Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 18:26 - ಕನ್ನಡ ಸಮಕಾಲಿಕ ಅನುವಾದ

26 ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ, ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ, ಸುಲಭವಾದ ವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಇವರು ಸದಾ ಜನರಿಗೆ ನ್ಯಾಯತೀರಿಸುವವರಾದರು. ಜಟಿಲವಾದ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸುಲಭವಾದುವುಗಳನ್ನು ಅವರೇ ತೀರಿಸುತ್ತಾ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿಣವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ ಸುಲಭ ವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಈ ಅಧಿಕಾರಿಗಳು ಜನರ ನ್ಯಾಯಾಧಿಪತಿಗಳಾಗಿದ್ದರು. ಜನರು ತಮ್ಮ ವ್ಯಾಜ್ಯಗಳನ್ನು ಈ ಅಧಿಕಾರಿಗಳ ಬಳಿಗೆ ಯಾವಾಗಲೂ ತರಬಹುದಾಗಿತ್ತು. ಮೋಶೆಯು ಬಹು ಪ್ರಾಮುಖ್ಯವಾದ ವ್ಯಾಜ್ಯಗಳನ್ನು ಮಾತ್ರ ತೀರ್ಮಾನಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 18:26
8 ತಿಳಿವುಗಳ ಹೋಲಿಕೆ  

ಇವರು ಎಲ್ಲಾ ಕಾಲಗಳಲ್ಲಿಯೂ ಜನರಿಗೆ ನ್ಯಾಯತೀರಿಸಲಿ. ಆದರೆ ದೊಡ್ಡ ವ್ಯಾಜ್ಯಗಳನ್ನೆಲ್ಲಾ ನಿನ್ನ ಮುಂದೆ ತಂದು, ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಆಗ ನಿನಗೆ ಸುಲಭವಾಗುವುದು. ಅವರೂ ನಿನ್ನ ಸಂಗಡ ಭಾರವನ್ನು ಹೊರುವರು.


ದರಿದ್ರರಿಗೆ ನಾನು ತಂದೆಯಾಗಿದ್ದೆನು; ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.


ಶೆಬದ ರಾಣಿಯು ಯೆಹೋವ ದೇವರ ನಾಮದ ಮಹತ್ತಿನಿಂದ ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು.


ನಿಮ್ಮ ಊರುಗಳಲ್ಲಿ ಉಂಟಾದ ವಿವಾದಗಳ ವಿಷಯವಾಗಿ ಅಂದರೆ, ಕೊಲೆಯ ವ್ಯಾಜ್ಯವಾಗಲಿ, ವಾದಿ ಪ್ರತಿವಾದ ವ್ಯಾಜ್ಯವಾಗಲಿ, ಹೊಡೆದಾಟದ ವ್ಯಾಜ್ಯವಾಗಲಿ, ನಿಮಗೆ ನ್ಯಾಯತೀರಿಸುವುದು ಕಷ್ಟವಾದರೆ, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.


ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ಮಾಡಬೇಡಿರಿ. ಹಿರಿಯನನ್ನು ಹೇಗೋ ಹಾಗೆಯೇ ಕಿರಿಯನನ್ನು ಕೇಳಬೇಕು. ಯಾವ ಮನುಷ್ಯನಿಗೂ ಹೆದರಬೇಡಿರಿ. ಆದರೆ ನ್ಯಾಯ ತೀರ್ವಿಕೆಯು ದೇವರದೇ. ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ, ನಾನು ಅದನ್ನು ತೀರಿಸುವೆನು,” ಎಂದು ಹೇಳಿದೆ.


ಇಸ್ರಾಯೇಲ್ ಸ್ತ್ರೀಯ ಮಗನು ಯೆಹೋವ ದೇವರ ನಾಮವನ್ನು ದೂಷಿಸಿ, ಶಪಿಸಿದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು. ಅವನ ತಾಯಿಯ ಹೆಸರು ಶೆಲೋಮಿತ್. ಇವಳು ದಾನ್ ಕುಲದ ದಿಬ್ರೀಯನ ಮಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು