Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 24:1 - ಕನ್ನಡ ಸಮಕಾಲಿಕ ಅನುವಾದ

1 ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಹಾಗೂ ಇಸ್ರಾಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಯೆಹೋವನ ಬಳಿಗೆ ಬಂದು ದೂರದಲ್ಲಿ ನಿಂತು ಅಡ್ಡಬಿದ್ದು ಆರಾಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರ ಸ್ವಾಮಿ ಮೋಶೆಗೆ, “ನೀನು, ಆರೋನ, ನಾದಾಬ್ ಹಾಗೂ ಅಬೀಹೂ ಮತ್ತು ಇಸ್ರಯೇಲರ ಹಿರಿಯರಲ್ಲಿ ಎಪ್ಪತ್ತು ಮಂದಿ ಈ ಬೆಟ್ಟವನ್ನು ಹತ್ತಿ ಸರ್ವೇಶ್ವರನಾದ ನನ್ನ ಬಳಿಗೆ ಬಂದು ದೂರದಲ್ಲೆ ನಿಂತು ಅಡ್ಡಬೀಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೋವನು ಮೋಶೆಗೆ - ನೀನೂ ಆರೋನ ನಾದಾಬ್ ಅಬೀಹೂ ಎಂಬವರೂ ಇಸ್ರಾಯೇಲ್ಯರ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವನ ಬಳಿಗೆ ಬಂದು ದೂರದಲ್ಲಿ ನಿಂತು ಅಡ್ಡಬೀಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 24:1
20 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಮೋಶೆಗೆ, “ಜನರ ನಾಯಕರೆಂದೂ, ಹಿರಿಯರೆಂದೂ, ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂತಹ ಇಸ್ರಾಯೇಲರ ಹಿರಿಯರೊಳಗಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ, ಅವರನ್ನು ದೇವದರ್ಶನದ ಗುಡಾರದ ಕಡೆಗೆ ಕರೆದುಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.


ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬಳನ್ನು ಮದುವೆಯಾದನು. ಆಕೆಯು ಅವನಿಗೆ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಇವರನ್ನು ಹೆತ್ತಳು.


“ನನಗೆ ಯಾಜಕ ಸೇವೆ ಮಾಡುವುದಕ್ಕೆ ನೀನು ಇಸ್ರಾಯೇಲರಿಂದ ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಎಂಬುವರನ್ನು ನಿನ್ನ ಹತ್ತಿರ ಬರಮಾಡಬೇಕು.


ಆಗ ಯೆಹೋವ ದೇವರು ಅವನಿಗೆ, “ನೀನು ಇಳಿದು ಹೋಗಿ, ಆರೋನನನ್ನು ಕರೆದುಕೊಂಡು ಇಲ್ಲಿಗೆ ಬಾ. ಆದರೆ ಯೆಹೋವ ದೇವರಿಂದ ಸಂಹಾರವಾಗದಂತೆ ಯಾಜಕರೂ ಜನರೂ ಮುಂದೆ ಯೆಹೋವ ದೇವರ ಬಳಿಗೆ ಬಾರದೇ ಇರಲಿ,” ಎಂದರು.


ಆ ಎಪ್ಪತ್ತೆರಡು ಮಂದಿ ಸಂತೋಷದಿಂದ ಹಿಂತಿರುಗಿ, “ಕರ್ತದೇವರೇ, ನಿಮ್ಮ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು,” ಎಂದರು.


ಇವುಗಳಾದ ಮೇಲೆ ಕರ್ತದೇವರು ಬೇರೆ ಎಪ್ಪತ್ತೆರಡು ಮಂದಿಯನ್ನು ಸಹ ನೇಮಿಸಿ ತಾವೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತಮಗೆ ಮುಂದಾಗಿ ಕಳುಹಿಸಿದರು.


ಇಸ್ರಾಯೇಲಿನ ಮನೆತನದವರಲ್ಲಿ ಎಪ್ಪತ್ತು ಮಂದಿ ಹಿರಿಯರೂ, ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿದ್ದರು. ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾರತಿ ಇತ್ತು. ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.


ಅಮ್ರಾಮನ ಪುತ್ರರು: ಆರೋನನು, ಮೋಶೆಯು, ಮಿರ್ಯಾಮಳು. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.


ಬೆಳಿಗ್ಗೆ ನೀನು ಸಿದ್ಧನಾಗಿ ಸೀನಾಯಿ ಬೆಟ್ಟವನ್ನೇರಿ, ಆ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು.


ಮೋಶೆ ಬೆಟ್ಟವನ್ನೇರಿ ಹೋದಾಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.


ಆಗ ಮೋಶೆ, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಮೇಲಕ್ಕೆ ಹೋದರು.


ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.


ಯೆಹೋವ ದೇವರು ಸೀನಾಯಿ ಬೆಟ್ಟದ ತುದಿಯಲ್ಲಿ ಇಳಿದುಬಂದು ಮೋಶೆಯನ್ನು ಬೆಟ್ಟದ ತುದಿಗೆ ಕರೆದರು. ಮೋಶೆಯು ಮೇಲೆ ಹೋದನು.


ಯೆಹೋವ ದೇವರು ಮೋಶೆಗೆ, “ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ದಟ್ಟವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ,” ಎಂದರು. ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ತಿಳಿಸಿದನು.


ಆಗ ದೇವರು ಅವನಿಗೆ, “ಇಲ್ಲಿ ಸಮೀಪಕ್ಕೆ ಬರಬೇಡ, ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ,” ಎಂದರು.


ಯಾಕೋಬನ ವಂಶಜರು ಒಟ್ಟು ಎಪ್ಪತ್ತು ಮಂದಿ ಆದರೆ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.


ಮೋಶೆ ಒಬ್ಬನೇ ಯೆಹೋವ ದೇವರ ಸಮೀಪಕ್ಕೆ ಬರಲಿ. ಬೇರೆ ಯಾರೂ ಸಮೀಪಕ್ಕೆ ಬರಬಾರದು. ಜನರೂ ಅವನ ಸಂಗಡ ಮೇಲೇರಿ ಬರಬಾರದು,” ಎಂದು ಹೇಳಿದರು.


ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಜ್ಞಾನಿಗಳನ್ನು ಕರೆಯಿಸಿ, ಒಂದೊಂದು ಗೋತ್ರದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು