ ಬಾಲಾ ಎಂಬಲ್ಲಿಗೆ ಹೋದರು.


ಎಫ್ರಾಯೀಮ್, ಬೆನ್ಯಾಮೀನ್, ಮನಸ್ಸೆಯರ ಮುಂದೆ ನಿಮ್ಮ ಪರಾಕ್ರಮವನ್ನು ತೋರಿಸಲು ಬಂದು ನಮ್ಮನ್ನು ರಕ್ಷಿಸಿರಿ.


ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವುದನ್ನು ಕೇಳಿದೆನು. ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು