ವಿಮೋಚನಕಾಂಡ 22:9 - ಕನ್ನಡ ಸಮಕಾಲಿಕ ಅನುವಾದ9 ಎತ್ತು, ಕತ್ತೆ, ಕುರಿ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದುಹೋದ ಯಾವ ತರದ ವಸ್ತುಗಳ ವಿಷಯದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು, ‘ಇದು ತನ್ನದೆಂದು,’ ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ನ್ಯಾಯಾಧಿಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸುವರೋ, ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದರ ವಿಷಯದಲ್ಲಿಯೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆಗಳ ವಿಷಯವಾದರೂ, ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ, ಇಬ್ಬರು ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾನೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 “ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದು ವಿಷಯದಲ್ಲೂ, ಅದು ಎತ್ತು, ಕತ್ತೆ, ಕುರಿ ಅಥವಾ ಬಟ್ಟೆ ವಿಷಯವಾದರೂ ಸರಿಯೇ ಕಳೆದುಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ ಸರಿಯೇ, ಇಬ್ಬರೂ ಅದು ತಮ್ಮದೆಂದು ಹೇಳುವಾಗ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುತ್ತಾರೋ ಅವನು ಆ ಮತ್ತೊಬ್ಬನಿಗೆ ಎರಡರಷ್ಟು ಕೊಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ವಂಚನೆಯಾಯಿತೆಂಬ ಅನುಮಾನ ಹುಟ್ಟಿದ ಪ್ರತಿಯೊಂದು ವಿಷಯದಲ್ಲಿಯೂ, ಅದು ಎತ್ತು ಕತ್ತೆ ಕುರಿ ಬಟ್ಟೆಗಳ ವಿಷಯವಾದರೂ ಸರಿಯೇ ಕಳಕೊಂಡ ಬೇರೆ ಯಾವ ವಸ್ತುವಿನ ವಿಷಯವಾದರೂ ಸರಿಯೇ [ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು] ಇದು ತನ್ನದೆಂದು ಹೇಳುವ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ದೇವರ ಸನ್ನಿಧಿಗೆ ಬರಬೇಕು. ದೇವರು ಯಾರನ್ನು ದ್ರೋಹಿಯೆಂದು ನಿರ್ಣಯಿಸುವನೋ ಅವನು ಆ ಮತ್ತೊಬ್ಬನಿಗೆ ಎರಡರಷ್ಟು ಕೊಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 “ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು. ಅಧ್ಯಾಯವನ್ನು ನೋಡಿ |
ಇದಲ್ಲದೆ ಜೀವಹತ್ಯ, ನ್ಯಾಯಕ್ಕೂ, ಆಜ್ಞೆಗೂ, ನಿಯಮಗಳಿಗೂ, ನ್ಯಾಯತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ, ರೌದ್ರವು ನಿಮ್ಮ ಮೇಲೆಯೂ, ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ. ಆಗ ನೀವು ಅಪರಾಧವಿಲ್ಲದವರಾಗಿರುವಿರಿ.