Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 23:19 - ಕನ್ನಡ ಸಮಕಾಲಿಕ ಅನುವಾದ

19 “ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಿಮ್ಮ ಬೆಳೆಯ ಪ್ರಥಮಫಲದಲ್ಲಿ ಅತಿ ಶ್ರೇಷ್ಠವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಹೋತ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ನಿಮ್ಮ ಬೆಳೆಯ ಪ್ರಥಮ ಫಲದಲ್ಲಿ ಅತಿಶ್ರೇಷ್ಠವಾದುದ್ದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು. "ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಿಮ್ಮ ಬೆಳೆಯ ಪ್ರಥಮಫಲದಲ್ಲಿ ಉತ್ಕೃಷ್ಟವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತರಬೇಕು. “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 23:19
20 ತಿಳಿವುಗಳ ಹೋಲಿಕೆ  

“ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಅತ್ಯುತ್ತಮವಾದದ್ದನ್ನು ನಿಮ್ಮ ಯೆಹೋವ ದೇವರ ಆಲಯಕ್ಕೆ ತರಬೇಕು. “ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು,” ಎಂದು ಹೇಳಿದರು.


ತಾನೇ ಸತ್ತ ಯಾವುದನ್ನೂ ತಿನ್ನಬಾರದು. ನಿಮ್ಮ ಊರಲ್ಲಿರುವ ಅನ್ಯನಿಗೆ ತಿನ್ನಲು ಕೊಡಬಹುದು ಇಲ್ಲವೆ ಪರದೇಶದವನಿಗೆ ಮಾರಬಹುದು. ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಕುದಿಸಬಾರದು.


ಹೀಗಿರುವುದರಿಂದ ಯೆಹೋವ ದೇವರೇ, ನೀವು ನಮಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿದ್ದೇವೆ,” ಎಂದು ಹೇಳಬೇಕು. ಆಗ ಅದನ್ನು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿಟ್ಟು, ಅವರನ್ನು ಆರಾಧಿಸಬೇಕು.


ಯೆಹೋವ ದೇವರ ಆಲಯಕ್ಕೆ ಪ್ರತಿ ವರ್ಷದಲ್ಲಿಯೂ ನಮ್ಮ ಭೂಮಿಯ ಫಲಗಳಿಂದ ಪ್ರಥಮ ಫಲಗಳನ್ನು ತರುವುದಕ್ಕೂ,


“ನಿನ್ನ ಧಾನ್ಯಗಳನ್ನೂ ಪಾನಗಳನ್ನೂ ನನಗೆ ಅರ್ಪಿಸುವುದಕ್ಕೆ ತಡಮಾಡಬೇಡ. “ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಮೀಸಲಾಗಿಡಬೇಕು.


ಆಗ ನಿಮ್ಮ ದೇಶದಿಂದ ನೀವು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಬುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವದಕ್ಕೆ ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.


ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು.


ಆದರೆ ಈಗ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದೇ ಇದ್ದಾರೆ. ನಿದ್ರೆ ಹೋದವರಲ್ಲಿ ಪ್ರಥಮಫಲವಾಗಿದ್ದಾರೆ.


ಜನಾಂಗಗಳ ಪದ್ಧತಿಗಳು ವ್ಯರ್ಥವಾಗಿವೆ. ಹೇಗೆಂದರೆ, ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ. ಅದು ಕೊಡಲಿಯಿಂದ ಕಡಿದ ಬಡಿಗೆಯವನ ಕೈಕೆಲಸವೇ.


ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ.


ನಿನ್ನ ಆಸ್ತಿಯಿಂದಲೂ ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.


“ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.


ನೀವು ಮತ್ತು ನಿಮ್ಮ ಸಂತತಿಯವರು ನಿಮ್ಮ ಕಣದಿಂದ ಮಾಡಿದ ಪ್ರಥಮ ರೊಟ್ಟಿಯನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು.


ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ನಮ್ಮ ಪುತ್ರರಲ್ಲಿಯೂ, ನಮ್ಮ ಪಶುಗಳಲ್ಲಿಯೂ ಚೊಚ್ಚಲಾದವುಗಳನ್ನು; ನಮ್ಮ ದನಗಳಲ್ಲಿಯೂ, ಮಂದೆಗಳಲ್ಲಿಯೂ ಚೊಚ್ಚಲಾದವುಗಳನ್ನು, ನಮ್ಮ ದೇವರ ಆಲಯಕ್ಕೆ ತಂದು, ನಮ್ಮ ದೇವರ ಆಲಯದಲ್ಲಿ ಸೇವಿಸುವ ಯಾಜಕರಿಗೆ ಕೊಡುತ್ತೇವೆ;


ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕನದ್ದಾಗಬೇಕು. ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ನೀವು ಯಾಜಕರಿಗೆ ಕೊಡತಕ್ಕದ್ದು.


“ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಒಟ್ಟು ಉದ್ದ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.


ಅವರು ಅದರಲ್ಲಿ ಏನನ್ನೂ ಮಾರಬಾರದು, ಏನನ್ನೂ ಬದಲಾಯಿಸಬಾರದು. ದೇಶದ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವ ದೇವರಿಗೆ ಪರಿಶುದ್ಧವಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು