Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 19:1 - ಕನ್ನಡ ಸಮಕಾಲಿಕ ಅನುವಾದ

1 ಇಸ್ರಾಯೇಲರು ಈಜಿಪ್ಟನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲರು ಈಜಿಪ್ಟ್ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಮರುಭೂಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಅರಣ್ಯಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇಸ್ರೇಲರು ಈಜಿಪ್ಟಿನಿಂದ ಹೊರಟ ಮೂರನೆಯ ತಿಂಗಳಲ್ಲಿ ಸೀನಾಯ್ ಮರುಭೂಮಿಯನ್ನು ತಲುಪಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 19:1
16 ತಿಳಿವುಗಳ ಹೋಲಿಕೆ  

ಇಸ್ರಾಯೇಲರ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣಮಾಡಿ, ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ, ಸೀನಾಯಿ ಪರ್ವತಕ್ಕೂ ಮಧ್ಯೆ ಇರುವ ಸೀನ್ ಮರುಭೂಮಿಗೆ ಬಂದರು.


ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ತರುವಾಯ ಸಂಜೆಯಲ್ಲಿ ಇಸ್ರಾಯೇಲಿನ ಜನಾಂಗದವರೆಲ್ಲರೂ ಅವುಗಳನ್ನು ವಧಿಸಬೇಕು.


ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.


“ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರಬೇಕು.


ಆಗ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ಜನರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದ ಮೇಲೆ ದೇವರಾದ ನನ್ನನ್ನು ಆರಾಧಿಸುವಿರಿ. ನಾನು ನಿನ್ನನ್ನು ಕಳುಹಿಸಿದವನು ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.


ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.


“ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.


ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ ಹೇಳಿದ್ದೇನೆಂದರೆ:


ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮಗೆ, “ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು,


ನೀವು ಹೋರೇಬಿನಲ್ಲಿ ಯೆಹೋವ ದೇವರ ಮುಂದೆ ನಿಂತ ದಿವಸದಂದು ದೇವರು ನನಗೆ, “ಜನರನ್ನು ನನಗಾಗಿ ಕೂಡಿಸು, ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿರುವುದನ್ನು ಕಲಿತು, ತಮ್ಮ ಮಕ್ಕಳಿಗೂ ಬೋಧಿಸುವಂತೆ ನಾನು ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡುವೆನು,” ಎಂದರು.


ಆದ್ದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರಿ. ಯೆಹೋವ ದೇವರು ಹೋರೇಬಿನಲ್ಲಿ ಬೆಂಕಿಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿಲ್ಲವಲ್ಲ.


ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಂಡರು.


ಆದ್ದರಿಂದ ನಾನು ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆತಂದು, ಮರುಭೂಮಿಯೊಳಗೆ ಅವರನ್ನು ಬರಮಾಡಿದೆನು.


ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು:


ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು