ವಿಮೋಚನಕಾಂಡ 23:9 - ಕನ್ನಡ ಸಮಕಾಲಿಕ ಅನುವಾದ9 “ಪರದೇಶಿಯರನ್ನು ಪೀಡಿಸಬಾರದು. ಏಕೆಂದರೆ ಈಜಿಪ್ಟ್ ದೇಶದಲ್ಲಿ ನೀವೂ ಪರದೇಶಿಗಳಾದ್ದಿರಷ್ಟೇ, ಅಂಥವರ ಮನೋವ್ಯಥೆಯನ್ನು ನಿಮಗೆ ತಿಳಿದಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಪರದೇಶದವನಿಗೆ ಉಪದ್ರವವನ್ನು ಕೊಡಬಾರದು. ನೀವೂ ಐಗುಪ್ತದೇಶದಲ್ಲಿ ಪರದೇಶದವರಾಗಿದ್ದೀರಷ್ಟೇ. ಅಂಥವರ ಮನೋವ್ಯಥೆಯನ್ನು ತಿಳಿದವರಾಗಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ಪರದೇಶೀಯರನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರಲ್ಲವೆ? ಅಂಥವರ ಮನೋವ್ಯಥೆ ನಿಮಗೆ ಗೊತ್ತೇ ಇದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಪರದೇಶಸ್ಥರಿಗೆ ಉಪದ್ರವಕೊಡಬಾರದು. ನೀವೂ ಐಗುಪ್ತದೇಶದಲ್ಲಿ ಪರದೇಶಸ್ಥರಾಗಿದ್ದಿರಷ್ಟೆ; ಅಂಥವರ ಮನೋವ್ಯಥೆಯನ್ನು ತಿಳಿದೇ ಇರುತ್ತೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 “ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಅಧ್ಯಾಯವನ್ನು ನೋಡಿ |