ವಿಮೋಚನಕಾಂಡ 23:13 - ಕನ್ನಡ ಸಮಕಾಲಿಕ ಅನುವಾದ13 “ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಗೊಳ್ಳಬೇಕು. ಬೇರೆ ದೇವರುಗಳ ಹೆಸರನ್ನು ಎತ್ತಬೇಡ. ಅದನ್ನು ಉಚ್ಚರಿಸಲೂ ಬೇಡ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನಾನು ನಿಮಗೆ ಹೇಳಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಕೊಳ್ಳಬೇಕು. ಅನ್ಯ ದೇವರುಗಳ ಹೆಸರುಗಳನ್ನು ಸ್ಮರಿಸಬಾರದು, ಅವುಗಳನ್ನು ಉಚ್ಚರಿಸಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 “ನಾನು ನಿಮಗೆ ವಿಧಿಸಿದ್ದನ್ನೆಲ್ಲ ಜಾಗರೂಕತೆಯಿಂದ ಅನುಸರಿಸಿ ನಡೆಯಿರಿ. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಬೇಡಿ, ಉಚ್ಚರಿಸಲೂ ಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನಾನು ನಿಮಗೆ ಹೇಳಿದ್ದನ್ನೆಲ್ಲಾ ಜಾಗರೂಕತೆಯಾಗಿ ಕೈಕೊಳ್ಳಬೇಕು. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಲೂ ಕೂಡದು; ಉಚ್ಚರಿಸಲೂ ಕೂಡದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು. ಅಧ್ಯಾಯವನ್ನು ನೋಡಿ |