Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 24:17 - ಕನ್ನಡ ಸಮಕಾಲಿಕ ಅನುವಾದ

17 ಯೆಹೋವ ದೇವರ ಮಹಿಮೆಯ ದೃಶ್ಯವು ಇಸ್ರಾಯೇಲರ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ದಹಿಸುವ ಅಗ್ನಿಯಂತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೆಹೋವನ ತೇಜಸ್ಸು ಬೆಟ್ಟದ ತುದಿಯಲ್ಲಿ ದಹಿಸುವ ಬೆಂಕಿಯಂತೆ ಇಸ್ರಾಯೇಲರಿಗೆ ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸರ್ವೇಶ್ವರನ ತೇಜಸ್ಸು ಬೆಟ್ಟದ ಶಿಖರದ ಮೇಲೆ ಪ್ರಜ್ವಲಿಸುವ ಬೆಂಕಿಯೋಪಾದಿಯಲ್ಲಿ ಇಸ್ರಯೇಲರಿಗೆ ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೆಹೋವನ ತೇಜಸ್ಸು ಬೆಟ್ಟದ ಶಿಖರದ ಮೇಲೆ ಪ್ರಜ್ವಲಿಸುವ ಬೆಂಕಿಯೋಪಾದಿಯಲ್ಲಿ ಇಸ್ರಾಯೇಲ್ಯರಿಗೆ ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 24:17
14 ತಿಳಿವುಗಳ ಹೋಲಿಕೆ  

ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”


ನೀವು ಮುಟ್ಟಬಹುದಾದ ಮತ್ತು ಬೆಂಕಿಹತ್ತಿದಂಥ ಬೆಟ್ಟಕ್ಕೂ ಮಬ್ಬಿಗೂ ಕತ್ತಲೆಗೂ ಬಿರುಗಾಳಿಗೂ


ದೇವರು ನಿಮ್ಮ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತಮ್ಮ ಸ್ವರವನ್ನು ನಿಮಗೆ ಕೇಳಮಾಡಿದರು, ಭೂಮಿಯ ಮೇಲೆ ತಮ್ಮ ದೊಡ್ಡ ಬೆಂಕಿಯನ್ನು ನಿಮಗೆ ತೋರಿಸಿದರು. ನೀವು ಬೆಂಕಿಯೊಳಗಿಂದ ಅವರ ಮಾತುಗಳನ್ನು ಕೇಳಿದಿರಿ.


ಆಗ ಯೆಹೋವ ದೇವರ ದೂತನು ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ನೋಡಿದಾಗ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು ಆದಾಗ್ಯೂ ಪೊದೆಯು ಸುಟ್ಟು ಹೋಗಲಿಲ್ಲ.


ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ದಹಿಸುವ ಅಗ್ನಿಯೂ, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರೂ ಆಗಿದ್ದಾರೆ.


ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.


ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಲೋಹವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆನು.


ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು? ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು? ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ; ಬಂಡೆಗಳು ಆತನ ಮುಂದೆ ಕೆಡವಲಾಗಿವೆ.


ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.


ಮಳೆ ಬೀಳುವ ದಿನದಲ್ಲಿ ಮೇಘದಲ್ಲಿ ಮಳೆಬಿಲ್ಲು ಹೇಗೆ ಕಾಣಿಸುವುದೋ ಹಾಗೆ ಅದರ ಸುತ್ತಲೂ ಆ ಪ್ರಕಾಶವು ಕಾಣಿಸಿತು. ಇದೇ ಯೆಹೋವ ದೇವರ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ಕಂಡಾಗ ನಾನು ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು ಮತ್ತು ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.


ಮೂರನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ. ಏಕೆಂದರೆ ಮೂರನೆಯ ದಿನದಲ್ಲಿ ಯೆಹೋವ ದೇವರು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವರು.


ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.


ಅವರ ಸನ್ನಿಧಿಯ ಪ್ರಕಾಶದಿಂದ ಮಿಂಚಿನ ಜ್ವಾಲೆಗಳು ಹೊರಹೊಮ್ಮಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು