Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 18:16 - ಕನ್ನಡ ಸಮಕಾಲಿಕ ಅನುವಾದ

16 ಅವರಿಗೆ ಏನಾದರೂ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಹಾಗೆಯೇ ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆ ಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅವರಲ್ಲಿ ವ್ಯಾಜ್ಯವೇನಾದರು ಉಂಟಾದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆ ಮಾಡಿ, ಅವರಿಗೆ ನ್ಯಾಯ ತೀರಿಸಿ, ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ,” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ; ನಾನು ವಿಚಾರಣೆಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅವರೊಳಗೆ ವ್ಯಾಜ್ಯವಿದ್ದರೆ ಅವರು ನನ್ನ ಬಳಿಗೆ ಬರುತ್ತಾರೆ. ಯಾವನು ನ್ಯಾಯವಂತನೆಂದು ನಾನು ತೀರ್ಮಾನಿಸುತ್ತೇನೆ. ಈ ರೀತಿಯಾಗಿ ನಾನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 18:16
20 ತಿಳಿವುಗಳ ಹೋಲಿಕೆ  

ಆಗ ಮೋಶೆ ಹಿರಿಯರಿಗೆ, “ನಾವು ನಿಮ್ಮ ಬಳಿಗೆ ತಿರುಗಿ ಬರುವವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರಿ. ಆರೋನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿಗಾದರೂ ವ್ಯಾಜ್ಯವಿದ್ದರೆ ಅವರ ಬಳಿಗೆ ಹೋಗಲಿ,” ಎಂದನು.


ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ, ನ್ಯಾಯವಿಚಾರಣೆಗಾಗಿ ಕರ್ತದೇವರ ಜನರ ಮುಂದೆ ಹೋಗದೆ, ಭಕ್ತಿಹೀನರ ಮುಂದೆ ಹೋಗುವುದಕ್ಕೆ ಧೈರ್ಯವಿದೆಯೋ?


ಆಗ ಅಬ್ಷಾಲೋಮನು ಅವನಿಗೆ, “ನೋಡು ನಿನ್ನ ಕಾರ್ಯವು ಒಳ್ಳೆಯದೂ, ನ್ಯಾಯವಾದದದ್ದೂ ಆಗಿದೆ. ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವುದಕ್ಕೆ ಯಾವನೂ ಇಲ್ಲ,” ಅನ್ನುವನು.


ಮೋಶೆಯು ಇಸ್ರಾಯೇಲರನ್ನೆಲ್ಲಾ ಕರೆದು ಅವರಿಗೆ ಹೀಗೆ ಹೇಳಿದನು: ಇಸ್ರಾಯೇಲರೇ, ನಾನು ಈ ಹೊತ್ತು ನೀವು ಕೇಳುವಂತೆ ಹೇಳುವ ನಿಯಮಗಳನ್ನೂ, ನ್ಯಾಯಗಳನ್ನೂ ಕೇಳಿರಿ. ಇವುಗಳನ್ನು ಕಲಿತು ಕೈಗೊಂಡು ನಡೆಯಬೇಕು.


ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಯೆಹೋವ ದೇವರು ನನಗೆ ಆಜ್ಞಾಪಿಸಿದ ಆಜ್ಞಾವಿಧಿಗಳನ್ನೂ ನಿಮಗೆ ಬೋಧಿಸಿದ್ದೇನೆ.


ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.


“ಒಂದು ವೇಳೆ ನನಗೂ ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ,


ಇದಲ್ಲದೆ ನಾನು ನಿಮಗೋಸ್ಕರ ಪ್ರಾರ್ಥನೆ ಮಾಡದೆ, ಯೆಹೋವ ದೇವರಿಗೆ ವಿರೋಧವಾಗಿ ಮಾಡುವ ಪಾಪವು ನನಗೆ ದೂರವಾಗಿರಲಿ. ಉತ್ತಮವಾದ, ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.


ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.


ಆಗ ಯೆಹೋವ ದೇವರು ಮೋಶೆಗೆ, “ಆ ಮನುಷ್ಯನು ಖಂಡಿತವಾಗಿಯೂ ಸಾಯಲೇಬೇಕು, ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು,” ಎಂದರು.


ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ಶಪಿಸುವವನು, ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.


ಸುಳ್ಳಿನ ವಿಷಯಗಳಿಂದ ನೀವು ದೂರವಿರಬೇಕು. ನಿರಪರಾಧಿ, ನೀತಿವಂತ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಬಾರದು. ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.


ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಹಿಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡುತ್ತಿದ್ದರು. ತಪ್ಪು ಮಾಡಿದವನಿಗೆ ಮೋಶೆ, “ಏಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ?” ಎಂದನು.


ಮೋಶೆಯ ಮಾವನು ಅವನಿಗೆ, “ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ,


ಇದಲ್ಲದೆ ಜೀವಹತ್ಯ, ನ್ಯಾಯಕ್ಕೂ, ಆಜ್ಞೆಗೂ, ನಿಯಮಗಳಿಗೂ, ನ್ಯಾಯತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ, ರೌದ್ರವು ನಿಮ್ಮ ಮೇಲೆಯೂ, ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ. ಆಗ ನೀವು ಅಪರಾಧವಿಲ್ಲದವರಾಗಿರುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು