Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 18:18 - ಕನ್ನಡ ಸಮಕಾಲಿಕ ಅನುವಾದ

18 ನೀನೂ, ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ. ಏಕೆಂದರೆ ಇದು ನಿನಗೆ ಬಹು ಭಾರ. ನೀನೊಬ್ಬನೇ ಇದನ್ನು ಮಾಡಲಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಈ ಕೆಲಸ ಬಹಳ ಕಷ್ಟವಾದದ್ದು. ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನು ನಿನ್ನ ಸಂಗಡ ಇರುವ ಈ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಈ ಕೆಲಸ ಬಹು ಕಷ್ಟಕರವಾದುದು; ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನೂ ನಿನ್ನ ಈ ಜನರೂ ಖಂಡಿತವಾಗಿ ಬಳಲಿಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಈ ಕೆಲಸ ಬಹು ಕಷ್ಟವಾದದ್ದು; ನೀನೊಬ್ಬನೇ ಅದನ್ನು ನಡಿಸಲಾರಿ; ನೀನೂ ನಿನ್ನ ಸಂಗಡ ಇರುವ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಈ ಕೆಲಸ ನೀನೊಬ್ಬನೇ ಮಾಡುವುದು ಬಹಳ ಪ್ರಯಾಸಕರ. ಇದು ನಿನ್ನನ್ನೂ ಆಯಾಸಗೊಳಿಸುತ್ತದೆ; ಜನರನ್ನೂ ಆಯಾಸಗೊಳಿಸುತ್ತದೆ. ನಿನ್ನೊಬ್ಬನಿಂದಲೇ ಈ ಕೆಲಸವನ್ನು ಮಾಡಲಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 18:18
7 ತಿಳಿವುಗಳ ಹೋಲಿಕೆ  

ಅವನು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಹಾಗಿದ್ದನು. ನೀವು ನನಗೆ ಮಾಡಲು ಸಾಧ್ಯವಾಗದೆ ಹೋದ ಸಹಾಯವನ್ನು ತಾನೇ ಪೂರ್ತಿ ಮಾಡುವುದಕ್ಕಾಗಿ, ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಗುರಿಪಡಿಸಿಕೊಂಡನು.


ನಾನಂತೂ ನನಗಿರುವುದೆಲ್ಲವನ್ನೂ ನಿಮ್ಮ ಆತ್ಮಗಳಿಗೋಸ್ಕರ ಬಹು ಸಂತೋಷದಿಂದ ವೆಚ್ಚಮಾಡುತ್ತೇನೆ. ನನ್ನನ್ನು ಕೂಡ ನಿಮಗೋಸ್ಕರ ವೆಚ್ಚಮಾಡಲು ಸಿದ್ಧನಾಗಿದ್ದೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?


ಮೋಶೆಯ ಮಾವನು ಅವನಿಗೆ, “ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು